
Snake viral video: ಸಾಮಾನ್ಯವಾಗಿ ನೈಸರ್ಗಿಕ ಕರೆ(Nature call) ಬಂದಾಗ ಓಡೋಗಿ ಕುಳಿತುಕೊಳ್ಳೋರೆ ಹೆಚ್ಚು ಕೆಲವರು ಲೈಟ್ ಕೂಡ ಆನ್ ಮಾಡಲ್ಲ, ಸೀದಾ ಹೋಗಿ ಕುಳಿತುಕೊಂದು ಬಿಡುತ್ತಾರೆ. ಆದರೆ ಈಗ ನಾವು ಹೇಳುತ್ತಿರುವ ವಿಚಾರ ಕೇಳಿದರೆ ನೀವು ಟಾಯ್ಲೆಟ್‌ನಲ್ಲಿ ಕುಳಿತುಕೊಳ್ಳುವ ಮುನ್ನ ಸಾವಿರ ಬಾರಿ ಯೋಚಿಸುವುದು ಪಕ್ಕಾ. ಹೆಚ್ಚಾಗಿ ವೆಸ್ಟರ್ನ್ ಟಾಯ್ಲೆಟ್‌ನಲ್ಲಿ(western commode) ಕುಳಿತುಕೊಳ್ಳುವಾಗಲೆಲ್ಲಾ ಒಳಗಿನಿಂದ ಹಾವು ಬಂದರೆ ಹೇಗಿರುತ್ತದೆ ಎಂಬ ಭಯ ಅನೇಕರಿಗಿದೆ. ಇದನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹೇಳಿಕೊಂಡು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಹೀಗಿರುವಾಗ ಈ ಕಲ್ಪನೆಯನ್ನು ನಿಜ ಮಾಡುವ ಘಟನೆಯೊಂದು ಥೈಲ್ಯಾಂಡ್‌ನಲ್ಲಿ ನಡೆದಿದೆ. ಮಧ್ಯರಾತ್ರಿ ಮೂರು ಗಂಟೆಯ ಸಮಯಕ್ಕೆ ಸುಸ್ಸು ಬಂತೆಂದು ಎದ್ದು ವಾಶ್ ರೂಮ್‌ಗೆ ಹೋದ ವ್ಯಕ್ತಿ ಅಲ್ಲಿದ್ದ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದು, ಆ ದೃಶ್ಯ ಆತನಿಗೆ ಹಾರರ್ ಸಿನಿಮಾವನ್ನು ನೆನಪಿಸಿದೆ. ಈ ಘಟನೆಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟಾಯ್ಲೆಟ್ ಕಮೋಡ್‌ನಲ್ಲಿ ಸುರುಳಿ ಸುತ್ತಿ ಮಲಗಿತ್ತು ಹೆಬ್ಬಾವು:
ಫೇಸ್‌ಬುಕ್‌ನಲ್ಲಿ(Facebook) ಹಂಚಿಕೊಂಡ ಮಾಹಿತಿಯಂತೆ ಥೈಲ್ಯಾಂಡ್‌ನ ವ್ಯಕ್ತಿಯೊಬ್ಬರು ನಸುಕಿನ 3 ಗಂಟೆ ಸುಮಾರಿಗೆ ಎದ್ದು ವಾಶ್‌ರೂಮ್‌ಗೆ ಹೋಗಿದ್ದಾರೆ. ಈ ವೇಳೆ ಕಮೋಡ್ ಒಳಗಿನ ದೃಶ್ಯ ನೋಡಿ ಅವರು ಆಘಾತಗೊಂಡಿದ್ದಾರೆ. ಅಲ್ಲಿ ಹೆಬ್ಬಾವೊಂದು ಸುರುಳಿ ಸುತ್ತಿ ಮಲಗಿದೆ. ಈ ದೃಶ್ಯವನ್ನು ಅವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ದೃಶ್ಯವನ್ನು ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಇದು ಈಗ ಭಾರಿ ವೈರಲ್ ಆಗುತ್ತಿದೆ.
ಫೇಸ್‌ಬುಕ್‌ನಲ್ಲಿ ಹೆಬ್ಬಾವಿನ ವೀಡಿಯೋ ಸಖತ್ ವೈರಲ್
ಈ ವೀಡಿಯೋ ಫೇಸ್‌ಬುಕ್‌ನಲ್ಲಿ(Facebook Video) ಶೇರ್ ಮಾಡಿದ ಅವರು ಹೀಗೆ ಬರೆದುಕೊಂಡಿದ್ದಾರೆ. ನಾನು ಬೆಳಗಿನ ಜಾವ 3 ಗಂಟೆಗೆ ಶೌಚಾಲಯಕ್ಕೆ ಹೋಗಿದ್ದ ವೇಳೆ ಈ ಅಲ್ಲಿ ಈ ದೃಶ್ಯ ಕಾಣಿಸಿದೆ. ಇದನ್ನು ನೋಡಿ ಸುಮಾರು ಕೆಲ ಹತ್ತು ನಾನು ಆಘಾತಕ್ಕೊಳಗಾಗಿದ್ದೆ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಹೆಬ್ಬಾವು Python)ಅವರ ಕಾಮೋಡ್‌ನಲ್ಲಿ ಸುರುಳಿ ಸುತ್ತಿ ಮಲಗಿರುವ ದೃಶ್ಯವನ್ನು ಅವರು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಬೃಹತ್ ಗಾತ್ರದ ಹಾವು ಕಾಮೋಡ್‌ನಲ್ಲಿ(snakes in commode) ಸುರುಳಿ ಸುತ್ತಿ ಮಲಗಿರುವುದನ್ನು ಕಾಣಬಹುದಾಗಿದೆ.
ಉರಗ ರಕ್ಷಕರಿಂದ ಹಾವಿನ ರಕ್ಷಣೆ:
ಈ ಘಟನೆಯ ನಂತರ ಅವರು ಸ್ಥಳೀಯ ಆಡಳಿತಕ್ಕೆ ವಿಚಾರ ತಿಳಿಸಿದ್ದು, ಉರಗ ರಕ್ಷಕರು (snake rescue) ಬಂದು ಈ ಹೆಬ್ಬಾವನ್ನು ಸುರಕ್ಷಿತವಾಗಿ ಕಮೋಡ್‌ನಿಂದ ತೆಗೆದು ರಕ್ಷಣೆ ಮಾಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಾವನ್ನು ಸುರಕ್ಷಿತವಾಗಿ ಹೊರತೆಗೆದ ಮತ್ತೊಂದು ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಹಾಯ ಮಾಡಲು ಬಂದ ರಕ್ಷಣಾ ತಂಡಕ್ಕೆ ಧನ್ಯವಾದಗಳು ಈ ರೀತಿಯ ಘಟನೆ ನಿಮ್ಮಲ್ಲು ನಡೆದರೆ 199ಗೆ ಕರೆ ಮಾಡಿ ಎಂದು ಅವರು ಹೇಳಿದ್ದಾರೆ.
ಹಾವಿನ ವೀಡಿಯೋ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು:
ಈ ವೀಡಿಯೊ ಈಗ ಎಫ್‌ಬಿಯಲ್ಲಿ ಭಾರಿ ವೈರಲ್(Facebook viral video) ಆಗಿದ್ದು, ಅನೇಕರು ಇದನ್ನು ರೀಶೇರ್ ಮಾಡಿದ್ದು, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅನೇಕರು ಈ ಇಷ್ಟು ದೊಡ್ಡ ಗಾತ್ರದ ಹಾವು ಶೌಚಾಲಯವನ್ನು ಪ್ರವೇಶಿಸಿದ್ದು ಹೇಗೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಮನೆ ಅರಣ್ಯ ಪ್ರದೇಶದ ಬಳಿ ಇದೆಯೇ? ನಿಮ್ಮ ಮನೆ ಹಾಗೂ ಸ್ನಾನಗೃಹ ನೆಲ ಮಹಡಿಯಲ್ಲಿ ಇದೆಯೇ ಎಂದು ಅನೇಕರು ಕೇಳಿದ್ದಾರೆ. ನಾವು ಹೆಚ್ಚಾಗಿ ಕಮೋಡ್‌ಗೆ ಕ್ಲೀನಿಂಗ್ ಕೆಮಿಕಲ್‌ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅವು ಹೆಚ್ಚಾಗಿ ಆಮ್ಲೀಯವಾಗಿರುತ್ತವೆ. ಹೀಗಾಗಿ ಹಾವುಗಳು ಕಮೋಡ್ ಪೈಪ್‌ಗಳ ಒಳಗೆ ಬರುವುದು ತಪ್ಪುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಘಟನೆಯ ನಂತರ ನನಗೆ ಟಾಯ್ಲೆಟ್ ಮೇಲೆ ಕೂರುವುದಕ್ಕೆ ಭಯವಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಟಾಯ್ಲೆಟ್‌ನಲ್ಲಿ ಕೂರುವ ಮುನ್ನ ಯೋಚನೆ ಮಾಡುವಂತೆ ಮಾಡಿದೆ.
ಮಳೆಗಾಲದಲ್ಲಿ ಜಾಗರೂಕರಾಗಿರಿ:
ಹೇಳಿ ಕೇಳಿ ಇದು ಮಳೆಗಾಲ. ಹಾವು ಚೇಳು ಹಲ್ಲಿಗಳೆಲ್ಲಾ ಈಗ ಸುರಕ್ಷಿತವಾದ ನಿರ್ಜನವಾದ ಜಾಗವನ್ನು ಹುಡುಕಿ ಬರುತ್ತವೆ. ಹೆಲ್ಮೆಟ್‌ಗಳ ಒಳಗೆ, ಶೂಗಳ ಒಳಗೆ ಮನೆಯ ಕಬೋರ್ಡ್ ಒಳಗೆ, ಏರ್ ಕಂಡೀಷನ್ ಒಳಗೆ ಹೀಗೆ ಎಲ್ಲೆಂದರಲ್ಲಿ ಹಾವುಗಳು ಸೇರಿಕೊಳ್ಳುತ್ತವೆ. ಹೀಗಿರುವಾಗ ಪ್ರತಿಯೊಂದನ್ನು ತೆರೆಯುವಾಗ ಬಹಳ ಜೋಪಾನವಾಗಿರುವುದು ಅಗತ್ಯ.
ಫೇಸ್‌ಬುಕ್‌ನಲ್ಲಿ ವೈರಲ್ ಆದ ಹಾವಿನ ವೀಡಿಯೋ ಇಲ್ಲಿದೆ ನೋಡಿ