
Thrilling Jump Video: ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಆದ್ರೆ ಇಂದು ಬಹುತೇಕರು ಕೋಶ ಓದುವ ಬದಲು ದೇಶ ಸುತ್ತಲೂ ಬಯಸುತ್ತಾರೆ. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಸಾಹಸಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದ್ರೆ ಲೈಫ್‌ಗೊಂದು ಥ್ರಿಲ್ ಸಿಗುತ್ತೆ ಎಂದು ಪ್ರವಾಸಿಗರು ಹೇಳುತ್ತಾರೆ. ಕೆಲವೊಮ್ಮೆ ಥ್ರಿಲ್ ಅನುಭವಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇಂತಹ ಸಾಹಸಮಯ ಚಟುವಟಿಕೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ವಿದೇಶಿ ಪ್ರವಾಸಿಗನೋರ್ವ ಎತ್ತರದ ಜಲಪಾತದಿಂದ ಜಾರುತ್ತಿರುವ ವಿಡಿಯೋ ನೋಡುಗರಲ್ಲಿ ಅಚ್ಚರಿಯನ್ನುಂಟು ಮಾಡುತ್ತಿದೆ.
ಪ್ರವಾಸಿಗನ ಈ ಸಾಹಸದ ವಿಡಿಯೋ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪ್ರವಾಸಕ್ಕೆ ತೆರಳಿದಾಗ ಪ್ರಕೃತಿ ಸೌಂದರ್ಯವನ್ನು ಆನಂದಿಸಬೇಕೇ ಹೊರತು, ಅದರೊಂದಿಗೆ ಚೆಲ್ಲಾಟ ಆಡಬಾರದು ಎಂದು ಸಲಹೆ ನೀಡಿದ್ದಾರೆ. ಪ್ರತಿಬಾರಿಯೂ ಅದೃಷ್ಟ ನಮ್ಮದಾಗಿರಲ್ಲ. ಹಾಗಾಗಿ ಇಂತಹ ಸ್ಥಳಗಳಲ್ಲಿ ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂದು ಪ್ರವಾಸಿಗನಿಗೆ ಜನರು ಪಾಠ ಮಾಡಿದ್ದಾರೆ.
ಪ್ರವಾಸಿಗನೋರ್ವ ಜಲಪಾತದ ತುದಿಯಲ್ಲಿ ಹಗ್ಗ ಹಿಡಿದುಕೊಂಡು ನೇತಾಡುತ್ತಿರೋದನ್ನು ಗಮನಿಸಿಬಹುದು. ಜಲಪಾತದ ನೀರು ಅತ್ಯಂತ ವೇಗವಾಗಿ ಧುಮ್ಮಕ್ಕುತ್ತಿರುತ್ತದೆ. ನೋಡ ನೋಡುತ್ತಿದ್ದಂತೆ ಸಾಹಸಿ ಪ್ರವಾಸಿ, ಹಿಡಿದುಕೊಂಡಿದ್ದ ಹಗ್ಗ ಬಿಡುತ್ತಾನೆ. ಜಲಪಾತದ ಕೆಳಗೆ ಆ ವ್ಯಕ್ತಿ ಬೀಳುತ್ತಿರೋದನ್ನು ಗಮನಿಸಬಹುದು. ನಂತರ ಅಲ್ಲಿಂದ ಪ್ರವಾಸಿಗ ಈಜುತ್ತಾ ದಡ ಸೇರಿದ್ದಾನೆ. ಆದ್ರೆ ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಯಾವ ಸ್ಥಳ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋಗೆ 6.4 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು Alfonso Santaella ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪ್ರವಾಸಿ ವ್ಲಾಗರ್ ಆಗಿರುವ ಅಲ್ಫೊನ್ಸೋ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ 205K ಫಾಲೋವರ್ಸ್‌ಗಳನ್ನು ಹೊಂದಿದ್ದು, ಅಲ್ಫೊನ್ಸೋ ಇನ್‌ಸ್ಟಾಗ್ರಾಂನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಇದನ್ನೂ ಓದಿ: ಸ್ಮಶಾನದ ಪೊದೆಯಲ್ಲಿ ಕಾರ್; ಜನರನ್ನ ನೋಡ್ತಿದ್ದಂತೆ ಚಡ್ಡಿ ಸರಿ ಮಾಡಿಕೊಳ್ಳುತ್ತಾ ಬಂದ BJP ನಾಯಕ
ಅಲ್ಫೊನ್ಸೋ ವಿಡಿಯೋ ನೋಡಿದ ನೆಟ್ಟಿಗರು, ಇದೇ ಕಾರಣಕ್ಕೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಲ ಬದುಕುತ್ತಾರೆ. ಹೀಗೆ ಬಂಡೆ ಮೇಲಿಂದ ಜಾರಿದ ನಂತರ ನಿಮ್ಮ ಬೆನ್ನು ಚೆನ್ನಾಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ಈ ಸ್ಥಳ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. 6.4 ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಂಡಿರುವ ವಿಡಿಯೋಗೆ 600 ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: "ಮನುಷ್ಯರನ್ನು ಅಷ್ಟೊಂದು ಪ್ರೀತಿಸಬೇಡ ಮೂರ್ಖ ಸ್ನೇಹಿತ"; ಆನೆಗೆ ಬುದ್ಧಿ ಹೇಳಿದ ನೆಟ್ಟಿಗರು