Tragic Death: ಬೀಚ್​ನಲ್ಲಿ ರೊಮಾನ್ಸ್​ ದುರಂತದಲ್ಲಿ ಅಂತ್ಯ: ಮೈಮರೆತ ಪ್ರೇಮಿಗಳ ಶಾಕಿಂಗ್​ ವಿಡಿಯೋ ವೈರಲ್​

Published : Jun 07, 2025, 04:09 PM IST
Beachwalk ended up in a death

ಸಾರಾಂಶ

ಬೀಚ್​ನಲ್ಲಿ ರೊಮಾನ್ಸ್​ ಮಾಡುತ್ತಾ ಮೈಮರೆತ ಪ್ರೇಮಿಗಳ ಪೈಕಿ ಮಹಿಳೆಯ ದುರಂತ ಅಂತ್ಯವಾಗಿರುವ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದೆ.

ಕೆಲವೊಮ್ಮೆ ರೀಲ್ಸ್​ ಹುಚ್ಚಿಗಾಗಿ ಜೀವ ಕಳೆದುಕೊಂಡರೆ, ಮತ್ತೊಮ್ಮೆ ಅಭಿಮಾನ ಅತಿರೇಕಕ್ಕೆ ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೇ ಇನ್ನೊಂದೆಡೆ, ತಮಗೇನೂ ಆಗುವುದಿಲ್ಲ ಎಂದು ಹುಚ್ಚಾಟ ಮಾಡುತ್ತಾ ಪ್ರಾಣ ಬಿಡುವವರೂ ಇದ್ದಾರೆ. ಅದರಲ್ಲಿಯೂ ನೀರು, ಬೆಂಕಿಯ ಸಮೀಪ ಸರಸವಾಡುವುದು ಸಲ್ಲದು ಎನ್ನುವ ಮಾತೇಇದೆ. ಆದರೆ ಫಾಲ್ಸ್​, ಸಮುದ್ರ, ನದಿ ಸಮೀಪ ಹೋಗಿ ಪ್ರಾಣವನ್ನೇ ಅಪಾಯಕ್ಕೆ ಒಡ್ಡುತ್ತಿರುವವರು ಅದೆಷ್ಟೋ ಮಂದಿ. ಅಂಥದ್ದೇ ವಿಡಿಯೋ ಒಂದು ಈಗ ವೈರಲ್​ ಆಗಿದೆ.

ಈ ಘಟನೆ ನಡೆದಿರುವುದು ರಷ್ಯಾದಲ್ಲಿ. ಒಬ್ಬ ಮಹಿಳೆ ತನ್ನ ಗೆಳೆಯನೊಂದಿಗೆ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೃಹತ್ ಅಲೆಗಳು ಅವಳನ್ನು ಕೊಚ್ಚಿಕೊಂಡು ಹೋಗಿರುವ ವಿಡಿಯೋ ಇದಾಗಿದೆ. ಘಟನೆ ನಡೆದು ಕೆಲವು ದಿನಗಳು ಕಳೆದಿವೆ, ಆದರೆ ಅವಳ ಯಾವುದೇ ಸುಳಿವು ಸಿಕ್ಕಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಜೋಡಿಗಳು ರೊಮಾನ್ಸ್​ ಮಾಡುತ್ತಿರುವುದನ್ನು ನೋಡಬಹುದು. ಸಂತೋಷದಿಂದ ಆಟವಾಡುತ್ತಿದ್ದ ಜೋಡಿ ಬೃಹತ್ ಅಲೆಗಳಿಗೆ ಸಿಲುಕಿದ ಭಯಾನಕ ಕ್ಷಣವನ್ನು ಇದರಲ್ಲಿ ನೋಡಬಹುದಾಗಿದೆ. .

ದೊಡ್ಡ ಅಲೆ ಅವರನ್ನು ಅಪ್ಪಳಿಸುವ ಮೊದಲು ಈಜೋಡಿ ಕಡಲತೀರದ ಅಂಚಿನಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ನಂತರದ ಅಲೆಗಳು ಅವರ ಮೇಲೆ ಬರುತ್ತಿದ್ದಂತೆ ಅವರು ನಿಂತು ಪರಸ್ಪರ ಹಿಡಿದಿಟ್ಟುಕೊಳ್ಳುವುದನ್ನು ಕಾಣಬಹುದು. ಅದರ ನಂತರ, ಅಲೆಯ ಪ್ರವಾಹವು ಅವರನ್ನು ಕೆಳಗೆ ಬೀಳಿಸಿದೆ. ನಂತರ ಮತ್ತೊಂದು ಬೃಹತ್ ಅಲೆ ಇಬ್ಬರ ಮೇಲೆ ಅಪ್ಪಳಿಸುತ್ತದೆ. ಆದರೆ, ಪುರುಷ ಈ ಕಡೆ ಬಿದ್ದಾಗ ಮಹಿಳೆ ಸಮುದ್ರದ ಒಳಗೆ ಸೇರಿಕೊಳ್ಳುವುದನ್ನು ನೋಡಬಹುದು. ತನ್ನ ಪ್ರೇಯಸಿ ಕಾಣದಾಗ ಆತ ಹತಾಶವಾಗಿ ಹುಡುಕುತ್ತಿರುವುದನ್ನು ಮತ್ತು ಪ್ರಕ್ಷುಬ್ಧ ನೀರಿನ ಮೂಲಕ ಅಲೆದಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

 

ಇದು ರಷ್ಯಾದ ವಿಡಿಯೋ ಆಗಿದ್ದರೂ, ನಮ್ಮಲ್ಲಿಯೇ ಆದ ಇಂಥ ದುರಂತಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಫಾಲ್ಸ್​ಗಳಲ್ಲಿ ಆಡಲು ಹೋಗಿ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಜೀವ ಕಳೆದುಕೊಂಡಿರುವ ಜನರಿಗೆ ಲೆಕ್ಕವೇ ಇಲ್ಲ. ಪ್ರವಾಸಕ್ಕೆಂದು ಹೋಗುವ ಶಾಲಾ- ಕಾಲೇಜು ವಿದ್ಯಾರ್ಥಿಗಳೇ ಈ ರೀತಿ ಇಲ್ಲಸಲ್ಲದ ಸಾಹಸಕ್ಕೆ ಕೈಹಾಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮುದ್ರ ತೀರಕ್ಕೆ ಹೋದಾಗ ಅಲ್ಲಿಯ ನೀರನ್ನು ನೋಡಿ ಎಂಥವರಿಗೂ ಅದರಲ್ಲಿ ಆಡಬೇಕು ಎನ್ನುವುದು ಅನ್ನಿಸುವುದು ಸಹಜವೇ. ಆದರೆ ಅತಿಯಾದರೆ ಪ್ರಾಣಕ್ಕೆ ಅಪಾಯ ಎನ್ನುವುದನ್ನೂ ಅರಿಯಬೇಕು ಎನ್ನುವುದನ್ನು ಈ ವಿಡಿಯೋನೇ ಸಾಕ್ಷಿಯಾಗಿದೆ.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್