ಖಾಲಿ ಜಾಗ ಇದ್ರೆ ಸಾಕು, ತಿಂಗಳಿಗೆ 22 ಲಕ್ಷ ದುಡಿಯಬಹುದು: ಗೆಳೆಯನ ಬ್ಯುಸಿನೆಸ್ ಐಡಿಯಾ ಹಂಚಿಕೊಂಡ ಯುವತಿ

Published : Jun 10, 2026, 06:10 PM IST
Swimming Pool Business

ಸಾರಾಂಶ

ಉತ್ತರ ಪ್ರದೇಶದ ಮೀರತ್‌ನ ಯುವಕ ಖಾಲಿ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ಬೇಸಿಗೆಯಲ್ಲಿ ತಿಂಗಳಿಗೆ ₹22.5 ಲಕ್ಷ ಹಾಗೂ ಉಳಿದ ತಿಂಗಳುಗಳಲ್ಲಿ ₹7.5 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಈ ಸ್ಮಾರ್ಟ್ ಬ್ಯುಸಿನೆಸ್ ಮಾದರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೈಯಲ್ಲಿ ಸ್ವಲ್ಪ ಜಾಗ ಇದ್ರೆ ಸಾಲದು, ಅದನ್ನ ದುಡ್ಡು ಮಾಡುವ ಯಂತ್ರವನ್ನಾಗಿ ಪರಿವರ್ತಿಸೋ ಐಡಿಯಾ ಇರಬೇಕು. ಉತ್ತರ ಪ್ರದೇಶದ ಯುವತಿಯೊಬ್ಬರು ತಮ್ಮ ಗೆಳೆಯನ ಬ್ಯುಸಿನೆಸ್ ಬಗ್ಗೆ ಹಂಚಿಕೊಂಡ ಪೋಸ್ಟ್ ಒಂದು ಈಗ ವೈರಲ್ ಆಗಿದೆ. ಖಾಲಿ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿ ತಿಂಗಳಿಗೆ 22 ಲಕ್ಷ ರೂಪಾಯಿಗೂ ಹೆಚ್ಚು ಸಂಪಾದನೆ ಮಾಡ್ತಿದ್ದಾರಂತೆ!

"ಕೆಲವರು ಸುಮ್ಮನೆ ಜಾಗವನ್ನ ಖಾಲಿ ಬಿಡಲ್ಲ, ಅದನ್ನೇ ದುಡ್ಡು ಪ್ರಿಂಟ್ ಮಾಡೋ ಮಷಿನ್ ಮಾಡ್ಕೋತಾರೆ," ಅಂತ ಉತ್ತರ ಪ್ರದೇಶದ ಕಂಟೆಂಟ್ ಕ್ರಿಯೇಟರ್ ಪೂಜಾ ಹೇಳ್ತಾರೆ. ತಮ್ಮ ಫ್ರೆಂಡ್‌ನ ಬ್ಯುಸಿನೆಸ್ ಬಗ್ಗೆ ಅವರು X (ಟ್ವಿಟರ್) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮೀರತ್‌ನಲ್ಲಿರೋ ತಮ್ಮ ಗೆಳೆಯ, ಒಂದು ಸ್ವಿಮ್ಮಿಂಗ್ ಪೂಲ್ ಬ್ಯುಸಿನೆಸ್‌ನಿಂದ ಬೇಸಿಗೆಯಲ್ಲಿ ತಿಂಗಳಿಗೆ 22 ಲಕ್ಷ ರೂಪಾಯಿಗಿಂತ ಹೆಚ್ಚು, ಉಳಿದ ತಿಂಗಳುಗಳಲ್ಲಿ 7.5 ಲಕ್ಷದವರೆಗೆ ಸಂಪಾದನೆ ಮಾಡ್ತಾರೆ ಅಂತ ಪೂಜಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪೂಜಾ ಅವರು ತಮ್ಮ ಗೆಳೆಯನ ಫಾರ್ಮ್‌ಗೆ ಹೋದಾಗ ಈ ಸ್ವಿಮ್ಮಿಂಗ್ ಪೂಲ್ ನೋಡಿದ್ದಾರೆ. "ಇದೇನಾದ್ರೂ ದುಡ್ಡು ಮಾಡ್ತಿದ್ಯಾ ಅಥವಾ ಸುಮ್ನೆ ಹವ್ಯಾಸಕ್ಕಾಗಿ ಮಾಡಿದ್ದೀಯಾ?" ಅಂತ ಗೆಳೆಯನಿಗೆ ಕೇಳಿದ್ದಾರೆ. ಅದಕ್ಕೆ ಆತ, "ಓ, ಪರವಾಗಿಲ್ಲ, ನಡೀತಿದೆ" ಅಂತಷ್ಟೇ ಹೇಳಿದ್ದಾರೆ. ಆದರೆ, ಪೂಜಾ ವಿವರವಾಗಿ ಮಾತಾಡಿದಾಗ ಅವರಿಗೆ ಅಚ್ಚರಿಯಾಗಿದೆ. ಮೀರತ್‌ನ NH 58 ಹೆದ್ದಾರಿಯಲ್ಲಿರುವ ಈ ಫಾರ್ಮ್‌ಗೆ ಬೇಸಿಗೆಯಲ್ಲಿ ದಿನಕ್ಕೆ 700 ರಿಂದ 800 ಜನ ಬರ್ತಾರಂತೆ. ಒಬ್ಬರಿಗೆ 100 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

ಬೇಸಿಗೆಯಲ್ಲಿ ದಿನಕ್ಕೆ ಸರಾಸರಿ 750 ಜನ ಬಂದ್ರು ಅಂತ ಲೆಕ್ಕ ಹಾಕಿದ್ರೂ, ದಿನಕ್ಕೆ 75,000 ರೂಪಾಯಿ ಕಲೆಕ್ಷನ್ ಆಗುತ್ತೆ. ಅಂದ್ರೆ, ತಿಂಗಳಿಗೆ ಸುಮಾರು 22.5 ಲಕ್ಷ ರೂಪಾಯಿ ಆದಾಯ ಬರುತ್ತೆ ಅಂತ ಪೂಜಾ ವಿವರಿಸಿದ್ದಾರೆ. ಇನ್ನು ಬೇಸಿಗೆ ಮುಗಿದ ಮೇಲೂ, ಸಾಮಾನ್ಯ ದಿನಗಳಲ್ಲಿ ಸುಮಾರು 250 ಜನ ಇಲ್ಲಿಗೆ ಭೇಟಿ ನೀಡ್ತಾರೆ. ಅಂದ್ರೆ ದಿನಕ್ಕೆ 25,000 ರೂಪಾಯಿಯಂತೆ, ತಿಂಗಳಿಗೆ 7.5 ಲಕ್ಷ ರೂಪಾಯಿ ಆದಾಯ ಗ್ಯಾರಂಟಿ. ಈ ಬ್ಯುಸಿನೆಸ್‌ನ ಖರ್ಚು-ವೆಚ್ಚದ ಬಗ್ಗೆ ಕೇಳಿದಾಗ, "ಇದು ನನ್ನ ಸ್ವಂತ ಜಾಗ. ಸೆಕ್ಯುರಿಟಿಗಾಗಿ ಇಬ್ಬರು ಗಾರ್ಡ್‌ಗಳನ್ನು ಮಾತ್ರ ನೇಮಿಸಿದ್ದೇನೆ. ಅವರಿಬ್ಬರಿಗೂ ಸೇರಿ ತಿಂಗಳಿಗೆ 20,000 ರೂಪಾಯಿ ಸಂಬಳ ಕೊಡ್ತೀನಿ" ಅಂತ ಅವರ ಗೆಳೆಯ ಹೇಳಿದ್ದಾರೆ.

ಡಬಲ್ ಆದಾಯ

ಅಷ್ಟೇ ಅಲ್ಲ, ಸ್ವಿಮ್ಮಿಂಗ್ ಪೂಲ್‌ನ ನೀರನ್ನು ಬದಲಾಯಿಸುವಾಗ ಅದನ್ನು ಸುಮ್ಮನೆ ಹೊರಗೆ ಬಿಡೋದಿಲ್ಲ. ಆ ನೀರನ್ನು ರೈತರಿಗೆ ಕೃಷಿಗಾಗಿ ಮಾರಾಟ ಮಾಡ್ತಾರಂತೆ. ಅಂದ್ರೆ, ಒಂದೇ ನೀರಿನಿಂದ ಎರಡು ಬಾರಿ ಆದಾಯ ಗಳಿಸ್ತಾರೆ ಪೂಜಾ ಅವರ ಗೆಳೆಯ. ಈ ಪೂಲ್‌ನಿಂದ ಬಂದ ದುಡ್ಡಿನಲ್ಲಿ ಅವರು ಈಗಾಗಲೇ ಹಲವು ವಾಹನಗಳನ್ನು ಖರೀದಿಸಿದ್ದಾರೆ ಅಂತಲೂ ಪೂಜಾ ಹೇಳಿದ್ದಾರೆ. ಈ ಪೋಸ್ಟ್‌ಗೆ ಸಾವಿರಾರು ಜನ ಕಾಮೆಂಟ್ ಮಾಡಿದ್ದು, ಸ್ವಿಮ್ಮಿಂಗ್ ಪೂಲ್ ಒಂದು ಅದ್ಭುತ ಬ್ಯುಸಿನೆಸ್ ಐಡಿಯಾ, ನಿಮ್ಮ ಫ್ರೆಂಡ್ ತುಂಬಾ ಸ್ಮಾರ್ಟ್ ಅಂತ ಹಲವರು ಹೊಗಳಿದ್ದಾರೆ.

PREV
Read more Articles on
click me!

Recommended Stories

ಮೌಂಟ್ ಎವರೆಸ್ಟ್‌ನಲ್ಲಿ ಯೋಧನ 'ಗ್ರೀನ್ ಬೂಟ್' ರಹಸ್ಯ ಬಯಲು; ಪರ್ವತಾರೋಹಿಗಳ ದಿಕ್ಸೂಚಿಗೆ 30 ವರ್ಷದ ಬಳಿಕ ಮುಕ್ತಿ!
ನಿಮ್ಮ ಹೆಂಡ್ತಿಯನ್ನು ತೋರಿಸಿ: ಮಾಜಿ ಸಿಎಂ ಪತ್ನಿಯ ಟ್ಯಾಟೂ ಎದೆ ಮೇಲೆ ಹಾಕಿ ಯುವಕನ ಹೈಡ್ರಾಮಾ