ವಿಡಿಯೋ: ಕ್ರಿಕೆಟ್‌ ಫೈನಲ್‌ಗೆ ಆಹ್ವಾನಿಸದ್ದಕ್ಕೆ ಪಿಚ್ ಧ್ವಂಸಗೊಳಿಸಿದ ಪುರಸಭೆ ಅಧ್ಯಕ್ಷ!

Published : Apr 21, 2026, 10:57 AM IST
Maharashtra viral video

ಸಾರಾಂಶ

ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ 'ಎಂಎಲ್‌ಎ ಟ್ರೋಫಿ' ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ ಕಾರಣ, ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು ಟ್ರ್ಯಾಕ್ಟರ್ ಬಳಸಿ ಪಿಚ್ ಅನ್ನೇ ಧ್ವಂಸಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ ವಿಡಯೋ ನೋಡಿ.

ಪಿಟಿಐ ಮುಂಬೈ (ಏ.21): ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು, ಟ್ರ್ಯಾಕ್ಟರ್‌ ಬಳಸಿ ಪಿಚ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಏ.12ರಂದು ನಡೆದಿದೆ.

ಧರಂಗಾವ್ ಎಂಎಲ್‌ಎ ಟ್ರೋಪಿ

ಜಲಗಾಂವ್‌ ಜಿಲ್ಲೆಯ ಧರಂಗಾವ್‌ನಲ್ಲಿ ಎಂಎಲ್‌ಎ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಏರ್ಪಾಡಾಗುತ್ತು ಹಾಗೂ 12ರಂದು ಫೈನಲ್ ಪಂದ್ಯ ನಡೆಯುತ್ತಿತ್ತು. ಪಂದ್ಯಕ್ಕೆ ಆಯೋಜಕರು ಧರಂಗಾಂವ್ ಪುರಸಭೆಯ ಅಧ್ಯಕ್ಷರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಕೋಪಗೊಂಡ ಅವರು, ಅಂತಿಮ ಪಂದ್ಯ ನಡೆಯುವ ವೇಳೆಯೇ ಟ್ರ್ಯಾಕ್ಟರ್ ಕಳಿಸಿದ್ದಾರೆ. ಆ ಟ್ರ್ಯಾಕ್ಟರ್‌ ಪಿಚ್ ಮೇಲೆ ನುಗ್ಗಿ ಟರ್ಫ್ ಅನ್ನು ಅಲ್ಲಾಡಿಸಿ ಪಿಚ್ ಅನ್ನು ನಾಶ ಮಾಡಿದೆ.

ಘಟನೆಯಿಂದ ಆಟಗಾರರು, ವೀಕ್ಷಕರು ಹಾಗೂ ಆಯೋಜಕರು ಕಕ್ಕಾಬಿಕ್ಕಿಯಾದರು. ಮೈದಾನದಲ್ಲಿ ಆಟುವಾಡುತ್ತಿರುವಾಗಲೇ ಟ್ರ್ಯಾಕ್ಟರ್ ನುಗ್ಗಿದಾಗ ಒಂದು ಕ್ಷಣ ಬೆಚ್ಚಿಬಿದ್ದ ಆಟಗಾರರು ನೋಡನೋಡುತ್ತಿದ್ದಂತೆ ಪಿಚ್ ಯದ್ವತದ್ವ ಕೆಡಿಸಲಾರಂಭಿಸಿದ. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ

PREV
Read more Articles on
click me!

Recommended Stories

'ಯೂತ್' ಚಿತ್ರಕ್ಕೆ ಮನಸೋತ ರಿಷಬ್ ಶೆಟ್ಟಿ: 'ಇದು ಪ್ರತಿ ಪೋಷಕರಿಗೆ ಅರ್ಪಿಸಿದ ಸಿನಿಮಾ' ಎಂದ 'ಕಾಂತಾರ' ಸ್ಟಾರ್
'ಯಾರು ಮಮ್ಮಾ? ನಾನು ನಿನ್ನ ಮಮ್ಮಾ ನಾ? ಏನ್ ಬೊಗಳ್ತಾ ಇದ್ದೀಯಾ ನೀನು?.. ಶೃತಿ ಹಾಸನ್ ಕೆಂಡಾಮಂಡಲ!