ತಂದೆ ತನ್ನ ಮಗ ಅಥವಾ ಮಗಳಿಗಾಗಿ ಯಾವ ಲೆವೆಲ್‌ಗಾದರೂ ಇಳಿಯಬಹುದು ಎಂಬುದಕ್ಕೆ ಒಂದು ಉದಾಹರಣೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ತಂದೆಯ ಪ್ರೀತಿ ಆಳವಾದದ್ದು ಮಾತ್ರವಲ್ಲದೆ, ತನ್ನ ಮಗುವಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ಹಿಂಜರಿಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇತ್ತೀಚಿನ ದಿನಗಳಲ್ಲಿ, ಈ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ತಂದೆ ತನ್ನ ಮಗಳನ್ನು ರಕ್ಷಿಸುವುದನ್ನು ಕಾಣಬಹುದು. ಇದೀಗ ವಿಡಿಯೋ ನೋಡಿದ ಪ್ರತಿಯೊಬ್ಬರೂ ತಂದೆಯನ್ನು ಪ್ರಶಂಸಿಸುತ್ತಿದ್ದಾರೆ. ಹಾಗಾದರೆ ವಿಡಿಯೋದಲ್ಲಿ ಏನಿದೆ ನೋಡೋಣ ಬನ್ನಿ...
ಈ ಹೃದಯವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿದ್ದ ಪುಟ್ಟ ಹುಡುಗಿ ರೈಲು ಓಡಾಡುವ ಮತ್ತು ಪ್ಲಾಟ್‌ಫಾರ್ಮ್ ನಡುವಿನ ಜಾಗದಲ್ಲಿ ಇದ್ದಕ್ಕಿದ್ದಂತೆ ಬಿದ್ದಳು. ಅದೇ ಸಮಯದಲ್ಲಿ, ರೈಲು ನಿಲ್ದಾಣಕ್ಕೆ ಅತಿ ವೇಗದಲ್ಲಿ ಬರುತ್ತಿತ್ತು. ಅಲ್ಲಿದ್ದ ಜನರು ಈ ಘಟನೆಯನ್ನು ನೋಡಿ ಶಾಕ್ ಆಗಿ ಕಿರುಚಲು ಪ್ರಾರಂಭಿಸಿದರು. ಎಲ್ಲರಿಗೂ ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಆದರೆ ಹುಡುಗಿಯ ತಂದೆ ಒಂದು ಕ್ಷಣವೂ ವ್ಯರ್ಥ ಮಾಡದೆ ಹಳಿಯ ಮೇಲೆ ಹಾರಿ ತನ್ನ ಮಗಳನ್ನು ಎದೆಗೆ ಅಪ್ಪಿಕೊಂಡು ಮಲಗಿದನು. ಕೆಲವೇ ಕ್ಷಣಗಳಲ್ಲಿ, ರೈಲು ಅವರಿಬ್ಬರ ಮೇಲೆ ಹಾದುಹೋಯಿತು. ಅಲ್ಲಿ ನಿಂತಿದ್ದ ಜನರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಲೇ ಇದ್ದರು. ಬಹುಶಃ ಒಂದು ಪವಾಡ ಮಾತ್ರ ಅವರನ್ನು ಉಳಿಸಬಹುದು ಎಂದು ಎಲ್ಲರೂ ಭಯಪಟ್ಟಿದ್ದರು.
ರೈಲು ಹಾದುಹೋದ ನಂತರ, ತಂದೆ ಮತ್ತು ಮಗಳು ಸುರಕ್ಷಿತವಾಗಿ ಇದ್ದರು. ಅಲ್ಲಿದ್ದ ಜನರು ಆಶ್ಚರ್ಯಚಕಿತರಾದರು. ಅವರಿಬ್ಬರಿಗೂ ಒಂದು ಸಣ್ಣ ಪೆಟ್ಟು ಕೂಡ ಆಗಲಿಲ್ಲ ಎಂದರೆ ಯಾರಿಗೂ ನಂಬಲು ಸಾಧ್ಯವಾಗಲಿಲ್ಲ. ಈ ದೃಶ್ಯವನ್ನು ನೋಡಿ, ಅನೇಕ ಜನರು ಭಾವುಕರಾದರು, ನಿಲ್ದಾಣದಲ್ಲಿ ಚಪ್ಪಾಳೆ ಪ್ರತಿಧ್ವನಿಸಿತು. ಕೆಲವರು ದೇವರಿಗೆ ಧನ್ಯವಾದ ಹೇಳಿದರು. ಈ ಸಂಪೂರ್ಣ ಘಟನೆಯನ್ನು ನಿಲ್ದಾಣದಲ್ಲಿ ಇದ್ದ ಯಾರೋ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈ ಹಿಂದೆಯೂ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತಂದೆ ತನ್ನ ಜೀವದ ಬಗ್ಗೆ ಚಿಂತಿಸದೆ ಹೇಗೆ ಜಿಗಿಯುತ್ತಾನೆ ಮತ್ತು ತನ್ನ ಮಗಳನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಡುತ್ತಾನೆ ಎಂಬುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.
ವಿಡಿಯೋ ನೋಡಿದ ನಂತರ ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. "ಈ ವ್ಯಕ್ತಿ ತನ್ನ ಮಗಳಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ನಿಜವಾದ ಸೂಪರ್‌ಮ್ಯಾನ್" ಎಂದು ಹೇಳಿದರೆ, ಮತ್ತೆ ಕೆಲವರು "ಈ ವಿಡಿಯೋ ನನ್ನ ಕಣ್ಣಲ್ಲಿ ನೀರು ತರಿಸಿತು, ತಂದೆಯ ಪ್ರೀತಿ ಅತ್ಯಂತ ಶ್ರೇಷ್ಠ" ಎಂದು ಕಾಮೆಂಟ್ ಮಾಡಿದ್ದಾರೆ.
ರೈಲು ಬರುವಾಗ ಈ ಸಾಹಸದ ಅಗತ್ಯವಿತ್ತೇ?
ಸಾಮಾನ್ಯವಾಗಿ ಅನೇಕ ಜನರು ರೈಲ್ವೆ ನಿಲ್ದಾಣಕ್ಕೆ ಹೋಗಿ ತುಂಬಾ ಆತಂಕದಿಂದ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಾರೆ. ಕೆಲವರು ರೈಲು ಚಲಿಸುತ್ತಿರುವಾಗ ಅದರಿಂದ ಇಳಿಯಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ದೊಡ್ಡ ಅಪಘಾತಗಳು ಸಂಭವಿಸಿದ ಅನೇಕ ಘಟನೆಗಳು ನಡೆದಿವೆ. ಈಗಾಗಲೇ ರೈಲ್ವೆ ಅಧಿಕಾರಿಗಳು ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಅನೇಕ ಪ್ರಯಾಣಿಕರು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಾರೆ.
ಈ ಘಟನೆಯಲ್ಲಿ ತಂದೆ ತನ್ನ ಮಗಳ ಮೇಲೆ ತೋರಿಸಿದ ಪ್ರೀತಿ ಮತ್ತು ಧೈರ್ಯವನ್ನು ನೋಡಿ ಅಲ್ಲಿದ್ದವರು ಭಾವುಕರಾಗುತ್ತಿದ್ದಾರೆ. ಮತ್ತೆ ಕೆಲವರು ಚಲಿಸುತ್ತಿರುವ ರೈಲು ಬರುವಾಗ ಈ ಸಾಹಸದ ಅಗತ್ಯವಿತ್ತೇ? ಎಂದು ಕೋಪ ವ್ಯಕ್ತಪಡಿಸುತ್ತಿದ್ದಾರೆ.