ಪಾರ್ಸೆಲ್​ ಮಾಡ್ರಪ್ಪ ಎಂದ ನಾಯಿ: Rapido Driverಗೆ ಬಂತು ಶಾಕಿಂಗ್​ ಆರ್ಡರ್​- Video viral

Published : Apr 23, 2026, 12:45 PM IST
Rapido Parcel

ಸಾರಾಂಶ

ರ್ಯಾಪಿಡೋ ಚಾಲಕನೊಬ್ಬ ನಾಯಿಯನ್ನು ಪಾರ್ಸೆಲ್ ರೂಪದಲ್ಲಿ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಖುಷಿಪಟ್ಟರೆ, ಕೆಲವರು ಇದು ಲೈಕ್ಸ್‌ಗಾಗಿ ಮಾಡಿದ ನಕಲಿ ವಿಡಿಯೋ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾರ್ಸೆಲ್​, ಟ್ರಾವಲಿಂಗ್​ ಎಲ್ಲವೂ ಕ್ಷಣಮಾತ್ರದ ಕೆಲಸಗಳು. ಕುಳಿತಲ್ಲಿಯೇ ಆರ್ಡರ್​ ಮಾಡಿದ್ರೆ ಮುಗೀತು. ಮನೆಯ ಬಾಗಿಲಿಗೇ ಪಾರ್ಸೆಲ್ಲೂ ಬರುತ್ತೆ, ತಿಂಡಿ-ತಿನಿಸೂ ಬರತ್ತೆ. ಮನೆಯ ಬಾಗಿಲಿಗೇ ಬಂದು ಬೇಕಾದಲ್ಲಿಗೆ ಕರೆದುಕೊಂಡು ಹೋಗಲು ನಮಗೆ ಬೇಕಾದ ವಾಹನಗಳೂ ಲಭ್ಯ. ಎಲ್ಲವೂ ಕ್ಷಣಮಾತ್ರದಲ್ಲಿ ಸಾಧ್ಯ. ಕೆಲವೇ ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಿಲ್ಲದ್ದೆಲ್ಲಾ ಈಗ ನಡೆಯುತ್ತಿಲ್ಲ. ಇಂಥ ದಿನಗಳ ಬರಬಹುದು ಎಂದು ಕನಸಿನಲ್ಲಿಯೂ ಅಂದುಕೊಳ್ಳದ್ದೆಲ್ಲಾ ಈಗಿನ ಜನರೇಷನ್​ಗೆ ಸಾಧ್ಯವಾಗ್ತಿದೆ. ಇದಕ್ಕಾಗಿಯೇ ಬೈಕ್​, ಟ್ಯಾಕ್ಸಿ, ಫುಡ್​ ಡೆಲವರಿ ಸೇವೆಗಳಿಗೆ ಸಕತ್​ ಡಿಮಾಂಡ್​.

ಕುತೂಹಲದ ವಿಡಿಯೋ

ಇಲ್ಲೊಂದು ಕುತೂಹಲದ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ Rapidoನಲ್ಲಿ ನಾಯಿಯನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ವಾಹನ ಸವಾರಿಗೆ ಮಾತ್ರ ಸೀಮಿತವಾಗಿದ್ದ Rapido, ಈಗ ಪಾರ್ಸೆಲ್​ ಸೇವೆಗಳನ್ನೂ ಆರಂಭಿಸಿದೆ. ಕೆಲವೇ ದಿನಗಳಲ್ಲಿ ಫುಡ್​ ಆರ್ಡರ್​​ ಕೂಡ ಪಡೆದುಕೊಳ್ಳಲಿವೆ. ಹೀಗೆ Rapido ಡ್ರೈವರ್​ ಒಬ್ಬರು ಪಾರ್ಸೆಲ್​ ಪಡೆಯಲು ಹೋದಾಗ ಅವರಿಗೆ ಶಾಕ್​ ಆಗಿತ್ತು. ಇದಕ್ಕೆ ಕಾರಣ, ಅಲ್ಲಿ ಪಾರ್ಸೆಲ್​ಗೆ ಇದ್ದುದು ನಾಯಿ. ಈ ನಾಯಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಬೇಕಿತ್ತು.

ನಾಯಿ ಬೈಕ್​ನಲ್ಲಿ

ಸುಂದರವಾದ, ನುಣುಪಾದ ಕಪ್ಪು ನಾಯಿಯನ್ನು ಬೈಕ್​ನಲ್ಲಿ ಕುಳ್ಳರಿಸಿಕೊಂಡು ಹೋಗುವುದನ್ನು ನೋಡಬಹುದು. ಎಂಥ ಕಾಲ ಬಂತಪ್ಪಾ ರ್ಯಾಪಿಡೋನಲ್ಲಿಯೂ ನಾವು ನಾಯಿಯನ್ನು ಪಾರ್ಸೆಲ್​ ಮಾಡಬೇಕಾಗಿದೆ ಎಂದು ಅದರಲ್ಲಿ ಹೇಳಲಾಗಿದೆ. ಇದಕ್ಕೆ ಹಲವರು ತುಂಬಾ ಖುಷಿಪಡಿ. ಇದು ಜೀವನದಲ್ಲಿ ಕೆಲವೇ ಕೆಲವರಿಗೆ ಸಿಗುವ ಸೌಭಾಗ್ಯ. ಎಲ್ಲಕ್ಕಿಂತಲೂ ಕೂಲ್​​ ಪಾರ್ಸೆಲ್​ ಇದು ಎಂದು ಹೇಳುತ್ತಿದ್ದಾರೆ. ನಾಯಿ ಆರಾಮವಾಗಿ ಕುಳಿತಿರುವುದನ್ನು ನೋಡಿರುವ ನೆಟ್ಟಿಗರು ಖುಷಿ ಪಡುತ್ತಿದ್ದಾರೆ.

ವಿಡಿಯೋಗೆ ಸಂಶಯ

ಆದರೆ ಕೆಲವರು ಈ ವಿಡಿಯೋ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇದು ನಿಜಕ್ಕೂ ರ್ಯಾಪಿಡೋ ಸರ್ವೀಸಾ ಅಥವಾ ಸುಮ್ಮನೇ ಯಾವುದೋ ವಿಡಿಯೋ ವೈರಲ್​ ಮಾಡಿದ್ದಾರೋ ಎಂದು. ಆ ನಾಯಿ ಅಷ್ಟು ಈಸಿಯಾಗಿ ಕುಳಿತಿರುವುದನ್ನು ನೋಡಿದರೆ, ಹಿಂದೆ ಇರುವುದು ಅದರ ಮಾಲೀಕ ಎಂದು ಅನ್ನಿಸುತ್ತದೆ. ಈಗ ವೈರಲ್​ ಮಾಡುವ ಉದ್ದೇಶದಿಂದ ಅಥವಾ ಲೈಕ್ಸ್​, ಕಮೆಂಟ್ಸ್​ಗಾಗಿ ಏನು ಬೇಕಾದ್ರೂ ಮಾಡುತ್ತಾರೆ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ವೈರಲ್​ ಅಂತೂ ಆಗುತ್ತಿದೆ.

 

PREV
Read more Articles on
click me!

Recommended Stories

ಡೆಲಿವರಿ ಬಾಯ್‌ಗೆ ಹೊಸ Adidas ಶೂ ಕೊಟ್ಟ ವ್ಯಕ್ತಿ! ಅಲ್ಲಿನ ನಡೆದ ಮಾನವೀಯ ದೃಶ್ಯದ ವಿಡಿಯೋ ವೈರಲ್
ಮಗನ ಯೂಟ್ಯೂಬ್ ಚಾನೆಲ್‌ಗೆ ಮಿಲಿಯನ್ ವ್ಯೂಸ್, ಅಪ್ಪನ ಖಾತೆಗೆ ₹1 ಕೋಟಿ ನಷ್ಟ! ಈ ವೈರಲ್ ಸುದ್ದಿಯ ಅಸಲಿಯತ್ತೇನು?