ಪವಿತ್ರ ತೀರ್ಥ ಬರ್ತಿದೆ ಅಂತ ಮರಕ್ಕೆ ಎಲ್ಲರೂ ಪೂಜಿಸಿದ್ದೇ ಪೂಜಿಸಿದ್ದು, ಸತ್ಯ ಬಯಲಾಯ್ತು ಆಮೇಲೆ!

Published : Jun 11, 2025, 05:54 PM IST
Miracle Tree in Pune

ಸಾರಾಂಶ

ಮರದಿಂದ ಪವಿತ್ರ ತೀರ್ಥ ಬರುತ್ತಿದೆ ಎಂಬ ನಂಬಿಕೆಯಿಂದ ಜನರು ಪೂಜೆ ಸಲ್ಲಿಸಿದ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪುಣೆ: ಭಕ್ತಿ ಮೂಢನಂಬಿಕೆಯಾದ ಪ್ರಕರಣಗಳನ್ನು ಸಾಕಷ್ಟು ವರದಿಯಾಗುತ್ತಿರುತ್ತವೆ. 21ನೇ ಶತಮಾನ, ಅದರಲ್ಲಿಯೂ 5ಜಿ ದುನಿಯಾದಲ್ಲಿಯೂ ಇಂದಿಗೂ ಮೂಢನಂಬಿಕೆಗಳು ಜೀವಂತವಾಗಿವೆ. ಮರದಿಂದ ಪವಿತ್ರವಾದ ಜಲ (ತೀರ್ಥ) ಬರುತ್ತಿದೆ ಎಂದು ನಂಬಿದ ಜನರು ಮರವೊಂದಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ನಂತರ ಜನರು ಅಲ್ಲಿಂದ ಹಿಂದಿರುಗಿದ್ದಾರೆ. ಮರಕ್ಕೆ ಅರಿಶಿನ, ಕುಂಕುಮ, ಹೂವು, ಬಟ್ಟೆ ಹಾಕಿ ಜನರು ಪೂಜಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಜನ ಮರಳೋ, ಜಾತ್ರೆ ಮರಳೋ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಪುಣೆಯ ಪಿಂಪ್ರಿಯ ಪ್ರೇಮ್‌ಲೋಕ್ ಪಾರ್ಕ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಈ ಪಾರ್ಕ್‌ನಲ್ಲಿರುವ ಗುಲ್‌ಮೊಹರ್‌ ಮರದಿಂದ ದಿಢೀರ್ ನೀರು ಬರಲಾರಂಭಿಸಿತ್ತು. ಈ ನೀರು ನೋಡಿದ ಸ್ಥಳೀಯರು, ಇದೊಂದು ಪವಿತ್ರ ತೀರ್ಥವಾಗಿದ್ದು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈ ವಿಷಯ ಕಡಿಮೆ ಸಮಯದಲ್ಲಿಯೇ ಸುತ್ತಮುತ್ತಲಿನ ಸ್ಥಳಗಳಿಗೆ ವ್ಯಾಪಿಸಿದ್ದರಿಂದ ಜನರು, ಮರಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಮರಗಳಿಗೆ ಪೂಜೆ ಸಲ್ಲಿಕೆ ಮಾಡುವ ಪದ್ಧತಿ ಇದೆ. ಅದೇ ಸಂಪ್ರದಾಯದಂತೆ ಗುಲ್‌ಮೊಹರ್ ಮರಕ್ಕೆ ಜನರು ಮರಕ್ಕೆ ಪೂಜೆ ಸಲ್ಲಿಸಲಾಗಿತ್ತು. ಇದೊಂದು ದೈವಿಕ ಘಟನೆ, ಪವಾಡ ಸೃಷ್ಟಿಸುವ ಮರ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಇದಾದ ಬಳಿಕ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಗುಲ್‌ಮೊಹರ್ ಮರದಿಂದ ಬರುತ್ತಿರುವ ನೀರಿನ ಅಸಲಿ ಸತ್ಯ ಹೊರ ಬಂದಿದೆ.

ಇದು ಪವಾಡವಲ್ಲ ಎಂದ ಅಧಿಕಾರಿಗಳು

ಮರದಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ. ಮರದ ಕೆಳಗೆ ನೀರಿನ ಪೈಪ್ ಹಾದು ಹೋಗಿದೆ. ಪೈಪ್ ಒಡೆದಿದ್ದರಿಂದು ನೀರು, ಟೊಳ್ಳಾದ ಕಾಂಡದಿಂದ ಬಂದಿದೆ. ಅದು ಮರದಿಂದಲೇ ನೀರು ಬಂದಂತೆ ಕಾಣಿಸಿದೆ ಎಂದು ಉಪ ಎಂಜಿನಿಯರ್ ಪ್ರವೀಣ್ ಧುಮಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅಲ್ಲಿಂದ ಜನರನ್ನು ಚದುರಿಸಿ ಒಡೆದ ಪೈಪ್ ದುರಸ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.

ಮರಕ್ಕೆ ಪೂಜೆ ಸಲ್ಲಿಸಿದ ವಿಡಿಯೋ

ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ಜನರು ಮರಕ್ಕೆ ಹೂಮಾಲೆ, ಹೂವುಗಳು, ಅರಿಶಿನ ಮತ್ತು ಸಿಂಧೂರವನ್ನು ಅರ್ಪಿಸಲು ಪ್ರಾರಂಭಿಸಿದರು. ಮರದಿಂದ ನೀರು ಬರುತ್ತಿರುವುದನ್ನು ನೋಡಿ ಜನರು ಪೂಜಿಸಿದರು. ನಂತರ, ಕೆಲವು ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದರು ಮತ್ತು ತನಿಖೆಯ ಸಮಯದಲ್ಲಿ, ಮರದ ಕೆಳಗೆ ನೀರಿನ ಪೈಪ್‌ಲೈನ್ ಒಡೆದಿರುವುದು ಬಹಿರಂಗವಾಯಿತು ಎಂದು X ನಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

 

 

ಬೇವಿನ ಮರದಿಂದ ಹಾಲು

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಬೇವಿನ ಮರದಿಂದ ಹಾಲು ಬಂದಿದೆ ಎಂದು ಗ್ರಾಮಸ್ಥರು ಪೂಜೆ ಸಲ್ಲಿಸಿದ್ದರು. ಇದು ಗ್ರಾಮ ದೇವತೆ ಗದ್ದೆಮ್ಮ ದೇವಿಯ ಪ್ರತಿರೂಪ ಎಂದು ನಂಬಿದ್ದ ಜನರು ಭಕ್ತಿಯಿಂದ ಪೂಜೆ ಸಲ್ಲಿಕೆ ಮಾಡಿದ್ದರು. ಬೇವಿನ ಮರದಿಂದ ಹಾಲು ಬರುತ್ತಿರೋದನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ಜನರು ಸಹ ಆಗಮಿಸಿದ್ದರು. ಗಿಡ-ಮರಗಳಿಂದ ಬಿಳಿಯ ದ್ರವ ಬರೋದು ಸಹಜ ಪ್ರಕ್ರಿಯೆ. ಆದ್ರೆ ಈ ಪ್ರಕ್ರಿಯೆ ಕೆಲವು ಮರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂದು ಪರಿಸರ ತಜ್ಞರು ಹೇಳಿದ್ದರು.

PREV
Read more Articles on
click me!

Recommended Stories

​ಶಿಲ್ಪಿ ಕೆತ್ತಿದ ರಾಮ.. ಕಾಯಲು ಬಂದ ಹನುಮ..;  ಅರುಣ್ ಯೋಗಿರಾಜ್ ಹಂಚಿಕೊಂಡ ವಿಡಿಯೋ ವೈರಲ್! ನೋಡಿ ಕಣ್ತುಂಬಿಕೊಳ್ಳಿ
ಪವನ್ ಕಲ್ಯಾಣ್‌ಗೆ ಸಂಬಂಧಿಸಿ ಅಮೇಜಾನ್, ಗೂಗಲ್, ಮೆಟಾ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ!