TikTok ನಿಷೇಧಕ್ಕೆ ಇಂದಿಗೆ 6 ವರ್ಷ: 40M ಫಾಲೋವರ್ಸ್‌, ಟಾಪ್-5 ಟಿಕ್‌ಟಾಕ್ ಸ್ಟಾರ್‌ಗಳು ಈಗ ಏನು ಮಾಡುತ್ತಿದ್ದಾರೆ?

Published : Jun 30, 2026, 12:03 PM IST
TikTok ban marks 6 years today Top 5 TikTok stars here what are they doing now

ಸಾರಾಂಶ

ಜೂನ್ 30, 2020 ರಂದು, ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಈ ನಿರ್ಧಾರದಿಂದ Tiktok ಟಾಪ್-5 ಸ್ಟಾರ್‌ ಗಳ ಬದುಕು ಬದಲಾಯಿತು. ಈಗ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ನೋಡಿ!

TIKTOK Ban: ಜೂ.30,2020ರ ಈ ದಿನ ಟಿಕ್ ಟಿಕ್‌ಟಾಕ್ ಸ್ಟಾರ್‌ಗಳಿಗೆ ಆಘಾತಕಾರಿ ದಿನ, ಕೆಟ್ಟ ದಿನ, ಇಂಥ ದಿನ ಬರುತ್ತೆಂದು ಅವು ಕನಸಲ್ಲೂ ಊಹಿಸಿರಲಿಲ್ಲ. ಸರಿಯಾಗಿ ಇಂದಿಗೆ ಆರು ವರ್ಷಗಳ ಹಿಂದೆ ಇದೇ ದಿನ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆ, ಗೌಪ್ಯತೆ ದೃಷ್ಟಿಯಿಂದ ಭಾರತದಲ್ಲಿ ಟಿಕ್‌ಟಾಕ್(TikTok) ನಿಷೇಧಿಸಿತು. ಕೇವಲ ಟಿಕ್‌ಟಾಕ್ ಮಾತ್ರವಲ್ಲದೆ 59 ಚೀನೀ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿತು. 

ಕೇಂದ್ರದ ಈ ಒಂದು ನಿರ್ಧಾರದಿಂದ ರಾತ್ರೋರಾತ್ರಿ ಕೋಟ್ಯಂತರ ಯುವಜನರ ಕಂಗಲಾಗಿಸಿತು. ಕೆಲವರು ಟಿಕ್‌ಟಾಕ್ ಬಿಟ್ಟಿರಲಾಗದಷ್ಟು ಅಡಿಕ್ಟ್ ಆಗಿದ್ದರು, ಇನ್ನು ಕೆಲವರು ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿದ್ದ ಸ್ಟಾರ್ ಗಳು ಈ ಆಪ್‌ನಿಂದಲೇ ಹಣ, ಖ್ಯಾತಿ ಪಡೆದಿದ್ದರು. ಟಿಕ್‌ಟಾಕ್ ಬ್ಯಾನ್ ಮಾಡಿದಾಗ ಟಿಕ್‌ಟಾರ್‌ಗಳಿಗೆ ಆಕಾಶ ಕಳಚಿಬಿದ್ದಂತಾಯಿತು. ಆದರೆ ಇಂದಿಗೆ ಟಿಕ್‌ಟಾಕ್ ಬ್ಯಾನ್ ಮಾಡುವುದು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿದ್ದ ಟಾಪ್‌ ಐವರು ಟಿಕ್‌ಟಾಕ್ ಸ್ಟಾರ್‌ಗಳು ಇಂದು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಗೊತ್ತೆ?

ರಿಯಾಜ್ ಅಲಿ

ಈ ಸೋಷಿಯಲ್ ಮೀಡಿಯಾ ಇನ್ಫ್ಲುಯನ್ಸರ್ ರಿಯಾಜ್ ಅಲಿ, ಟಿಕ್‌ಟಾಕ್ ನಿಷೇಧದ ಸಮಯದಲ್ಲಿ ಸುಮಾರು 40 ಮಿಲಿಯನ್‌ಗಿಂತಲೂ ಅಧಿಕ ಫಾಲೋವರ್ಸ್ ಇರುವ ಭಾರತದ ಅತಿದೊಡ್ಡ ಟಿಕ್‌ಟಾಕ್ ಸ್ಟಾರ್ ಆಗಿದ್ದರು. ರಿಯಾಜ್ ಅಲಿ ಹೇರ್‌ ಕಟ್, ಅವನ ಶೈಲಿಗೆ ಯುವಜನತೆ ಮಾರುಹೋಗಿದ್ದರು. ದೇಶಾದ್ಯಂತ ಪಟ್ಟಣದಿಂದ ಹಳ್ಳಿಗಳವರೆಗೆ ಯುವ ಸಮೂಹ ಅವನ ಹೇರ್‌ಸ್ಟೈಲ್, ಲೈಫ್‌ ಸ್ಟೈಲ್‌ನ್ನೇ ಅನುಸರಿಸಿದರು. ಟಿಕ್‌ಟಾಕ್ ಅಪ್ಲಿಕೇಶನ್ ಸ್ಥಗಿತಗೊಂಡ ನಂತರ, ರಿಯಾಜ್ ಅಲಿ ಇನ್‌ಸ್ಟಾಗ್ರಾಮ್(Instagram) ಮತ್ತು ಯೂಟ್ಯೂಬ್‌(Youtube)ನಲ್ಲಿ ತಮ್ಮ ಜನಪ್ರಿಯತೆ ಉಳಿಸಿಕೊಂಡರು.

ಇಂದು ರಿಯಾಜ್ ಅಲಿ ನಟನೆ ಜೊತೆಗೆ ಮಾಡೆಲಿಂಗ್ ಜಗತ್ತಿನಲ್ಲಿ ಪಳಗಿದ್ದಾರೆ. ಅದರಲ್ಲೇ ಯಶಸ್ಸು ಕಂಡಿದ್ದಾರೆ. ಸದ್ಯ ಮುಂಬೈನಲ್ಲಿ ಹಲವು ಪ್ರಾಜೆಕ್ಟ್‌ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಲಾಕಪ್‌ನ ಹೊಸ ಸೀಸನ್, ಲಾಕಪ್‌ನ ಸೀಸನ್ 2 ರಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದರು.

ಶ್ರೀ ಫೈಸು

ಟಿಕ್‌ಟಾಕ್‌ನಲ್ಲಿ ಇವರು ಕಾಮಿಡಿ ವಿಡಿಯೋಗಳಿಗೆ ತುಂಬಾ ಹೆಸರುವಾಸಿಯಾಗಿದ್ದರು. ಅವರ ಹಾಸ್ಯ ಸಂಭಾಷಣೆ, ಲಿಪ್-ಸಿಂಕ್ ವಿಡಿಯೋಗಳು ಅದ್ಭುತವಾಗಿತ್ತು. ಮಿಸ್ಟರ್ ಫೈಸು ಎಂದೇ ಹೆಸರುವಾಸಿಯಾಗಿದ್ದ ಫೈಸಲ್ ಶೇಖ್ ಎರಡನೇ ಅತಿದೊಡ್ಡ ಟಿಕ್‌ಟಾಕ್ ಸ್ಟಾರ್ ಆಗಿದ್ರೂ, ಈಗಲೂ ಇನ್‌ಸ್ಟಾಗ್ರಾಮ್, ಯುಟ್ಯೂಬ್‌ನಲ್ಲಿ ಮಿಂಚುತ್ತಲೇ ಇದ್ದಾರೆ. ಟಿಕ್‌ಟಾಕ್ ನಿಷೇಧಿಸಿದಾಗ ಮೀಲಿಯನ್‌ ಗಟ್ಟಲೇ ಫಾಲೋವರ್ಸ್ ಹೊಂದಿದ್ದರು. ಪ್ರಸ್ತುತ ಮುಂಬೈನಲ್ಲಿ ಯಶಸ್ವಿ ಮಾಡೆಲ್ ಆಗಿ ಫೈಸು ತನ್ನನ್ನು ತಾನು ಬ್ರಾಂಡ್ ಮಾಡೆಲ್ ಆಗಿ ರೂಪಿಸಿಕೊಂಡಿದ್ದಾರೆ. ಮಾಡೆಲಿಂಗ್ ಜೊತೆಗೆ ನಟನೆ, ಸೋಷಿಯಲ್ ಮೀಡಿಯಾ ಇನ್ಫ್ಯುಲೆನ್ಸರ್ ಆಗಿ ಕ್ರಿಯಾಶೀಲರಾಗಿದ್ದಾರೆ. ಇತ್ತೀಚೆಗೆ ಅವರು ರಿಯಾಲಿಟಿ ಶೋ 'ದಿ-50'ನಲ್ಲಿ ಅದ್ಭುತ ಅಭಿನಯಕ್ಕೆ ಸುದ್ದಿಯಾಗಿದ್ದರು.

ಜನ್ನತ್ ಜುಬೇರ್

ಜನ್ನತ್ ಜುಬೈರ್ ಟಿಕ್‌ಟಾಕ್‌ಗೆ ಸೇರುವ ಮೊದಲು ಪ್ರಸಿದ್ಧ ಬಾಲನಟಿಯಾಗಿದ್ದರು, ಆದರೆ ಈ ಆಪ್ ಅವರ ಜನಪ್ರಿಯತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿತ್ತು. ಟಿಕ್‌ಟಾಕ್ ನಿಷೇಧ ಬಳಿಕ ಜನ್ನತ್ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದರು. 'ಖತ್ರೋನ್ ಕೆ ಖಿಲಾಡಿ 12' ಮತ್ತು 'ಲಾಫ್ಟರ್ ಚೆಫ್ಸ್' ನಂತಹ ಪ್ರಮುಖ ರಿಯಾಲಿಟಿ ಶೋಗಳಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಚಿಕ್ಕವಯಸಿನಿಂದಿಡಿದು ಇಂದಿಗೂ ಮುಂಬೈನಲ್ಲಿ ಯಶಸ್ವಿ ನಟಿ ಜನ್ನತ್ ಜುಬೇರ್.

ಅವೆಜ್ ದರಬಾರ್

ಅಬ್ಬಬ್ಬಾ ಎಂಥ ಡ್ಯಾನ್ಸ್! ಟಿಕ್‌ಟಾಕ್‌ನಲ್ಲಿ ಅವೆಜ್ ನೃತ್ಯಕ್ಕೆ ವಾವ್ ಎನ್ನದವರೇ ಇಲ್ಲ.ಡ್ಯಾನ್ಸ್ ಸ್ಕಿಲ್ ಅದ್ಭುತ. ನೃತ್ಯ ಸಂಯೋಜನೆಗೂ ಹೆಸರುವಾಸಿಯಾದ ಅವೇಜ್ ದರ್ಬಾರ್ ಟಿಕ್‌ಟಾಕ್‌ನ ಅತ್ಯಂತ ಜನಪ್ರಿಯ ಕಲಾವಿದರಲ್ಲಿ ಒಬ್ಬರು. ಅವೇಜ್ ಇತ್ತೀಚೆಗೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 19 ರಲ್ಲಿಸ್ಪರ್ಧಿಯಾಗಿ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದ್ದರು, ಸದ್ಯ ಈಗ ಅವರು ಹಲವು ಕಾರ್ಯಕ್ರಮಗಳು ಮತ್ತು ಮ್ಯೂಸಿಕ್ ಆಲ್ಬಮ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

ಅವನೀತ್ ಕೌರ್

ಟಿಕ್‌ಟಾಕ್‌ನಲ್ಲಿ ಟಾಪ್ 5 ಸ್ಟಾರ್‌ಗಳಲ್ಲಿ ಒಬ್ಬರಾದ ಅವನೀತ್ ಕೌರ್ ಒಬ್ಬ ಖ್ಯಾತ ಪರಿಣತ ಹೊಂದಿದ ಡ್ಯಾನ್ಸರ್. ಅಷ್ಟೇ ಅಲ್ಲ ಟಿವಿ ಸ್ಟಾರ್‌ ಕೂಡ. ಟಿಕ್‌ಟಾಕ್ ಆ್ಯಪ್ ನಿಷೇಧದ ನಂತರವೂ ಅವರ ವೃತ್ತಿಜೀವನ ಕುಸಿದಿಲ್ಲ. ಅವರು ಸೋಷಿಯಲ್ ಮೀಡಿಯಾ ಸ್ಟಾರ್ ಮಾತ್ರವಲ್ಲದೆ ಹಲವಾರು ವೆಬ್ ಸೀರಿಸ್‌ಗಳಲ್ಲಿ ಪ್ರಸಿದ್ಧರಾಗಿದ್ದಾರೆ ಪ್ರಸ್ತುತ ಅವನೀತ್ ಕೌರ್ ಮುಂಬೈನ ಬಾಂದ್ರಾದಲ್ಲಿ ಯಶಸ್ವಿ, ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

ನಿದ್ರೆಗೆ ಜಾರಿದ ಬೇಬಿ ಸಿಟ್ಟರ್… ಮೆಟ್ಟಿಲಿನಿಂದ ಉರುಳಿ ಬಿದ್ದ ಮಗು, ಸಿಸಿಟಿವಿಯಲ್ಲಿ ಬೆಚ್ಚಿ ಬೀಳಿಸುವ ದೃಶ್ಯ ಸೆರೆ
Trisha Krishnan Honey: ತ್ರಿಷಾಗೆ 'ಹನಿ' ಎಂದು ಕರೆಯೋದು ಯಾರು? ಅವರಾ or ಇವರಾ? ನಿಮ್ಮ ಊಹೆ ಸರಿನಾ, ತಪ್ಪಾ?