ಇತ್ತೀಚಿನ ದಿನಗಳಲ್ಲಿ ಆನೆ ಮತ್ತು ಅದರ ಮಾವುತನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಜನರು ಅದನ್ನು ನೋಡಿದ ನಂತರ ಭಾವುಕರಾಗುತ್ತಿದ್ದಾರೆ. ಯಾಕೆ ಅದರಲ್ಲಿ ಅಂಥದ್ದೇನಿದೆ ಅಂತೀರಾ?. ಈ ವೈರಲ್ ವಿಡಿಯೋದಲ್ಲಿ ಆನೆಯ ನಿಷ್ಠೆ ಮತ್ತು ಮಾವುತನ ಮೇಲೆ ಅದಕ್ಕಿರುವ ಆಳವಾದ ಬಾಂಧವ್ಯವನ್ನು ಕಾಣಬಹುದು.
ಈ ವೈರಲ್ ವಿಡಿಯೋದಲ್ಲಿ, ಆನೆಯೊಂದು ತನ್ನ ಮಾವುತನೊಂದಿಗೆ ಕಾಡಿನ ಮೂಲಕ ಹಾದುಹೋಗುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಆ ಮಾವುತ ನೆಲದ ಮೇಲೆ ಬಿದ್ದಂತೆ ನಟಿಸುತ್ತಾನೆ. ಇದನ್ನು ನೋಡಿದ ಆನೆ ತಕ್ಷಣವೇ ಅಸಮಾಧಾನಗೊಂಡು ತನ್ನ ಮಾಲೀಕನನ್ನು ಅಂದರೆ ಮಾವುತನನ್ನು
ಎತ್ತಲು ಪ್ರಯತ್ನಿಸಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಮಾತು ಬಾರದ ಪ್ರಾಣಿಯು ತನ್ನ ಭಾರವಾದ ಪಾದಗಳು ಮಾಲೀಕನ ದೇಹದ ಮೇಲೆ ಬೀಳದಂತೆ ವಿಶೇಷ ಕಾಳಜಿ ವಹಿಸುತ್ತದೆ. ವಿಡಿಯೋದಲ್ಲಿ ಆನೆಯು ತನ್ನ ಸೊಂಡಿಲಿನಿಂದ ಮಾಲೀಕನನ್ನು ನಿಧಾನವಾಗಿ ಎತ್ತುವುದನ್ನು ನೀವು ನೋಡಬಹುದು. ಈ ದೃಶ್ಯವು ನೆಟ್ಟಿಗರ ಮನವನ್ನು ಗೆದ್ದಿದೆ.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾದ Instagram ನಲ್ಲಿ @s_d_entertainments ಹೆಸರಿನ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಿಡಿಯೋ 33 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ವಿಡಿಯೋವನ್ನ ನೋಡಿದ ನಂತ್ರ ಜನರು ವಿಭಿನ್ನ ರೀತಿಯಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಬಳಕೆದಾರರು "ಮನುಷ್ಯರನ್ನು ಅಷ್ಟೊಂದು ಪ್ರೀತಿಸಬೇಡ ನನ್ನ ಮೂರ್ಖ ಸ್ನೇಹಿತ, ಬೆಲೆ ಹೆಚ್ಚಾಗಿ ಸಿಗೋದಾದರೆ ತನ್ನ ಆತ್ಮಸಾಕ್ಷಿಯನ್ನು ಮಾರಿಕೊಳ್ತಾನೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು "ರೀಲ್ಸ್ ಸಹೋದರನೇ, ಪ್ರಾಣಿಗಳ ಭಾವನೆಗಳೊಂದಿಗೆ ಆಟವಾಡಬೇಡಿ" ಎಂದು ಹೇಳಿದರೆ, ಹಾಗೆಯೇ "ಅವು ನಿನ್ನನ್ನೂ ಪ್ರೀತಿಸುತ್ತವೆ. ಈ ಮೂರ್ಖ ಪ್ರಾಣಿಗಳು ನಿಜವಾಗಿಯೂ ಪ್ರೀತಿಸುತ್ತವೆ" ಎಂದೆಲ್ಲಾ ಮಾವುತನಿಗೆ ತರಾಟೆಗೆ ತೆಗೆದುಕೊಂಡಿರುವವರೇ ಹೆಚ್ಚು.
ಸುಮ್ಮನೆ ಕುಳಿತ ಸಿಂಹ
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ವೈರಲ್ ವಿಡಿಯೋದಲ್ಲಿ ದೇವಾಲಯದ ಹೊರಗೆ ಸಿಂಹವು ಸುಮ್ಮನೆ ಶಾಂತವಾಗಿ ಕುಳಿತಿರುವುದನ್ನು ನೋಡಿ ಪ್ರತಿಯೊಬ್ಬರೂ ದಂಗಾಗಿದ್ದಾರೆ. ಈ ದೃಶ್ಯ ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೀಕ್ಷಣೆ ಮತ್ತು ಕಾಮೆಂಟ್ಸ್ ಗಳಿಸಿವೆ.
ವಿಶ್ವದ ಏಕೈಕ ಸ್ಥಳ
ಈ ವಿಡಿಯೋ ಗುಜರಾತ್‌ನ ಗಿರ್‌ನದ್ದು ಎಂದು ಹೇಳಲಾಗುತ್ತದೆ. ಗಿರ್ ಏಷ್ಯನ್ ಸಿಂಹಗಳ ಏಕೈಕ ನೈಸರ್ಗಿಕ ಆವಾಸಸ್ಥಾನವೆಂದು ಪರಿಗಣಿಸಲಾಗಿದೆ. ಸಿಂಹಗಳು ಕಾಡಿನಲ್ಲಿ ಮುಕ್ತವಾಗಿ ಸಂಚರಿಸುವ ವಿಶ್ವದ ಏಕೈಕ ಸ್ಥಳ ಗಿರ್ ರಾಷ್ಟ್ರೀಯ ಉದ್ಯಾನವನವಾಗಿದೆ. ಗಿರ್ ಪ್ರದೇಶದಲ್ಲಿರುವ ದೇವಾಲಯದ ಬಳಿ ಸಿಂಹವನ್ನು ನೋಡುವುದು ಆಶ್ಚರ್ಯವೇನಲ್ಲ. ಆದರೆ ರಾತ್ರಿಯ ಕತ್ತಲೆಯಲ್ಲಿ ತನ್ನ ವಿಡಿಯೋ ಮಾಡುತ್ತಿರುವ ವ್ಯಕ್ತಿಯನ್ನು ನೋಡಿಯೂ ಸದ್ದಿಲ್ಲದೆ ಕುಳಿತಿರುವುದು ಎಂಥವರನ್ನೂ ದಿಗ್ಭ್ರಮೆಗೊಳಿಸಿದೆ.
ಶಾಂತವಾಗಿ ಕುಳಿತ ಸಿಂಹ
ವಿಡಿಯೋದಲ್ಲಿ ಸಿಂಹವು ದೇವಾಲಯದ ಹೊರಗೆ ತುಂಬಾ ಶಾಂತವಾಗಿ ಕುಳಿತಿದೆ. ಆದರೆ ಅದರ ಕಣ್ಣುಗಳು ಕ್ಯಾಮೆರಾ ಮಾಡುವ ವ್ಯಕ್ತಿಯ ಕಡೆಗೆ ಹೋದ ತಕ್ಷಣ ಅದರ ಮುಖಭಾವದಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು. ಈ 27 ಸೆಕೆಂಡುಗಳ ವೈರಲ್ ದೃಶ್ಯದಲ್ಲಿ ಸಿಂಹವು ತುಂಬಾ ಶಾಂತವಾಗಿ ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ಅದನ್ನು ವೀಕ್ಷಿಸಬಹುದು.
r/indiasocial ನ ರೆಡ್ಡಿಟ್ ಪುಟದಲ್ಲಿ, @UnknownGunman17 ಎಂಬ ಹೆಸರಿನ ಹ್ಯಾಂಡಲ್ 'ಗಿರ್ ದೇವಾಲಯದ ಬಳಿ ಸಿಂಹ' ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಿದೆ. ಕೇವಲ 14 ಗಂಟೆಗಳ ಹಿಂದೆ ಹಂಚಿಕೊಂಡ ಈ ದೃಶ್ಯವು ಇಲ್ಲಿಯವರೆಗೆ ರೆಡ್ಡಿಟ್‌ನಲ್ಲಿ ಕನಿಷ್ಠ 3 ಸಾವಿರ ಅಪ್‌ಗಳನ್ನು ಮತ್ತು 200 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.