ಹುಲಿ ಕಣ್ಣಿನ ಹೆಣ್ಣು ಪಪ್ಪು ದೇವಿ ಬಗ್ಗೆ ಗೊತ್ತಾ? ಈಕೆ ಮಗಳಿಗೂ ಇವೆ ಹುಲಿ ಕಣ್ಣು

Published : Feb 10, 2026, 02:24 PM IST
pappu devi

ಸಾರಾಂಶ

ಹುಲಿ ಕಣ್ಣಿನ ಮಹಿಳೆ ಪಪ್ಪು ದೇವಿ (pappu devi) ತನ್ನ ಕಣ್ಣುಗಳ ಮೂಲಕವೇ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದ ಹೆಣ್ಣುಮಗಳು. ವಿಶೇಷ ಅಂದರೆ ಈಗ ಈಕೆಯ ಮಗಳೂ ಸುದ್ದಿಯಲ್ಲಿದ್ದಾಳೆ. ಆಕೆಗೂ ಅಮ್ಮನಂಥಾ ಹುಲಿ ಕಣ್ಣುಗಳಿವೆ!

ಸದ್ಯ ಎಲ್ಲೆಲ್ಲೂ ಎಐ ಮತ್ತು ಇಂಟರ್‌ನೆಟ್‌ ಹವಾ. ಸೋಷಲ್‌ ಮೀಡಿಯಾ ಅನ್ನೋದು ಎಲ್ಲೋ ಇದ್ದವರನ್ನೂ ದೊಡ್ಡ ಎತ್ತರಕ್ಕೆ ಏರಿಸಿಬಿಡುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಕುಂಭಮೇಳದ ಮೋನಲಿಸ. ಮಧ್ಯ ಪ್ರದೇಶದ ಇಂಧೋರದ ಮೋನಲಿಸ ಭೋಸ್ಲೆ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ, ಜಪಮಾಲೆ, ಹೂವು ಮಾರಾಟ ಮಾಡುತ್ತಿದ್ದರು. ಕುಂಭಮೇಳಕ್ಕೆ ಭೇಟಿ ನೀಡಿದ ಫೋಟೊಗ್ರಾಫರ್ ಒಬ್ಬರು ಇವರ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ ಆ ಚಿತ್ರ ವೈರಲ್ ಆಯ್ತು. ಇವರ ಅಂದಕ್ಕೆ ಜನ ಮಾರುಹೋದರು. ಮೊನಲಿಸ ಭೋಂಸ್ಲೆಗೆ ಕುಂಭಮೇಳ ಮೊನಲಿಸ ಎಂಬ ಹೆಸರು ಬಿತ್ತು. ಚಿತ್ರ ವೈರಲ್ ಆದ ಬೆನ್ನಲ್ಲೆ ಮೊನಲಿಸ ಸೆಲೆಬ್ರಿಟಿ ಆದರು. ಈಗ ದೇಶದಾದ್ಯಂತ ಹಲವು ಖಾಸಗಿ ಇವೆಂಟ್‌ಗಳಲ್ಲಿ ಭಾಗಿ ಆಗುತ್ತಾರೆ, ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಚಾರ್ಜ್ ಮಾಡುತ್ತಾರೆ. ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಪ್ಯಾಷನ್ ಶೋಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ ಒಂದು ಹಿಂದಿ ಸಿನಿಮಾನಲ್ಲಿಯೂ ಮೊನಲಿಸ ನಟಿಸುತ್ತಿದ್ದಾರೆ. ಇವರ ಹಿಂದಿನ ಪರಂಪರೆ ಅಂದರೆ ಪಪ್ಪು ದೇವಿ. ಈಕೆ ಚಾಲ್ತಿಗೆ ಬಂದ ಕಾಲಕ್ಕೆ ಸೋಷಲ್‌ ಮೀಡಿಯಾ ಹಾವಳಿ ಇಷ್ಟೊಂದು ಇರದಿದ್ದ ಕಾರಣ ಈಕೆ ಪ್ರಸಿದ್ಧಿಗೆ ಬಂದರೂ ಮೊನಲಿಸ ರೀತಿ ಮನೆಮಾತಾಗಲಿಲ್ಲ. ಪಪ್ಪು ದೇವಿಯ ಬಳಿಕ ಇದೀಗ ಈಕೆಯ ಮಗಳೂ ಸುದ್ದಿಯಲ್ಲಿದ್ದಾರೆ.

ಎಲ್ಲಿದ್ದಾಳೆ ಹುಲಿ ಕಣ್ಣಿನ ಪಪ್ಪು ದೇವಿ?

ಸುಮಾರು 20 ವರ್ಷಗಳ ಹಿಂದೆ ಪುಷ್ಕರ್ ಮೇಳದಲ್ಲಿ ಛಾಯಾಗ್ರಾಹಕರೊಬ್ಬರು ಪಪ್ಪು ದೇವಿ ಅವರ ಫೋಟೋ ತೆಗೆದಿದ್ದರು. ಅವರ ಕಣ್ಣುಗಳು ಹುಲಿಯ ಕಣ್ಣುಗಳಂತೆ (Tigress eyes) ತೀಕ್ಷ್ಣವಾಗಿದ್ದವು. ಈ ಫೋಟೋ ದೇಶಾದ್ಯಂತ ಪೋಸ್ಟ್‌ಕಾರ್ಡ್‌ಗಳಲ್ಲಿ ಅಚ್ಚಾಗಿ ತುಂಬಾ ಜನಪ್ರಿಯವಾಯಿತು. ಆದರೆ, ಈ ಪ್ರಖ್ಯಾತಿಯಿಂದ ಅವರಿಗೆ ಯಾವುದೇ ಆರ್ಥಿಕ ಲಾಭ ಅಥವಾ ಅಧಿಕೃತ ಮಾನ್ಯತೆ ಸಿಗಲಿಲ್ಲ. ತಾನು ವಿಶ್ವವಿಖ್ಯಾತ ಪೋಸ್ಟ್‌ಕಾರ್ಡ್‌ಗಳಲ್ಲಿ ಇದ್ದರೂ ಸಹ, ಪಪ್ಪು ದೇವಿ ಇಂದಿಗೂ ಪುಷ್ಕರ್‌ನ ಬೀದಿಯ ಬದಿಯಲ್ಲಿ ಸಣ್ಣ ಸ್ಟಾಲ್ ನಡೆಸುತ್ತಿದ್ದಾರೆ. ಅವರು ಕೈಯಿಂದ ತಯಾರಿಸಿದ ಬಂಜಾರ ಶೈಲಿಯ ಬ್ಯಾಗ್‌ಗಳು ಮತ್ತು ಸ್ಮರಣಿಕೆಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡುತ್ತಾರೆ. ವಿಶೇಷವೆಂದರೆ, ತಾವು ಮಾರಾಟ ಮಾಡುವ ವಸ್ತುಗಳ ಪಕ್ಕದಲ್ಲೇ ತಮ್ಮ 20 ವರ್ಷ ಹಳೆಯ ಫೋಟೋ ಇರುವ ಪೋಸ್ಟ್‌ಕಾರ್ಡ್‌ಗಳನ್ನು ಕೂಡ ಮಾರಾಟಕ್ಕೆ ಇಟ್ಟಿರುತ್ತಾರೆ. ಪ್ರವಾಸಿಗರು ಇಂದಿಗೂ ಅವರ ಕಣ್ಣುಗಳನ್ನು ನೋಡಿ ಇದು ನಿಜವೇ ಅಥವಾ ಲೆನ್ಸ್ ಹಾಕಿದ್ದಾರೆಯೇ ಎಂದು ಆಶ್ಚರ್ಯಪಡುತ್ತಾರೆ.

ಇದೀಗ ಬಂದಿರೋ ವಿಶೇಷ ವಿಷಯ ಅಂದರೆ ಅವರ ಮಕ್ಕಳಿಗೂ ತಾಯಿಯಂಥಾದ್ದೇ ಹುಲಿಯ ಕಣ್ಣುಗಳಿವೆ. ಪಪ್ಪು ದೇವಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರು ಕೂಡ ಅಂಗಡಿಯಲ್ಲಿ ತಾಯಿಗೆ ಸಹಾಯ ಮಾಡುತ್ತಾರೆ. ಪಪ್ಪುದೇವಿಯ ಮೂವರು ಮಕ್ಕಳಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ತಾಯಿಯಂತೆಯೇ ತಿಳಿ ಬಣ್ಣದ, ಆಕರ್ಷಕ ಕಣ್ಣುಗಳನ್ನು ಹೊಂದಿದ್ದಾರೆ. ಮಗಳ ಕಣ್ಣುಗಳು ಕೂಡ ಈಗ ಪ್ರವಾಸಿಗರ ಮತ್ತು ಛಾಯಾಗ್ರಾಹಕರ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಈ ತಾಯಿ-ಮಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿವೆ.

ಈ ಬಡ ಹೆಣ್ಣುಗಳ ಕಣ್ಣುಗಳನ್ನೇ ಬಂಡವಾಳ ಮಾಡಿಕೊಂಡು ಕೆಲವೊಂದಿಷ್ಟು ಮಂದಿ ಕೋಟ್ಯಂತರ ರು. ಸಂಪಾದಿಸಿದರು. ಅದರಲ್ಲಿ ಸ್ವಲ್ಪವನ್ನಾದರೂ ಈ ಬಡಪಾಯಿಗಳಿಗೆ ನೀಡಿದ್ದರೆ ಅವರ ಲೈಫು ಸುಧಾರಿಸುತ್ತಿತ್ತು. ಇನ್ನು ಮುಂದಾದರೂ ಅಮ್ಮ ಮಕ್ಕಳ ಬದುಕು ಕೊಂಚ ಸುಧಾರಿಸಲಿ ಎಂದು ಹಲವು ಮಂದಿ ಪ್ರಜ್ಞಾವಂತರು ಆಶಿಸುತ್ತಿದ್ದಾರೆ. ಅಟ್‌ಲೀಸ್ಟ್‌ ಇದೇ ಬ್ಯುಸಿನೆಸ್‌ ಅನ್ನು ಕೊಂಚ ಮೇಲ್ದರ್ಜೆಗೇರಿಸಲು ಅವರಿಗೆ ಸಹಾಯ ಸಿಕ್ಕರೂ ಈ ತಾಯಿ ಮಗಳ ಬದುಕು ಸುಧಾರಿಸಬಹುದು.

 

 

PREV
Read more Articles on
click me!

Recommended Stories

ಹಾಸಿಗೆಯಲ್ಲಿ ಹಾವಿನ ಪೊರೆ ಬಿಟ್ಟು ಕಣ್ಮರೆಯಾದ ಯುವತಿ, 'ನಾಗಿನ್' ಸತ್ಯ ಬಯಲು ಮಾಡಿದ ಪೊಲೀಸರು
ಶಾಂತಂ ಪಾಪಂನಲ್ಲಿ Leela-Manju ಕಥೆ, ಮತ್ತೆ ಟ್ರೋಲ್ ಆದ ದಂಪತಿಯಿಂದ ಕಾನೂನು ಕ್ರಮಕ್ಕೆ ನಿರ್ಧಾರ