
ಭಾರತದಲ್ಲಿ ಮದುವೆ ಅಂದ್ರೆ ಅದೊಂದು ದೊಡ್ಡ ಹಬ್ಬ. ಸಂತೋಷ, ಸಂಭ್ರಮ. ಊರವರೆಲ್ಲ ಈ ಖುಷಿಯಲ್ಲಿ ಭಾಗಿಯಾಗ್ತಾರೆ. ರಸ್ತೆಯಲ್ಲಿ ಡೋಲು, ಮೆರವಣಿಗೆಯ ವೈಭವ ಇರುತ್ತೆ. ಆದ್ರೆ ವಿದೇಶದಲ್ಲಿ ಭಾರತದಂತೆ ಮದುವೆ ನೋಡಲು ಸಾಧ್ಯವೇ ಇಲ್ಲ ಅಂದ್ಕೊಂಡ ನಮಗೆ ನ್ಯೂಯಾರ್ಕ್ ಸಿಟಿಯಲ್ಲಿ ದಿಬ್ಬಣದ ಸಂಭ್ರಮ ಕಂಡು ಬಂದಿದೆ.
ಪಂಕತಿ ದೋಷಿ ಮತ್ತು ಡಾ. ಅವಿಶ್ ಜೈನ್ ಮದುವೆ ಮೆರವಣಿಗೆ ನ್ಯೂಯಾರ್ಕ್ ಸಿಟಿಯ ರಸ್ತೆಯಲ್ಲಿ ಸಾಗಿದೆ. ಸಾಂಪ್ರದಾಯಿಕ ವಿವಾಹ ಮೆರವಣಿಗೆಯ ಬದಲು, ಅವರು ಅದನ್ನು ಲೈವ್ ಕಾರ್ಯಕ್ರಮವಾಗಿ ಬದಲಿಸಿದ್ರು. ಮೈಕ್ರೊಫೋನ್ಗಳನ್ನು ಹಿಡಿದುಕೊಂಡು, ಅವರು ತೆರೆದ ವಾಹನದಲ್ಲಿ ಬಾಲಿವುಡ್ ಹಾಡುಗಳನ್ನು ಹಾಡ್ತಾ, ಬೀದಿಯಲ್ಲಿ ಮೆರವಣಿಗೆ ಹೊರಟಿದ್ದರು. ಜನರು ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿ ಸಂತೋಷದಿಂದ ಡಾನ್ಸ್ ಮಾಡಿ, ಮದುವೆ ಮೆರವಣಿಗೆಯ ಖುಷಿಯನ್ನು ಇಮ್ಮಡಿಗೊಳಿಸಿದ್ರು.
Gen G ಹುಡುಗೀರು ಅಂಕಲ್ ಆದ್ರೂ ನೀವೇ ಬೇಕು ಅಂತಿರೋದ್ಯಾಕೆ? ಕಾರಣ ಇದೆ..!
ಮದುವೆ ಮೆರವಣಿಗೆ ಸಾಮಾನ್ಯವಾಗಿ ಡಿಜೆ ಇಲ್ಲ ಬ್ಯಾಂಡ್ ನಿಂದ ಕೂಡಿರುತ್ತೆ. ಆದ್ರೆ ಈ ಮೆರವಣಿಗೆ ಸ್ವಲ್ಪ ಭಿನ್ನವಾಗಿತ್ತು. ವಧು ವರರೇ ಹಾಡುಗಾರರಾಗಿದ್ರು. ವರ ಮೆರವಣಿಗೆಯಲ್ಲಿ ಹಾಡು ಹೇಳ್ತಿದ್ದ. ವಧು-ವರರು ಫಿಫ್ತ್ ಅವೆನ್ಯೂವನ್ನು ಮುಚ್ಚಿ ನೇರಪ್ರಸಾರದೊಂದಿಗೆ ತಮ್ಮ ವಿವಾಹ ಮೆರವಣಿಗೆಯನ್ನು ಪ್ರವೇಶಿಸಿದರು" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಮರೀಶ್ ಪಟೇಲ್ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ.
ಫಿಫ್ತ್ ಅವೆನ್ಯೂ ಮ್ಯಾನ್ಹ್ಯಾಟನ್ನ ಅತ್ಯಂತ ಪ್ರತಿಷ್ಠಿತ ಬೀದಿಯಾಗಿದ್ದು, ಗ್ರೀನ್ವಿಚ್ ವಿಲೇಜ್ನಿಂದ ಹಾರ್ಲೆಮ್ವರೆಗೆ ವ್ಯಾಪಿಸಿದೆ. ಈ ಪ್ರದೇಶವು ಐಷಾರಾಮಿ ಶಾಪಿಂಗ್, ಪ್ರಸಿದ್ಧ ಹೆಗ್ಗುರುತುಗಳು ಮತ್ತು ಉನ್ನತ ದರ್ಜೆಯ ವಸತಿ ಪ್ರದೇಶಗಳಿಗೆ ಹೆಸರುವಾಸಿಯಾಗಿದೆ. ಸ್ಯಾಕ್ಸ್ ಫಿಫ್ತ್ ಅವೆನ್ಯೂ, ಗುಸ್ಸಿ ಮತ್ತು ಕಾರ್ಟಿಯರ್ನಂತಹ ಪ್ರಮುಖ ಬ್ರ್ಯಾಂಡ್ಗಳು ಇಲ್ಲಿವೆ. ಇದು ವಿಶ್ವದ ಅತ್ಯಂತ ದುಬಾರಿ ಬೀದಿಗಳಲ್ಲಿ ಒಂದು.
ಭಾರತದಲ್ಲಿ ಇಂಥ ಮೆರವಣಿಗೆ ಸಾಮಾನ್ಯ. ದಿನಕ್ಕೊಂದು ಮೆರವಣಿಗೆ ಕಾಣ ಸಿಗುತ್ತೆ. ಆದ್ರೆ ಫಿಫ್ತ್ ಅವೆನ್ಯೂ ಮ್ಯಾನ್ ಹ್ಯಾಟನ್ ನಲ್ಲಿ ಭಾರತೀಯ ಮದುವೆ ಅಪರೂಪ. ಅದ್ರಲ್ಲೂ ಬೀದಿಯಲ್ಲಿ ಹೀಗೆ ಮೆರವಣಿಗೆ ಹೋಗೋದು ಸುಲಭವಲ್ಲ. ಮನಸ್ಸಿಗೆ ಬಂದಂತೆ ನೀವು ಮಾಡಲು ಸಾಧ್ಯವಿಲ್ಲ. ಇದಕ್ಕೆ ತಿಂಗಳಗಟ್ಟಲೆ ಪ್ರಯತ್ನ ನಡೆಸಬೇಕು. ಅನೇಕರ ಒಪ್ಪಿಗೆ ಪತ್ರ ಬೇಕು. ಮೆರವಣಿಗೆ ಹಿನ್ನಲೆಯಲ್ಲಿ ರಸ್ತೆ ಬಂದ್ ಮಾಡ್ಬೇಕು, ಭದ್ರತೆ ಬೇಕು, ಪೊಲೀಸರ ಬೆಂಬಲ ಬೇಕು. ಎಲ್ಲರ ಅನುಮತಿ ಪಡೆದು ಈ ಮೆರವಣಿಗೆ ನಡೆಸಲಾಗಿದೆ.
ಲಕ್ಷ, ಲಕ್ಷ ಹಣ ಬೇಕಿಲ್ಲ; ವೀಸಾ ಬೇಡ, 20-60 ಸಾವಿರದಲ್ಲಿ ಮುಗಿಯುವ ಇಂಟರ್‌ನ್ಯಾಶನಲ್ ಟ್ರಿಪ್ ಸ್ಥಳಗಳಿವು!
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆ ವಿಡಿಯೋ ವೈರಲ್ ಆಗಿದೆ. ಜನರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಈ ವಿಶಿಷ್ಟ ಮತ್ತು ಉತ್ಸಾಹಭರಿತ ಶೈಲಿಯನ್ನು ಹೊಗಳಿದ್ದಾರೆ. ಇದನ್ನು ಸಂತೋಷದಾಯಕ ಕ್ಷಣ ಎಂದಿದ್ದಾರೆ. ಮತ್ತೆ ಕೆಲವರು ಇಂತಹ ಜನನಿಬಿಡ ಸಾರ್ವಜನಿಕ ಸ್ಥಳದಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುವ ಸೂಕ್ತತೆಯನ್ನು ಪ್ರಶ್ನಿಸಿದ್ದಾರೆ.
ವಿದೇಶದಲ್ಲಿ ಇಂಥ ಮದುವೆ ಮೆರವಣಿಗೆ ಬಹಳ ಅಪರೂಪ. ಈ ಹಿಂದೆ ಲೋವರ್ ಮ್ಯಾನ್ಹ್ಯಾಟನ್ನಲ್ಲಿ ಸುಮಾರು 400 ಜನರನ್ನು ಒಳಗೊಂಡ ಮದುವೆ ಮೆರವಣಿಗೆಯ ವೀಡಿಯೊ ವೈರಲ್ ಆಗಿತ್ತು. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಜನರು ಡಿಜೆಯ ರಾಗಕ್ಕೆ ನೃತ್ಯ ಮಾಡಿದ್ದರು.