Roti Making Made Easy: ಮಹಿಳೆಯಾಗಿರಲಿ ಅಥವಾ ಪುರುಷನಾಗಿರಲಿ, ಅಡುಗೆ ಮಾಡುವಾಗ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ರೊಟ್ಟಿ ತಟ್ಟೋದು. ಹಿಟ್ಟನ್ನು ಬೆರೆಸುವುದರಿಂದ ಹಿಡಿದು ರೊಟ್ಟಿ ನಾದಿ ನಂತರ ಅವುಗಳನ್ನು ಬೇಯಿಸಿ ತಯಾರಿಸುವುದು. ಇದರಲ್ಲಿಯೂ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ರೊಟ್ಟಿಗಳನ್ನು ಸರಿಯಾದ ಆಕಾರದಲ್ಲಿ ತಟ್ಟುವುದು. ನಿಮ್ಮ ಹೆಚ್ಚಿನ ಸಮಯವನ್ನು ಕೇವಲ ಒಂದು ರೊಟ್ಟಿ ಮಾಡುವುದರಲ್ಲಿ ಕಳೆಯುತ್ತಿದ್ದರೆ ಬಹುಶಃ ಈ ವಿಡಿಯೋ ನಿಮಗೆ ಸಹಾಯ ಮಾಡಬಹುದು. ಹೌದು, ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ರೊಟ್ಟಿಯನ್ನು ತಟ್ಟುವ ವಿಶಿಷ್ಟ ವಿಧಾನವನ್ನು (Roti-Making Method Earlier) ಕಂಡುಕೊಂಡಿದ್ದಾರೆ. ಅವರ ಈ ಟೆಕ್ನಿಕ್‌ನಿಂದ ಅವರು ಏಕಕಾಲದಲ್ಲಿ 4-5 ರೊಟ್ಟಿಗಳನ್ನು ತಟ್ಟಿ ಬೇಯಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ವಿಶಿಷ್ಟವಾಗಿ ಏಕಕಾಲದಲ್ಲಿ ಅನೇಕ ರೊಟ್ಟಿಗಳನ್ನು ತಯಾರಿಸುವುದನ್ನು ಕಾಣಬಹುದು. ಈ ವಿಧಾನವು ತುಂಬಾ ಪರಿಣಾಮಕಾರಿ ಮತ್ತು ಆಸಕ್ತಿದಾಯಕವಾಗಿದ್ದು, ಜನರು ಅದನ್ನು ನೋಡಿ ಬೆರಗಾಗುತ್ತಾರೆ ಮತ್ತು ಅನೇಕ ಜನರು ಇದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.
ವಿಡಿಯೋಗೆ ಕಾಮೆಂಟ್‌ಗಳ ಸುರಿಮಳೆ
ವಿಡಿಯೋದಲ್ಲಿ ಮಹಿಳೆ ಸಾಂಪ್ರದಾಯಿಕ ವಿಧಾನಗಳಾದ ಲಟ್ಟಣಿಗೆಯಲ್ಲಿ ತಟ್ಟೋದು ಮತ್ತು ಸ್ಟೌವ್‌ನಲ್ಲೇ ಮಾಡೋದನ್ನು ಹೊರತುಪಡಿಸಿ ಭಿನ್ನವಾದ ವಿಧಾನವನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದು. ಇದರಲ್ಲಿ 4 ರಿಂದ 5 ರೊಟ್ಟಿಗಳನ್ನು ಏಕಕಾಲದಲ್ಲಿ ತಟ್ಟಿ ಬೇಯಿಸಲಾಗುತ್ತದೆ. ಕೆಲವರು ಇದನ್ನು 'ಮಲ್ಟಿ-ಟಾಸ್ಕಿಂಗ್ ರೊಟ್ಟಿ ಸ್ಟೈಲ್' ಎಂದು ಕರೆಯುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಲು ಸ್ಮಾರ್ಟ್ ತಂತ್ರಗಳನ್ನು ಅಳವಡಿಸಿಕೊಳ್ಳಲು ಬಯಸುವ ಮಹಿಳೆಯರು ಮತ್ತು ಗೃಹಿಣಿಯರು ಈ ವಿಡಿಯೋವನ್ನು ವಿಶೇಷವಾಗಿ ಇಷ್ಟಪಟ್ಟಿದ್ದಾರೆ. ಕಡಿಮೆ ಸಮಯ, ಕಡಿಮೆ ಶ್ರಮ ಮತ್ತು ಹೆಚ್ಚಿನ ಉತ್ಪಾದನೆ ಈ ಸ್ಟೈಲ್‌ನ ವಿಶೇಷತೆಯಾಗಿದೆ. ವಿಡಿಯೋ ಸಾವಿರಾರು ಲೈಕ್ಸ್ ಮತ್ತು ಶೇರ್‌ಗಳನ್ನು ಪಡೆದುಕೊಂಡಿದೆ. ಜನರು ಸಹ ಇದಕ್ಕೆ ಅತ್ಯುತ್ತಮ ರೀತಿಯಲ್ಲೇ ಕಾಮೆಂಟ್ ಮಾಡುತ್ತಿದ್ದಾರೆ.
"ವಾವ್ ಭಾಭಿ ಜೀ! ಹೋಟೆಲ್ ಜನ ಕೂಡ ಈ ವಿಚಾರದಲ್ಲಿ ಹಿಂದೆ ಇದ್ದಾರೆ!"
"ನಾನು ಈ ಟೆಕ್ನಿಕ್ ಅಮ್ಮನಿಗೆ ತೋರಿಸಲೇಬೇಕು!"
"ರೊಟ್ಟಿ ತಯಾರಿಸುವ ಕ್ರಾಂತಿ ಇಲ್ಲಿದೆ!"
"ಈಗ ನೀವು ರೊಟ್ಟಿ ಉರುಳಿಸಲು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದೇಳಬೇಕಾಗಿಲ್ಲ!"
"ಇದು ಯಂತ್ರಕ್ಕಿಂತ ವೇಗವಾಗಿದೆ, ಭಾಭಿ ಜೀ!"
“ಇವರಿಗೆ ಪ್ರಶಸ್ತಿ ಬರಲೇಬೇಕು!”
ವಿಡಿಯೋದಲ್ಲಿ ಏನಿದೆ?
ಈ ಹೊಸ ಸ್ಟೈಲ್ ರೊಟ್ಟಿ ತಯಾರಿಕೆಗೆ ವಿಶೇಷವಾಗಿ ಕೆಲಸ ಮಾಡುವ ಮಹಿಳೆಯರು, ತಾಯಂದಿರು ಹೆಚ್ಚಿನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಅವರು ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ವಿಡಿಯೋದಲ್ಲಿ, ಹಿಟ್ಟಿನ ಉಂಡೆಗಳನ್ನು ಮಾಡುವ ಮೊದಲು, ಮಹಿಳೆ ಅವುಗಳನ್ನು ಉದ್ದವಾಗಿ ಮಾಡಿ ಸ್ವಲ್ಪ ಸ್ವಲ್ಪ ದೂರದಲ್ಲಿ ಚಪ್ಪಟೆಗೊಳಿಸುತ್ತಾ ಹೋದರು. ನಂತರ, ರೊಟ್ಟಿ ತಟ್ಟುವಾಗ ಒಂದಕ್ಕೊಂದು ಅಂಟಿಕೊಳ್ಳದಂತೆ ಸ್ವಲ್ಪ ಒಣ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಅವುಗಳ ಮೇಲೆ ಹಾಕಿದರು. ಈಗ ಉಂಡೆಗಳಾಗಿ ಬೇರ್ಪಡಿಸಿ, ಒಂದರ ಮೇಲೊಂದರಂತೆ ಇರಿಸಿದರು. ಆ ನಂತರ ಈ ಎಲ್ಲಾ ರೊಟ್ಟಿಗಳನ್ನು ಒಟ್ಟಿಗೆ ರೋಲಿಂಗ್ ಪಿನ್ (ಲಟ್ಟಣಿಗೆ) ತೆಗೆದುಕೊಂಡು ಲಟ್ಟಿಸಿ, ಒಂದಕ್ಕೊಂದು ಅಂಟಿಕೊಳ್ಳದಂತೆ ತೆಗೆದು ಬೇಯಿಸಿದರು. ಇದೇ ರೀತಿ 4-5 ರೊಟ್ಟಿಗಳನ್ನು ಒಟ್ಟಿಗೆ ಸುತ್ತಿ ರೆಡಿ ಮಾಡಲಾಯ್ತು. ಇದು ಒಂದು ರೊಟ್ಟಿ ತೆಗೆದುಕೊಂಡಷ್ಟೇ ಸಮಯವನ್ನು ಮಾತ್ರ ತೆಗೆದುಕೊಂಡಿತು. ಆದರೆ 4-5 ರೊಟ್ಟಿಗಳು ಸಿದ್ಧವಾದವು. ಮಹಿಳೆಯ ಈ ವಿಶಿಷ್ಟ ಟೆಕ್ನಿಕ್ ಸಮಯವನ್ನು ಉಳಿಸುವುದಲ್ಲದೆ, ಶ್ರಮವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ.