
ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ತಮ್ಮ ಮಕ್ಕಳಿಗೆ ಉಜ್ಞವ ಭವಿಷ್ಯವನ್ನು ನಿರ್ಮಿಸುವ ಸಲುವಾಗಿ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಕೂಡ ದುಡಿಯಬೇಕಾಗುತ್ತದೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ತಮ್ಮ ಪೋಷಕರ ಬಳಿ ಬಿಟ್ಟರೆ, ಇನ್ನೂ ಕೆಲವರು ಮಕ್ಕಳನ್ನು ನೋಡಿಕೊಳ್ಳಲು ಅವರ ಆರೈಕೆ ಮಾಡು ಬೇಬಿ ಸಿಟ್ಟರ್ ನೇಮಿಸುತ್ತಾರೆ. ಆದರೆ ಬೇಬಿ ಸಿಟ್ಟರ್ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಯೇ? ನಿಮ್ಮ ಮಗು ಬೇಬಿ ಸಿಟ್ಟರ್ ಕೈಯಲ್ಲಿ ಸುರಕ್ಷಿತವಾಗಿದೆಯೇ? ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳನ್ನು ಬೇಬಿ ಸಿಟ್ಟರ್ ಬಳಿ ಬಿಟ್ಟು ಹೋಗುವ ಪೋಷಕರು, ಭವಿಷ್ಯವನ್ನು ರೂಪಿಸುವೇ ಮೊದಲೇ ಆ ಎಳೆ ಕಂದಮ್ಮಗಳು ಇನ್ನಿಲ್ಲದಂತೆ ಆಗಬಹುದು. ಯಾಕಂದ್ರೆ ಎಲ್ಲಾ ಬೇಬಿ ಸಿಟ್ಟರ್ ಗಳು ಮಕ್ಕಳ ಆರೈಕೆ ಕಡೆಗೆ ಗಮನ ಕೊಡುವುದಿಲ್ಲ. ಅದನ್ನು ನಿರೂಪಿಸುವ ಒಂದು ವಿಡಿಯೋ ಸೋಶಿಯಲ್ ಮೀಡೀಯಾದಲ್ಲಿ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ್ರೆ ನಿಮ್ಮ ಎದೆ ಜಲ್ ಎನ್ನದೇ ಇರದು.
ಸೋಶಿಯಲ್ ಮಿಡಿಯಾದಲ್ಲಿ ಸಿಸಿಟಿವಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿ ಮಗುವನ್ನು ನೋಡಿಕೊಳ್ಳುವ ಬೇಬಿ ಸಿಟ್ಟರ್, ಮಗುವಿಗಾಗಿ ಮೀಸಲಿಟ್ಟ ಹಾಸಿಗೆಯಲ್ಲಿ ಬ್ಲಾಂಕೆಟ್ ಒದ್ದು ನಿದ್ರೆಗೆ ಜಾರಿದ್ದಾರೆ, ಇದರಿಂದಾಗಿ ಮಗು ಮನೆಯಲ್ಲಿ ಒಂಟಿಯಾಗಿ ಅಲೆದಾಡುತ್ತಿರುವುದು ಕಂಡು ಬಂದಿದೆ. ಮನೆಯಲ್ಲಿ ಒಂದೂವರೆ ಎರಡು ವರ್ಷದ ಮಗುವನ್ನು ಕಾಣಬಹುದು, ಮತ್ತೊಂದೆಡೆ ನಿದ್ರೆ ಮಾಡುತ್ತಿರುವ ಬೇಬಿ ಸಿಟ್ಟರ್ ಕಾಣಬಹುದು. ಕೆಲವು ಕ್ಷಣಗಳ ನಂತರ, ಮಹಡಿಯ ಮೆಟ್ಟಿಲುಗಳಿಂದ ಮಗು ಉರುಳಿ ಕೆಳಗೆ ಬೀಳುತ್ತಿರುವ ದೃಶ್ಯ ಸೆರೆಯಾಗಿದೆ.ಮನೆಯ ಭದ್ರತಾ ಕ್ಯಾಮೆರಾಗಳು ಮತ್ತು ಅಲಾರಾಂ ಮೂಲಕ ಮಲಗಿರುವ ಬೇಬಿ ಸಿಟ್ಟರನ್ನು ತಾಯಿ ಎಚ್ಚರಿಸಲು ಪ್ರಯತ್ನಿಸಿದರು ಆಕೆ ಎದ್ದೇಳಲೇ ಇಲ್ಲ. ಮಗು ಅಲ್ಲಿಂದ ಎದ್ದು ನೋವಿನಲ್ಲಿ ಜೋರಾಗಿ ಅಳುತ್ತಾ, ಬೇಬಿ ಸಿಟ್ಟರ್ ಬಳಿ ನಿಂತು ನೋಡುತ್ತಾ, ಮಾತನಾಡುವ ದೃಶ್ಯ, ಅಮ್ಮನ ಧ್ವನಿ ಕೇಳಿ ಸುತ್ತಮುತ್ತ ನೋಡುವ ದೃಶ್ಯ ಸೆರೆಯಾಗಿದೆ. ಇದಿಷ್ಟು ಸೋಶಿಯಲ್ ಮೀಡಿಯಾದಲ್ಲಿ ಸೆರೆಯಾದ ದೃಶ್ಯ.
ಇನ್ನು ಈ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಕಂಡ ತಕ್ಷಣ ತಾಯಿ ಮನೆಗೆ ಧಾವಿಸಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದೃಷ್ಟವಶಾತ್, ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಆದರೆ ಮೇಲಿನಿಂದ ಬಿದ್ದ ಕಾರಣ ಮಾನಿಟರಿಂಗ್ ಮಾಡಬೇಕಾಗಿದೆ ಬಂದಿದೆ. ವರದಿಗಳ ಪ್ರಕಾರ, ಬೇಬಿ ಸಿಟ್ಟರ್ ತನ್ನ ಶಿಫ್ಟ್‌ಗೆ ಮುನ್ನ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲವಂತೆ, ಆದರೆ ಮಗುವಿನ ತಾಯಿಗೆ ಆ ಬಗ್ಗೆ ತಿಳಿಸಲಿಲ್ಲ ಎನ್ನಲಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಘಟನೆಯ ನಂತರ, ಮಗು ಹೇಗಿದೆ ಎಂದು ಕೇಳುವ ಮೊದಲು, ಸಂಬಳ ಪಡೆಯುವ ಬಗ್ಗೆ ಕೇಳಲು ಆಕೆ ತಾಯಿಯ ಕಾಂಟಾಕ್ಟ್ ಮಾಡಿದ್ದಾಳೆ ಎನ್ನಲಾಗಿದೆ.
ಈ ವಿಡಿಯೋ ನೋಡಿದ ಮೇಲೆ ಬೇಬಿ ಸಿಟ್ಟರ್ ಬಳಿ ಮಗುವನ್ನು ಬಿಡುವ ಮುನ್ನ ಯೋಚನೆ ಮಾಡಬೇಕಾಗಿ ಬರುತ್ತದೆ. ನಿಮ್ಮ ಮಗುವಿಗೆ ಇದು ಸಂಭವಿಸಿದರೆ ನೀವು ಏನು ಮಾಡುತ್ತೀರಿ?