
ಪ್ರಾಮಾಣಿಕತೆಗೆ ಇನ್ನೊಂದು ಹೆಸರು ನಾಯಿ (dog). ತನ್ನ ಮಾಲೀಕ ನೀಡಿದ ಪ್ರೀತಿಗೆ ಡಬಲ್ ಪ್ರೀತಿಯನ್ನು ನಾಯಿ ನೀಡುತ್ತದೆ. ಎಂಥ ಕಷ್ಟವಾದ್ರೂ ಮಾಲೀಕನನ್ನು ನಾಯಿ ಬಿಟ್ಟು ಹೋಗೋದಿಲ್ಲ. ಮಾಲೀಕನನ್ನು ರಕ್ಷಣೆ ಮಾಡಿದ ಅನೇಕ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಒಂದು ಮನಸ್ಸು ಕರಗಿಸುವಂತಿದೆ. ವಿಡಿಯೋ ನೋಡಿದ ಪ್ರಾಣಿ ಪ್ರೇಮಿಗಳು ಭಾವುಕರಾಗಿದ್ದಾರೆ. ವಿಪರೀತ ಹಿಮಪಾತವಾಗ್ತಿದ್ದರೂ ಚಳಿಗೆ ಹೆದರದೆ ನಾಯಿಯೊಂದು ತನ್ನ ಮಾಲೀಕನ ಶವವನ್ನು ಕಾದಿದೆ. ಒಂದಲ್ಲ ಎರಡಲ್ಲ ಸತತ ನಾಲ್ಕು ದಿನಗಳ ಕಾಲ ಶವದ ಪಕ್ಕದಲ್ಲಿ ನಿಂತಿತ್ತು ನಾಯಿ.
ಹಿಮಾಚಲ ಪ್ರದೇಶ (Himachal Pradesh )ದ ಚಂಬಾದಲ್ಲಿ ವಿಪರೀತ ಹಿಮಪಾತವಾಗ್ತಿದೆ. ಅಲ್ಲಿಗೆ ಹೋಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದರು. ಚಳಿಯಿಂದಾಗಿ ಯುವಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ರಕ್ಷಣಾ ಪಡೆಗೆ ಸಿಕ್ಕಿತ್ತು. ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಹೆಲಿಕಾಪ್ಟರ್ ಸೇವೆಯು ಚಂಬಾ ಜಿಲ್ಲೆಯ ಭರ್ಮೋರ್ ಉಪವಿಭಾಗದ ಹೋಳಿ ಪ್ರದೇಶದ, ಹಿಮದಿಂದ ಆವೃತವಾದ ಬೆಟ್ಟದಲ್ಲಿದ್ದ ಎರಡು ಶವಗಳನ್ನು ಹೊರತೆಗೆದಿದೆ. ಮೃತರಿಬ್ಬರು ಸಹೋದರ ಸಂಬಂಧಿಗಳು ಎನ್ನಲಾಗಿದೆ. ಅವರ ಜೊತೆ ಹೋಗಿದ್ದ ಪಿಟ್ ಬುಲ್ ಎಲ್ಲರ ಗಮನ ಸೆಳೆದಿದೆ.
ಸೊಳ್ಳೆ ಹತ್ತಿಕ್ಕಲು ಚರಂಡಿಗೆ ಪರದೆ ಹಾಕಿದ ನಗರ ಪಾಲಿಕೆ: ಮೇಯರ್ ಟ್ರೋಲ್, ವಿಡಿಯೋ ವೈರಲ್
ಯುವಕನ ದೇಹ ದಟ್ಟವಾದ ಹಿಮದ ಪದರಗಳ ಅಡಿಯಲ್ಲಿ ಹೂತುಹೋಗಿತ್ತು. ಆದ್ರೆ ಯುವಕನ ಸಾಕು ನಾಯಿ ಹಿಮದಲ್ಲಿ ಹೆಪ್ಪುಗಟ್ಟಿದ್ರೂ ಅಲುಗಾಡಲಿಲ್ಲ. ನಾಲ್ಕು ದಿನಗಳಿಂದ ಏನೂ ತಿನ್ನದೆ ಮೂಕ ವೇದನೆ ಅನುಭವಿಸುತ್ತಿತ್ತು. ಆ ಚಳಿಯಲ್ಲಿ ಯಾರೇ ಇದ್ರೂ ಬದುಕೋದು ಕಷ್ಟ. ಚಳಿಯಿಂದ ಸುರಕ್ಷಿತ ಜಾಗಕ್ಕೆ ಓಡಿ ಬರುವ ಪ್ರಯತ್ನ ನಡೆಸ್ತಾರೆ. ಆದ್ರೆ ನಾಯಿ ಮಾತ್ರ ಸ್ಥಳವನ್ನು ಬಿಡಲಿಲ್ಲ. ಹಿಮಪಾತದಲ್ಲೂ ಜಗ್ಗದ ನಾಯಿ, ಕಾಡು ಪ್ರಾಣಿಗಳಿಂದ ಮಾಲೀಕನ ಶವವನ್ನು ರಕ್ಷಿಸಿತ್ತು.
ಯುವಕರ ಬಗ್ಗೆ ಮಾಹಿತಿ ತಿಳಿದ ತಕ್ಷಣ ಹೆಲಿಕಾಪ್ಟರ್ ಅಲ್ಲಿಗೆ ತಲುಪಿದೆ. ರಕ್ಷಣಾ ಪಡೆಯನ್ನು ನೋಡಿ ನಾಯಿ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದೆ. ಮಾಲೀಕನಿಗೆ ತೊಂದರೆ ನೀಡಲು ಬಂದಿದ್ದಾರೆಂದು ನಾಯಿ ಭಾವಿಸಿದೆ. ಶವವನ್ನು ಮುಟ್ಟಲು, ಹತ್ತಿರಕ್ಕೆ ಹೋಗಲು ನಾಯಿ ವಿರೋಧ ವ್ಯಕ್ತಪಡಿಸಿದೆ. ಸಾಕಷ್ಟು ಪ್ರಯತ್ನದ ನಂತ್ರ ಹಾಗೂ ನಾಯಿಗೆ ಭರವಸೆ ನೀಡಿದ ನಂತ್ರ ನಾಯಿ ಸಿಬ್ಬಂದಿಯನ್ನು ನಂಬಿದೆ. ಸಹಾಯಕ್ಕೆ ಬಂದಿದ್ದಾರೆಂಬುದನ್ನು ಅರಿತುಕೊಂಡು ದೂರ ಸರಿದಿದೆ. ಶವಗಳನ್ನು ಮೇಲಕ್ಕೆ ಎತ್ತಿ, ಹೆಲಿಕಾಪ್ಟರ್ ಗೆ ತುಂಬಲು ಯಾವುದೇ ವಿರೋಧ ಮಾಡಿಲ್ಲ.
ಜಸ್ಟ್ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್!
ಸೋಶಿಯಲ್ ಮೀಡಿಯಾದಲ್ಲಿ ಹಿಮದಡಿ ಸಿಲುಕಿರುವ ಶವವನ್ನು ತೆಗೆಯುತ್ತಿರುವ ಹಾಗೂ ಅಲ್ಲಿಯೇ ಇರುವ ನಾಯಿ ವಿಡಿಯೋ ವೈರಲ್ ಆಗಿದೆ. ನಾಯಿ, ಹಿಮ ಚಳಿಯಲ್ಲಿ ನಡುಗುತ್ತಿರೋದನ್ನು ಇನ್ನೊಂದು ವಿಡಿಯೋದಲ್ಲಿ ನೋಡ್ಬಹುದು. ಶವವನ್ನು ಹೆಲಿಕಾಪ್ಟರ್ ಗೆ ತುಂಬಲಾಗಿದೆ. ನಾಯಿ ರಕ್ಷಣೆ ಮಾಡಲಾಗಿದೆ. ನಾಯಿ ಹೇಗಿದೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ನಾಯಿ ಪ್ರಾಮಾಣಿಕತೆ, ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.