Baby Elephant: ಹುಟ್ಟಿದ ಎರಡೇ ದಿನಕ್ಕೆ ಫುಟ್ಬಾಲ್ ಆಟ: 2026ರ ವರ್ಲ್ಡ್‌ಕಪ್‌ಗೆ ಈ ಆನೆಮರಿ ರೆಡಿ!

Published : Jun 12, 2026, 05:37 PM IST
Baby Elephant

ಸಾರಾಂಶ

Asian Elephant Calf: ಬ್ರಿಟನ್‌ನ ಮೃಗಾಲಯದಲ್ಲಿ ಹುಟ್ಟಿದ ಪುಟ್ಟ ಏಷ್ಯನ್ ಆನೆಮರಿಯೊಂದು ಫುಟ್ಬಾಲ್ ಆಡಲು ಯತ್ನಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫುಟ್ಬಾಲ್ ಅಭಿಮಾನಿಗಳು..

ಬ್ರಿಟನ್‌ನ ಮೃಗಾಲಯವೊಂದರಲ್ಲಿ ಹುಟ್ಟಿದ ಏಷ್ಯನ್ ಆನೆಮರಿಯೊಂದು ಫುಟ್ಬಾಲ್ ಆಡಿ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದೆ. ಹುಟ್ಟಿ ಕೆಲವೇ ದಿನಗಳಾದ ಈ ಮರಿ, ಚೆಂಡನ್ನು ಒದೆಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಫುಟ್ಬಾಲ್ ಅಭಿಮಾನಿಗಳು ಮತ್ತು ಪ್ರಾಣಿಪ್ರಿಯರು ಫಿದಾ ಆಗಿದ್ದಾರೆ.

ಸದ್ಯ ಇಡೀ ಜಗತ್ತು ಫುಟ್ಬಾಲ್ ಜ್ವರದಲ್ಲಿದೆ. 2026ರ ವಿಶ್ವಕಪ್‌ಗೆ ಮೆಕ್ಸಿಕೋ ಆತಿಥ್ಯ ವಹಿಸುತ್ತಿದ್ದು, ಫುಟ್ಬಾಲ್ ಅಭಿಮಾನಿಗಳೆಲ್ಲರ ಗಮನ ಈಗ ಅದರ ಮೇಲಿದೆ. ಇದರ ನಡುವೆಯೇ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಫುಟ್ಬಾಲ್ ತಾರೆಯೊಬ್ಬ ಉದಯಿಸಿದ್ದಾನೆ. ಆದರೆ, ಆತ ಮನುಷ್ಯನಲ್ಲ, ಬದಲಿಗೆ ಹುಟ್ಟಿ ಕೆಲವೇ ದಿನಗಳಾದ ಒಂದು ಮುದ್ದಾದ ಏಷ್ಯನ್ ಆನೆಮರಿ. ಜೂನ್ 9 ರಂದು ಜನಿಸಿದ ಈ ಆನೆಮರಿ, ಜೂನ್ 11 ರಷ್ಟೊತ್ತಿಗೆ ಇಡೀ ವಿಶ್ವದ ಫುಟ್ಬಾಲ್ ಅಭಿಮಾನಿಗಳ ಮನಗೆದ್ದಿದೆ.

ಚೆಂಡು ಒದೆಯುವ ಆನೆಮರಿ

ಬ್ರಿಟನ್‌ನ ಮೃಗಾಲಯವೊಂದರಲ್ಲಿ ಜನಿಸಿದ ಈ ಏಷ್ಯನ್ ಆನೆಮರಿಯೇ ಈಗಿನ ಸ್ಟಾರ್. ಅಸೋಸಿಯೇಟೆಡ್ ಪ್ರೆಸ್ (AP) ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 'ಬುಧವಾರ ಯುಕೆಯ ಮೃಗಾಲಯವೊಂದರಲ್ಲಿ ಕೇವಲ ಎರಡು ದಿನದ ಪುಟ್ಟ ಏಷ್ಯನ್ ಆನೆಮರಿಯೊಂದು ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಫಿಫಾ ವಿಶ್ವಕಪ್ ಹೊಸ್ತಿಲಲ್ಲಿ, ಈ ಮರಿಗೆ ಆಟವಾಡಲು ಒಂದು ಚೆಂಡನ್ನು ನೀಡಲಾಯಿತು.

ಅದು ಚೆಂಡನ್ನು ಡ್ರಿಬಲ್ ಮಾಡಲು ಮತ್ತು ತನ್ನ ಸೊಂಡಿಲಿನಿಂದ ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು' ಎಂದು ಎಪಿ ಬರೆದುಕೊಂಡಿದೆ. ಈ ವಿಡಿಯೋ ಫುಟ್ಬಾಲ್ ಪ್ರೇಮಿಗಳು ಮತ್ತು ಪ್ರಾಣಿಪ್ರಿಯರ ಗಮನವನ್ನು ತಕ್ಷಣವೇ ಸೆಳೆದಿದೆ. ಕೆಲವೇ ಗಂಟೆಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಹಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇವನೇ ನೋಡಿ ಆಟಗಾರ!

ಒಬ್ಬ ಬಳಕೆದಾರ, '2026ರ ವಿಶ್ವಕಪ್‌ಗೆ ಹೋಗುವ ಕೆಲವು ತಂಡಗಳಿಗಿಂತ ಈ ಪುಟ್ಟ ಆನೆಗೆ ಉತ್ತಮ ಕಂಟ್ರೋಲ್ ಇದೆ' ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. 'ಚಿಕ್ಕ ವಯಸ್ಸಿನಲ್ಲೇ ತರಬೇತಿ ನೀಡಿ, ಭವಿಷ್ಯದ ವಿಶ್ವಕಪ್ ತಾರೆಯ ಸೃಷ್ಟಿ ಈಗಲೇ ಶುರುವಾಗಲಿ' ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ಅದರ ಪುಟ್ಟ ಸೊಂಡಿಲಿನ ಬಗ್ಗೆ, 'ಬೇಡ ಮಗೂ, ನೀನು ಸೊಂಡಿಲು ಬಳಸುವಂತಿಲ್ಲ' ಎಂದು ಹೇಳಿದ್ದಾರೆ. 'ಇದು ಫುಟ್ಬಾಲ್ ಆಗಿರೋದ್ರಿಂದ ಬ್ರಿಟಿಷರು ನಡುಗುತ್ತಾರೆ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಈ ವಿಶ್ವಕಪ್ ಗೆಲ್ಲುವ ದೇಶದ ಹೆಸರನ್ನೇ ಅದಕ್ಕೆ ಇಡಬೇಕು' ಎಂದು ಕೆಲವರು ಸಲಹೆ ನೀಡಿದರೆ, 'ಭವಿಷ್ಯದ ಗೋಲ್ಡನ್ ಬೂಟ್ ವಿನ್ನರ್' ಎಂದು ಮತ್ತೊಬ್ಬರು ಹೊಗಳಿದ್ದಾರೆ.

PREV
Read more Articles on
click me!

Recommended Stories

TN CM Vijay to Kollur: ಕೊಲ್ಲೂರು ದೇಗುಲದಲ್ಲಿ ಆ ಸಂಕಲ್ಪ ಮಾಡಿ, ಅರ್ಚಕರ ಮುಂದೆ ಅದೊಂದು ಮನವಿ ಮಾಡಿಕೊಂಡ ಸಿಎಂ ವಿಜಯ್!
ಲಕ್ಸುರಿ ಕಾರಿನಲ್ಲಿ ಕೊಲ್ಲೂರಿಗೆ ಬಂದ ಸಿಎಂ ವಿಜಯ್; ಆ ಐಷಾರಾಮಿ ಕಾರಿನ ರಹಸ್ಯ, ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರಾ!