ಟೆಕ್ನಲೊಜಿಯಾ, ಟೆಕ್ನಲೊಜಿಯಾ..ಬ್ಯಾಗ್‌ನಲ್ಲೇ ಡಿಜಿಟಲ್ ಬೋರ್ಡ್ ಇದು ಬೆಂಗೂರಲ್ಲಿ ಮಾತ್ರ

Published : Aug 28, 2025, 10:39 AM IST
Peak Bengaluru

ಸಾರಾಂಶ

ಸೈನ್ ಬೋರ್ಡ್, ಡಿಜಿಟಲ್ ಬೋರ್ಡ್ ನೋಡಿರುತ್ತೀರಿ. ಆದರೆ ಬೆನ್ನ ಮೇಲೆ ಹಾಕುವ ಬ್ಯಾಗ್‌ನಲ್ಲೇ ಡಿಜಿಟಲ್ ಬೋರ್ಡ್ ಅಪರೂಪ. ಆದರೆ ಇದು ಬೆಂಗಳೂರಲ್ಲಿ ಕಾಣಸಿಗುತ್ತಿದೆ. ಬೆಂಗಳೂರಿನ ಈ ಪೀಕ್ ಮೂಮೆಂಟ್ ವಿಡಿಯೋ ಬಾರಿ ವೈರಲ್ ಆಗುತ್ತಿದೆ. 

ಬೆಂಗಳೂರು (ಆ.28) ಏನ್ರಿ ಮೀಡಿಯಾ? ಜನರೇ ನೀವು ಏನು ಮಾಡುತ್ತೀದ್ದೀರಿ? ಈ ಎರಡು ಸಂದೇಶ ನೀಡಿದ ಡಿಜಿಟಲ್ ಬ್ಯಾಗ್ ಸೈನ್ ಬೆಂಗಳೂರಲ್ಲಿ ಭಾರಿ ಸದ್ದು ಮಾಡುತ್ತಿದೆ. ಐಟಿ ಕ್ಷೇತ್ರದಲ್ಲಿ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ವಿಚಾರದಲ್ಲಿ, ಸ್ಟಾರ್ಟ್ ಅಪ್ ಉದ್ಯಮದಲ್ಲಿ ಬೆಂಗಳೂರು ಮುಂದಿದೆ. ಸ್ಕೂಟರ್‌ನಲ್ಲೈ ಕಚೇರಿ ಮೀಟಿಂಗ್, ಆಟೋ ಚಾಲಕರ ವಿಭಿನ್ನ ಪ್ರಯತ್ನಗಳು ಬೆಂಗಳೂರಲ್ಲೇ ಮಾತ್ರ ಕಾಣಸಿಗುತ್ತದೆ. ಇದೀಗ ಮತ್ತೊಂದು ವಿಡಿಯೋ ಒಂದು ವೈರಲ್ ಆಗುತ್ತಿದೆ. ಹಲವರು ಈ ವಿಡಿಯೋಗೆ ಟೆಕ್ನಲೊಜಿಯಾ, ಟೆಕ್ನಲೊಜಿಯಾ ಅನ್ನೋ ಫೇಮಸ್ ಡೈಲಾಗನ್ನೇ ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನ ಈ ಪೀಕ್ ಮೂಮೆಂಟ್ ಇದೀಗ ಭಾರಿ ವೈರಲ್ ಆಗಿದ್ದು, ಭಾರಿ ಚರ್ಚೆಯಾಗುತ್ತಿದೆ.

ಗಮನಸೆಳೆದ ಬೆಂಗಳೂರು ಸ್ಕೂಟಿ ಸವಾರನ ಬ್ಯಾಗ್

ಬೆಂಗಳೂರಿನಲ್ಲಿ ಸ್ಕೂಟಿ ಸವಾರ ತಾನು ಬೆನ್ನ ಮೇಲೆ ಹಾಕಿಕೊಂಡಿದ್ದ ಬ್ಯಾಗ್ ಇದೀಗ ಎಲ್ಲರ ಗಮನಸೆಳೆದಿದೆ. ಡಿಜಿಟಲ್ ಸೈನ್ ಬೋರ್ಟ್ ಇರುವ ಈ ಬ್ಯಾಗ್‌ನಲ್ಲಿ ಕೆಲ ಪ್ರಶ್ನೆ ಅದರ ಜೊತೆಗೆ ಸಂದೇಶವನ್ನು ನೀಡಲಾಗಿದೆ. ಹಿಂಬದಿ ವಾಹನ ಸವಾರರು ಈತನ ಬ್ಯಾಗ್ ವಿಡಿಯೋ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಾರೆ. ಸ್ಕೂಟಿ ಸವಾರ ತನ್ನ ಕಪ್ಪು ಬಣ್ಣದ ಬ್ಯಾಗ್‌ನಲ್ಲಿನ ಡಿಜಿಟಲ್ ಸೈನ್ ಬೋರ್ಡ್‌ನಲ್ಲಿ, ಏನ್ರೀ ಮೀಡಿಯಾ, ಜನರೇ ನೀವೇನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಬರೆಯಲಾಗಿದೆ. ಆಂಗ್ಲ ಭಾಷೆಯಲ್ಲಿ ಬರೆದಿರುವ ಸೈನ್ ಬೋರ್ಡ್ ಇದೀಗ ಹಲವರ ಕುತೂಹಲಕ್ಕೆ ಕಾರಣವಾಗಿದೆ.

ಆಟೋ ಚಾಲಕನ ಬಳಿ ಕನ್ನಡದಲ್ಲಿ ದರ ಚೌಕಾಸಿಗೆ ಚಾಟ್‌ಜಿಪಿ ಬಳಸಿದ ವಿದ್ಯಾರ್ಥಿ, ವೈರಲ್ ವಿಡಿಯೋ

ಸ್ಕೂಟಿ ಸವಾರ ಬೆಂಗಳೂರಿನ ಸಿಗ್ನಲ್‌ಲ್ಲಿ ನಿಂತಿರುವಾಗ ಈ ವಿಡಿಯೋ ಸೆರೆ ಹಿಡಿಯಲಾಗಿದೆ. ಸಿಗ್ನಲ್‌ನಲ್ಲಿ ಇತರ ವಾಹನಗಳ ನಡುವೆ ಈ ಸ್ಕೂಟಿ ಎಲ್ಲರನ್ನು ಆಕರ್ಷಿಸಿದೆ. ಈ ವಿಡಿಯೋಗೆ ಭರ್ಜರಿ ಪ್ರತ್ರಿಕ್ರಿಯೆಗಳು ವ್ಯಕ್ತವಾಗಿದೆ. ನಟ ದರ್ಶನ್ ಟ್ರೆಂಡಿಂಗ್ ಡೈಲಾಗ್ ಏನ್ರಿ ಮೀಡಿಯಾ ಕುರಿತು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನು ಇಂತಹ ವಿಚಿತ್ರಗಳು ಬೆಂಗಳೂರಿನಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

 

 

ಬೆಂಗಳೂರಿನಲ್ಲಿ ಈ ರೀತಿ ಪೀಕ್ ಬೆಂಗಳೂರು ಮೂಮೆಂಟ್ ಭಾರಿ ಸದ್ದು ಮಾಡಿದೆ.ದಿನವಿಡಿ ಆಟೋ ಚಲಾಯಿಸುವ ಚಾಲಕ ತನ್ನ ಸೀಟನ್ನು ಆಫೀಸ್ ಚೇರ್ ರೀತಿ ಬದಲಿಸಿಕೊಂಡಿದ್ದ. ವರ್ಕ್ ಫ್ರಮ್ ಆಟೋ ಎಂದು ಹಲವರು ಕಮೆಂಟ್ ಮಾಡಿದ್ದರು. ಆರಾಮದಾಯಕವಾಗಿ ಕುಳಿತು ಆಟೋ ರೈಡ್ ಮಾಡಲು ಚಾಲಕ ತನ್ ಸೀಟನ್ನು ಕಚೇರಿ ಚೇರ್ ರೀತಿ ಮಾರ್ಪಡಿಸಿದ್ದ. ಇನ್ನು ಕಳೆದ ವರ್ಷ ಬಾಡಿಗೆದಾರನ ಸ್ಟಾರ್ಟ್ಅಪ್ ಕಂಪನಿಗೆ ಮಾಲೀಕನೇ ಗುರುವಾದ ಘಟನೆಯೂ ನಡೆದಿತ್ತು. ಬಾಡಿಗೆದಾರ ಆರಂಭಿಸಿದ ಸ್ಟಾರ್ಟ್ ಅಪ್ ಕಂಪನಿಗೆ ಮನೆ ಮಾಲೀಕ ಹಲವು ಸಲಹೆಗಳನ್ನು ನೀಡಿ ಗುರುವಾಗಿದ್ದ ಘಟನೆಯೂ ಬೆಳಕಿಗೆ ಬಂದಿತ್ತು.

ವರ್ಕ್ ಫ್ರಮ್ ಆಟೋ, ಬೆಂಗಳೂರು ಚಾಲಕನ ಐಡಿಯಾಗೆ ಮನಸೋತ ಜನ

 

PREV
Read more Articles on
click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!