Viral Moment: ಪ್ರೇಮಾನಂದ ಮಹಾರಾಜರ ಫೋಟೋ ನೋಡಿ ಕಳ್ಳನ ಮನಸ್ಸು ಬದಲಾಯ್ತು, ಕದ್ದ ಮೊಬೈಲ್ ಭಕ್ತನ ಕೈ ಸೇರ್ತು

Published : Jan 29, 2026, 05:14 PM IST
Premanand Maharaj

ಸಾರಾಂಶ

ಪ್ರೇಮಾನಂದ ಮಹಾರಾಜರ ಪ್ರಭಾವದ ವಿಡಿಯೋ ಒಂದು ವೈರಲ್‌ ಆಗ್ತಿದೆ. ಈ ವಿಡಿಯೋದಲ್ಲಿ ಕಳ್ಳ ಮಾಡಿದ ಕೆಲಸ ಎಲ್ಲರನ್ನು ಅಚ್ಚರಿಗೊಳಿಸಿದೆ. ಪ್ರೇಮಾನಂದ ಮಹಾರಾಜರ ಭಕ್ತರು ಇದು ಮೌಲ್ಯಗಳ ಗೆಲುವು ಎನ್ನುತ್ತಿದ್ದಾರೆ.

ಸಂತರ ಬೋಧನೆಗಳು ಜನರ ಮನಸ್ಸನ್ನು ಬದಲಾಯಿಸುವ ಶಕ್ತಿ ಹೊಂದಿವೆ. ಕಳ್ಳರಲ್ಲೂ ದೇವರನ್ನು ನಂಬುವ, ದೇವರನ್ನು ಆರಾಧಿಸುವ ಭಕ್ತರಿದ್ದಾರೆ. ಅನೇಕ ಘಟನೆಗಳು ಕಳ್ಳರ ಮನಸ್ಸು ಬದಲಿಸಿದ ಉದಾಹರಣೆಗಳಿವೆ. ಕದ್ದ ವಸ್ತುಗಳನ್ನು ವಾಪಸ್ ತಂದಿಟ್ಟ ಅನೇಕ ಕಳ್ಳರಿದ್ದಾರೆ. ಈಗ ಪ್ರೇಮಾನಂದ ಮಹಾರಾಜರ ಭಕ್ತನ ಜೊತೆಯೂ ಇದೇ ನಡೆದಿದೆ. ಭಕ್ತರಿಗೆ ಜೀವನದ ಮಹತ್ವ ಸಾರುತ್ತಿರುವ ಪ್ರೇಮಾನಂದ ಮಹಾರಾಜ (Premananda Maharaja)ರಿಂದ ಭಕ್ತರೊಬ್ಬರ ಮೊಬೈಲ್ ಫೋನ್ ಉಳಿದಿದೆ.

ಬದಲಾಯ್ತು ಕಳ್ಳನ ಮನಸ್ಸು 

ಸಾಮಾಜಿಕ ಜಾಲತಾಣದಲ್ಲಿ ಪ್ರೇಮಾನಂದ ಮಹಾರಾಜರ ಜೊತೆ ವ್ಯಕ್ತಿ ಮಾತನಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ವ್ಯಕ್ತಿ, ಕಳ್ಳತನವಾಗಿದ್ದ ತನ್ನ ಮೊಬೈಲ್ ಹೇಗೆ ವಾಪಸ್ ಬಂತು ಎಂಬುದನ್ನು ಹೇಳ್ತಿದ್ದಾರೆ. ವಿಡಿಯೋ ಪ್ರಕಾರ, ವ್ಯಕ್ತಿಯ ಫೋನನ್ನು ಕಳ್ಳ ಕದ್ದೊಯ್ದಿದ್ದಾನೆ. ಭಕ್ತನ ಮೊಬೈಲ್ ಲಾಕ್ ಸ್ಕ್ರೀನ್ ಮೇಲೆ ಪ್ರೇಮಾನಂದ ಮಹಾರಾಜರ ಫೋಟೋ ಇತ್ತು. ಕಳ್ಳ ಫೋನ್ ಅನ್ಲಾಕ್ ಮಾಡಲು ಪ್ರಯತ್ನಿಸುತ್ತಿದ್ದಾಗ ಪ್ರೇಮಾನಂದ ಮಹಾರಾಜರ ಫೋಟೋ ಕಾಣಿಸಿದೆ. ಭಕ್ತನ ಪ್ರಕಾರ, ಪ್ರೇಮಾನಂದ ಮಹಾರಾಜರ ಸೌಮ್ಯ, ಶಾಂತ ಮತ್ತು ಕರುಣಾಮಯ ಫೋಟೋ ಕಳ್ಳನ ಮೇಲೆ ಆಳವಾದ ಪ್ರಭಾವ ಬೀರಿದೆ. ಫೋಟೋ ನೋಡಿದಾಗ ಅವನಿಗೆ ಅಪರಾಧಿ ಭಾವನೆಯುಂಟಾಗಿದೆ. ಕಳ್ಳನಿಗೆ ಕದ್ದ ಮೊಬೈಲ್ ಇಟ್ಟುಕೊಳ್ಳಲು ಮನಸ್ಸಾಗಲಿಲ್ಲ. ಮನಸ್ಸು ಬದಲಾದ ನಂತ್ರ ಕಳ್ಳ ಮೊಬೈಲ್ನ ಮೂಲ ಮಾಲೀಕರನ್ನು ಸಂಪರ್ಕಿಸಿ ಫೋನ್ ಅನ್ನು ಸುರಕ್ಷಿತವಾಗಿ ಹಿಂತಿರುಗಿಸಿದ್ದಾನೆ. ನಾನೂ ಕೂಡ ಪ್ರೇಮಾನಂದ ಮಹಾರಾಜರ ಭಕ್ತ. ಹಾಗಾಗಿ ನಿಮ್ಮ ಮೊಬೈಲ್ ಉಳಿದಿದೆ ಅಂತ ಕಳ್ಳ ಹೇಳಿದ್ದಾನೆ.

ಈ Video ನೋಡಿದ್ಮೇಲೆ ನೀವು ಬಿರಿಯಾನಿ ತಿನ್ನೋದನ್ನ ನಿಲ್ಲಿಸಿದ್ರೂ ಆಶ್ಚರ್ಯವೇನಿಲ್ಲ!

ಭಕ್ತನಿಂದ ಈ ಮಾತು ಕೇಳ್ತಿದ್ದಂತೆ ಪ್ರೇಮಾನಂದ ಮಹಾರಾಜರು ನಗಲು ಶುರು ಮಾಡಿದ್ದಾರೆ. ಅಲ್ಲದೆ, ಇದು ಭಗವಂತನ ಆಟ ಅಂತ ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ. ಅವರ ಈ ಸರಳತೆ ಹಾಗೂ ಮುಗ್ದ ನಗು ಭಕ್ತರನ್ನು ಮತ್ತಷ್ಟು ಸೆಳೆದಿದೆ. ಇದನ್ನು ಕೇಳಿದ ಪ್ರೇಮಾನಂದ ಮಹಾರಾಜರ ಭಕ್ತರು ಭಾವುಕರಾಗಿದ್ದಾರೆ. ಜನರು ಇದನ್ನು ಮೌಲ್ಯಗಳ ಗೆಲುವು ಮತ್ತು ನಂಬಿಕೆಯ ಶಕ್ತಿ ಎನ್ನುತ್ತಿದ್ದಾರೆ.

ಪ್ರೇಮಾನಂದ ಮಹಾರಾಜರನ್ನು ಭೇಟಿಯಾದ ಸಿಧು ಪತ್ನಿ 

ಪ್ರೇಮಾನಂದ ಮಹಾರಾಜರನ್ನು ಭೇಟಿಯಾಗಲು ಸಾಮಾನ್ಯ ಜನರು ಮಾತ್ರವಲ್ಲ ಸೆಲೆಬ್ರಿಟಿಗಳು ವೃಂದಾವನಕ್ಕೆ ಬರ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರೇಮಾನಂದ ಮಹಾರಾಜರ ಪ್ರಸಿದ್ಧಿ ಹೆಚ್ಚಾಗ್ತಾನೇ ಇದೆ. ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಆಗಾಗ ಪ್ರೇಮಾನಂದ ಮಹರಾಜರನ್ನು ಭೇಟಿ ಮಾಡ್ತಿರುತ್ತಾರೆ. ಈಗ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್, ಪ್ರೇಮಾನಂದ ಮಹಾರಾಜರನ್ನು ಭೇಟಿ ಮಾಡಿದ್ದಾರೆ. ತನ್ನ ಸುಧಾರಣೆ ಹಾಗೂ ಸಮಾಜ ಸೇವೆ ಬಗ್ಗೆ ನವಜೋತ್ ಕೌರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಪ್ರೇಮಾನಂದ ಮಹಾರಾಜರು, ಜಪಮಾಲೆಯೊಂದಿಗೆ ಕುಳಿತುಕೊಳ್ಳುವುದು ಅನಿವಾರ್ಯವಲ್ಲ. ತಮ್ಮ ಸ್ಥಾನವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಎಂದಿದ್ದಾರೆ. 

ಲಂಡನ್ ಬೀದಿಗಳಲ್ಲಿ ಗುಟ್ಕಾ ಕಲೆ; 'ಬಾಯಲ್ಲಿ ಕೇಸರಿ' ಹೇಳಿದ ಭಾರತೀಯರ ವಿಡಿಯೋ

ಸಮಾಜಕ್ಕೆ ಸೇವೆ ಸಲ್ಲಿಸುವವರನ್ನು ದೇವರು ದೈವಿಕ ಮನೋಭಾವದಿಂದ ಆಶೀರ್ವದಿಸುತ್ತಾನೆ. ನಾವು ನೂರು ರೂಪಾಯಿಗಳನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿದರೆ, ನಮ್ಮ ತಂದೆ ನಮಗೆ ಸಾವಿರ ರೂಪಾಯಿಗಳನ್ನು ನೀಡುತ್ತಾರೆ. ನಾವು ಬುದ್ಧಿವಂತಿಕೆಯಿಂದ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದರೆ, ಅವರು ನಮಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುತ್ತಾರೆ. ಅದೇ ರೀತಿ, ನಾವು ಪಡೆದ ಸ್ಥಾನವನ್ನು ಬುದ್ಧಿವಂತಿಕೆಯಿಂದ ಬಳಸಬೇಕು ಮತ್ತು ಸಮಾಜಕ್ಕೆ ಸಂತೋಷವನ್ನು ತರಬೇಕು ಎಂದಿದ್ದಾರೆ.

PREV
Read more Articles on
click me!

Recommended Stories

ಸೀರೆಯುಟ್ಟು ಭಸ್ಮ ಹಚ್ಚಿ ಮಂತ್ರ ಉಚ್ಚರಿಸಿದ ವಿದೇಶಿ ಮಹಿಳೆಯರು , ಹೆಚ್ಚಾಗ್ತಿದೆ ಹಿಂದೂ ಧರ್ಮದತ್ತ ಜಾಗತಿಕ ಆಸಕ್ತಿ
ಏರ್ ಇಂಡಿಯಾ ಗಗನಸಖಿಯಾಗಿ 35 ವರ್ಷ ಸೇವೆ, ಕೊನೆ ಹಾರಾಟದ ಭಾವುಕ ಕ್ಷಣ ವೈರಲ್