ಪತ್ನಿ ಜೊತೆ ಜಗಳ, ಯಾರೂ ಇಲ್ಲದ ಮನೆಗೆ ನುಗ್ಗಿ, ಅಲ್ಲೇ ಸ್ನಾನ, ಊಟ ಮಾಡಿ ನಾಲ್ಕು ದಿನ ಕಳೆದ ಗಂಡ!

Published : Jun 20, 2025, 06:49 PM ISTUpdated : Jun 20, 2025, 06:51 PM IST
ಪತ್ನಿ ಜೊತೆ ಜಗಳ, ಯಾರೂ ಇಲ್ಲದ ಮನೆಗೆ ನುಗ್ಗಿ, ಅಲ್ಲೇ ಸ್ನಾನ, ಊಟ ಮಾಡಿ ನಾಲ್ಕು ದಿನ ಕಳೆದ ಗಂಡ!

ಸಾರಾಂಶ

ಮನೆಯ ಒಡೆಯ ಇಲ್ಲದಾಗ್ಯೂ ಮನೆಯಲ್ಲಿ ಓಡಾಟ ಕಂಡ ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದರು.

ಫ್ಲೋರಿಡಾ: ಪತ್ನಿ ಜೊತೆ ಜಗಳವಾದ 44 ವರ್ಷದ ವ್ಯಕ್ತಿ ಮನೆಗೆ ಹೋಗದೆ, ಲಾಕ್ ಮಾಡಿದ್ದ ಬೇರೆಯವರ ಮನೆಗೆ ನುಗ್ಗಿ ರಾದ್ಧಾಂತ ಮಾಡಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಜೋ ಎಂಬ ವ್ಯಕ್ತಿ ನಾಲ್ಕು ದಿನಗಳಿಂದ ಯಾರೂ ಇಲ್ಲದ ಮನೆಯಲ್ಲಿ ಅಡುಗೆ ಮಾಡಿ, ವಿಶ್ರಾಂತಿ ಪಡೆಯುತ್ತಿದ್ದ. ಮನೆಯ ಒಡೆಯ ಇಲ್ಲದಾಗ್ಯೂ ಮನೆಯಲ್ಲಿ ಓಡಾಟ ಕಂಡ ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ಕಾರು ದಿನಗಳಿಂದ ಹೆಂಡ್ತಿಯ ಭಯಕ್ಕೆ ಮನೆಗೆ ಹೋಗಲಾಗದೆ, ಹೊರಗಡೆ ಇರಲಾಗದ, ಯಾರೂ ಇಲ್ಲದ ಮನೆಗೆ ನುಗ್ಗಿದ್ದ ಆಸಾಮಿ.

ಮನೆಯಲ್ಲಿ ಓಡಾಟ ಕಂಡ ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಬರುವಾಗ ಜೋ ಸ್ನಾನ ಮಾಡಿ, ಅಡುಗೆ ಮಾಡ್ತಾ ಇದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಪತ್ನಿ ಜೊತೆ ಜಗಳವಾದ್ದರಿಂದ ಮನೆಗೆ ಹೋಗದೆ, ಲಾಕ್ ಮಾಡಿದ್ದ ಮನೆಗೆ ನುಗ್ಗಿದ್ದಾನೆ. ಆ ಮನೆ ಯಾರದ್ದು ಅಂತಾನೂ ಪಾಪ ಜೋ 'ಕುಮಾರನಿಗೆ' ಗೊತ್ತಿರಲಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಜೋ ತನ್ನ ಪರಿಸ್ಥಿತಿ ಬಾಯಿಬಿಟ್ಟಿದ್ದಾನೆ. ಪತ್ನಿಯೊಂದಿಗೆ ಜಗಳವಾಗಿದ್ದು ಮನೆಗೆ ಹೋಗಲು ಇಷ್ಟವಿಲ್ಲ ಹೀಗಾಗಿ ಹಸಿವು ತಡೆಯಾಗದೇ ಯಾರದ್ದೋ ಮನೆಗೆ ನುಗ್ಗಿದ್ದೇನೆ. ಆದರೆ ಇದು ಯಾರ ಮನೆ ಎಂದು ನನಗೆ ತಿಳಿದಿಲ್ಲ ಎಂದಿದ್ದಾನೆ. ಸದ್ಯ ಬೇರೆಯವರ ಮನೆಗೆ ನುಗ್ಗಿ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್