NDRF Trained Stray Dog: ನಾಯಿಗೆ ಡಾನ್ಸ್ ಬರಲ್ಲ, ಯೋಗ ಬರುತ್ತೆ ! ವೈರಲ್ ವಿಡಿಯೋ

Published : Jun 20, 2025, 04:52 PM ISTUpdated : Jun 20, 2025, 04:55 PM IST
Dog yoga

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಬೀದಿ ನಾಯಿಯೊಂದು ಎಲ್ಲರ ಗಮನ ಸೆಳೆದಿದೆ. ಎಲ್ಲರ ಜೊತೆ ಯೋಗ ಮಾಡಿರುವ ನಾಯಿ ಭೇಷ್ ಎನ್ನಿಸಿಕೊಂಡಿದೆ. ನಾಯಿ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. 

ಬೆಳಿಗ್ಗೆ ಏಳೋಕೆ ಸೋಮಾರಿ, ಸಂಜೆ ಟೈಂ ಇಲ್ಲ. ಒಂದೊಂದೇ ಕಾರಣ ಹೇಳಿ ಜನರು ದೈಹಿಕ ವ್ಯಾಯಾಮದಿಂದ ಹಿಂದೆ ಸರಿಯುತ್ತಿದ್ದಾರೆ. ಯೋಗಾಸನ (Yoga asana), ಪ್ರಾಣಾಯಾಮಗಳು ವಯಸ್ಸಾದವರಿಗೆ, ಇದು ಬೋರಿಂಗ್ ಎನ್ನುವವರ ಸಂಖ್ಯೆ ಕೂಡ ಹೆಚ್ಚಿದೆ. ಜೂನ್ 21 ಬಂದ್ರೆ ಮಾತ್ರ ಎಲ್ಲರೂ ಮ್ಯಾಟ್ ಹಿಡಿದು ನಿಲ್ತಾರೆ. ಜೂನ್ 21 ಮುಗಿದು, 22 ಬರ್ತಿದ್ದಂತೆ ಯೋಗ, ಮ್ಯಾಟ್ ಎಲ್ಲ ಮರೆತು ಹೋಗಿರುತ್ತೆ. ಯೋಗ ಅನ್ನೋದು ಬರೀ ವ್ಯಾಯಾಮವಲ್ಲ. ಇದು ದೇಹ – ಮನಸ್ಸು- ಆತ್ಮವನ್ನು ಬೆಸೆಯುವ ಕೆಲಸ ಮಾಡುತ್ತೆ. ಯಾರಿಗೆ ಯೋಗದ ಮಹತ್ವ ಗೊತ್ತಿದ್ಯೋ ಗೊತ್ತಿಲ್ಲ. ಈ ಮೂಖ ಪ್ರಾಣಿ ಮಾತ್ರ ಯೋಗದ ಮಹತ್ವವನ್ನು ಅರಿತಂತಿದೆ. ನಾನೇ ಯೋಗ ಮಾಡ್ತೇನೆ, ನಿಮಗೇನು ಅಂತ ಸೋಮಾರಿ ಜನರನ್ನು ಎಚ್ಚರಿಸಿದಂತಿದೆ.

ಸೋಶಿಯಲ್ ಮೀಡಿಯಾದಲ್ಲಿ ನಾಯಿಯ ವಿಡಿಯೋ (dog video) ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾಯಿ ಯೋಗಾಸನ ಮಾಡ್ತಿರೋದನ್ನು ನೀವು ನೋಡ್ಬಹುದು. ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಗ್ತಿದೆ. ಇದಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಯೋಗ ದಿನದ ಸಂದರ್ಭದಲ್ಲಿ ನಾಯಿಯೊಂದು ಎಲ್ಲರ ಗಮನ ಸೆಳೆದಿದೆ. ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ನಾಯಿ, ಮನುಷ್ಯರಂತೆ ಆಸನಗಳನ್ನು ಮಾಡಿದೆ.

ಎರಡು ವರ್ಷಗಳ ಕಾಲ ತರಬೇತಿ ಪಡೆದ NDRF ನಾಯಿ ಉಧಂಪುರದಲ್ಲಿ 55 ಜನರ ಜೊತೆ ಯೋಗ ಶಿಬಿರದಲ್ಲಿ ಪಾಲ್ಗೊಂಡಿತ್ತು. ನಾಯಿಯ ಪ್ರಭಾವಶಾಲಿ ಪ್ರದರ್ಶನ ಜನರ ಮನಸ್ಸನ್ನು ಕದ್ದಿದೆ. ಶುಕ್ರವಾರ ಆಯೋಜನೆ ಮಾಡಿದ್ದ ಈ ಸೆಷನ್ ನಲ್ಲಿ ನಾಯಿಯ ಅದೋಮುಖ ಶ್ವಾನಾಸನ ಮತ್ತು ಬ್ಯಾಲೆನ್ಸಿಂಗ್ ಸ್ಟ್ರೆಚ್ ಆಸನ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದೆ. ನಾಯಿ ಯೋಗ ಕಲಿಯುತ್ತೆ ಅಂದ್ಮೇಲೆ ಮನುಷ್ಯರ್ಯಾಕೆ ಕಲಿಯೋಕೆ ಆಗಲ್ಲ ಅಂತ NDRF ಪ್ರಶ್ನೆ ಮಾಡಿದೆ.

ನಾಯಿ ಜೊತೆ ಯೋಗ ಮಾಡಿದ 13ನೇ ಬೆಟಾಲಿಯನ್ ಇನ್ಸ್ಪೆಕ್ಟರ್ ಮುಂಶಿ ರಾಮ್ ಪ್ರಕಾರ, ನಾಯಿ ಎರಡು ವರ್ಷಗಳಿಂದ ಯೋಗವನ್ನು ಅಭ್ಯಾಸ ಮಾಡ್ತಿದೆ. ನಾಯಿಯ ಈ ಅಭ್ಯಾಸ, ಯೋಗಕ್ಕೆ ಯಾವುದೇ ಗಡಿಯಿಲ್ಲ ಎಂಬುದನ್ನು ಸ್ಪಷ್ಪಡಿಸ್ತಿದೆ. ಪ್ರತಿ ದಿನ ತರಬೇತುದಾರರ ಜೊತೆ ನಾಯಿ ಯೋಗ ಸೆಷನ್ ನಲ್ಲಿ ಪಾಲ್ಗೊಂಡು ಯೋಗದ ಮೇಲೆ ತನಗಿರುವ ಆಸಕ್ತಿಯನ್ನು ಪ್ರದರ್ಶಿಸುತ್ತಿದೆ. ನಾಯಿಯ ಯೋಗದಿಂದ ಮನುಷ್ಯ ಪ್ರೇರಿತನಾಗ್ಬೇಕು. ಯೋಗ ಅನ್ನೋದು ಕೇವಲ ಜೂನ್ 21ಕ್ಕೆ ಮಾತ್ರ ಸೀಮಿತ ಆಗಿರ್ಬಾರದು. ಆಜೀವನ ಪರ್ಯಂತ ಯೋಗವನ್ನು ಅಭ್ಯಾಸ ಮಾಡ್ಬೇಕು ಎಂದು ಮುಂಶಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಯೋಗ ದಿನ 2025 : ಯೋಗವು ದೈಹಿಕ ಆರೋಗ್ಯ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಭಾರತದಲ್ಲಿ ಯೋಗದ ಇತಿಹಾಸ ಬಹಳ ಹಳೆಯದು. ಈಗ ಇಡೀ ಜಗತ್ತು ಈ ಯೋಗವನ್ನು ನಂಬಲು ಶುರು ಮಾಡಿದೆ. ಇದೇ ಕಾರಣಕ್ಕಾಗಿ ಪ್ರತಿ ವರ್ಷ ಜೂನ್ 21 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2025 ರಲ್ಲಿ, ಅಂತರರಾಷ್ಟ್ರೀಯ ಯೋಗ ದಿನದ ಥೀಮ್, ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬುದಾಗಿದೆ. ಈ ವರ್ಷದ ಧ್ಯೇಯವಾಕ್ಯ ನಮ್ಮ ಆರೋಗ್ಯ ಮತ್ತು ಭೂಮಿಯ ಆರೋಗ್ಯ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ತೋರಿಸುತ್ತದೆ.

ಯೋಗ ದಿನದ 10 ಪ್ರಮುಖ ಕಾರ್ಯಕ್ರಮಗಳು ಯಾವುವು? : ಯೋಗದ ಮಹತ್ವ ಸಾರಲು ಸರ್ಕಾರ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.

1. ಯೋಗ ಸಂಗಮ - 1 ಲಕ್ಷ ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ

2. ಯೋಗ ಬಂಧನ - ಯೋಗದೊಂದಿಗೆ ಸಾಮಾಜಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು

3. ಯೋಗ ಪಾರ್ಕ್ - ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಕೇಂದ್ರಗಳು

4. ಯೋಗ ಸಮಾವೇಶ - ಎಲ್ಲರನ್ನೂ ಸಂಪರ್ಕಿಸುವ ಯೋಗ ಕಾರ್ಯಕ್ರಮ

5. ಯೋಗ ಪ್ರಭಾವ - ಯೋಗದ ಸಕಾರಾತ್ಮಕ ಪರಿಣಾಮದ ಕುರಿತು ಚರ್ಚೆ

6. ಯೋಗ ಸಂಪರ್ಕ - ಡಿಜಿಟಲ್ ವೇದಿಕೆಗಳೊಂದಿಗೆ ಯೋಗವನ್ನು ಸಂಪರ್ಕಿಸುವುದು

7. ಹಸಿರು ಯೋಗ - ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಯೋಗ

8. ಯೋಗ ಅನ್ಪ್ಲಗ್ಡ್ - ಸಾಮಾಜಿಕ ಮಾಧ್ಯಮದಿಂದ ದೂರವಿದ್ದು ಶಾಂತಿಯಿಂದ ಯೋಗ

9. ಯೋಗ ಮಹಾಕುಂಭ - ಬೃಹತ್ ಯೋಗ ಕಾರ್ಯಕ್ರಮ

10. ಸಂಯೋಗ - ಇತರ ಕಲೆಗಳು ಮತ್ತು ಸಂಪ್ರದಾಯಗಳೊಂದಿಗೆ ಯೋಗದ ಸಂಯೋಜನೆ

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್