
ಜೈಪುರ (ಜೂ.20): ಶಾಕಿಂಗ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಜೈಪುರದ 5 ಸ್ಟಾರ್ ಹೋಟೆಲ್‌ವೊಂದರಲ್ಲಿ ನವಜೋಡಿಯೊಂದು ಸೆಕ್ಸ್ ಮಾಡುತ್ತಿರುವಾಗ ತಮ್ಮ ಕೋಣೆಯ ಬೃಹತ್ ಕಿಟಕಿಯ ಪರದೆ ಹಾಕೋದನ್ನೇ ಮರೆತಿದ್ದಾರೆ. ಇದರ ಪರಿಣಾಮ ಎನ್ನುವಂತೆ ಇವರಿಬ್ಬರ 'ಆಟ' ಸಾರ್ವಜನಿಕರಿಗೆ ಭರ್ಜರಿ ನೋಟವಾಗಿದೆ. ಹೋಟೆಲ್‌ನ ಎದುರಲ್ಲಿದ್ದ ಫ್ಲೈ ಓವರ್‌ನಿಂದ ನೇರವಾಗಿ ಇವರ ರೂಮ್ ಕಿಟಕಿ ಕಾಣುತ್ತಿದ್ದ ಹಿನ್ನಲೆಯಲ್ಲಿ ಇದು ಮೇಲ್ಸೇತುವೆ ಮೇಲೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್‌ಗೂ ಕಾರಣವಾಯಿತು.
ರಸ್ತೆಯಲ್ಲಿದ್ದ ವ್ಯಕ್ತಿಗಳೇ ಹೋಟೆಲ್‌ನಲ್ಲಿ ನವಜೋಡಿಯ ಖಾಸಗಿ ಕ್ಷಣದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವ್ಯಾಪಕವಾಗಿ ವೈರಲ್ ಆಗಿದೆ. ಸೆಕ್ಸ್ ಮಾಡುವ ವೇಳೆ ಜೋಡಿ ತಮ್ಮ ಕೋಣೆಯ ಬೃಹತ್ ಕಿಟಕಿಯ ಪರದೆಯನ್ನು ಹಾಕಲು ಮರೆತಿದ್ದರು. ಹೋಟೆಲ್ ಮುಂಭಾಗದ ಫ್ಲೈಓವರ್‌ನಿಂದ ಹೋಟೆಲ್ ಕೋಣೆಯಲ್ಲಿ ದಂಪತಿಗಳ ಸೆಕ್ಸ್ ನೋಡಲು ಭಾರಿ ಜನದಟ್ಟಣೆ ಉಂಟಾಗಿತ್ತು.
ಜೈಪುರದ 22 ಗೋಡೌನ್ ಬಳಿಯ ಹಾಲಿಡೇ ಇನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೀಡಿಯೊವನ್ನು ಹೋಟೆಲ್‌ನ ಹೊರಗಿನ ರಸ್ತೆಯಿಂದ ಪರದೆಗಳಿಲ್ಲದ ಕಿಟಕಿಗಳ ಮೂಲಕ ಚಿತ್ರೀಕರಿಸಲಾಗಿದೆ ಎನ್ನುವುದು ಆಘಾತಕಾರಿ ವಿಚಾರವಾಗಿದೆ. ವೀಡಿಯೊ ರೆಕಾರ್ಡ್ ಮಾಡುವ ವ್ಯಕ್ತಿಯೊಬ್ಬರು "ಘೋಡಿ ಬನಾ ದಿಯಾ ಭ್******" ಎಂದು ಹೇಳುವುದನ್ನು ಕೇಳಬಹುದಾಗಿದೆ.. ಹೋಟೆಲ್ ಹೊರಗೆ ನೆರೆದಿದ್ದ ಜನಸಮೂಹವು ರಸ್ತೆಯ ಆಚೆಗಿನ ಸೇತುವೆಯಿಂದ ದಂಪತಿಗಳ ಮೇಲೆ ಮನಬಂದಂತೆ ಮಾತನಾಡಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಜೂನ್ 17ರ ರಾತ್ರಿ 10 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರೂಮ್‌ನ ಕಿಟಕಿಗೆ ಯಾವುದೇ ಕರ್ಟನ್ ಇರದೇ ಇದ್ದ ಕಾರಣಕ್ಕೆ ರಸ್ತೆಯಲ್ಲಿದ್ದ ವ್ಯಕ್ತಿಗಳು ಕೂಡ ಕೋಣೆಯ ಒಳಗಡೆ ಏನಾಗುತ್ತಿದೆ ಅನ್ನೋದನ್ನ ಬಹಳ ಸುಲಭವಾಗಿ ನೋಡಬಹುದಾಗಿತ್ತು.
ಕೆಲವು ಜನರು ಈ ಜೋಡಿಯನ್ನು ಗಮನಿಸಿ ವೀಡಿಯೊ ರೆಕಾರ್ಡ್ ಮಾಡಿದ ತಕ್ಷಣ, ಹೋಟೆಲ್ ಹೊರಗೆ ಜನಸಮೂಹ ಜಮಾಯಿಸಿತು ಮತ್ತು ಇದು ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಈಗ, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕೋಣೆಯಲ್ಲಿ ಪರದೆಗಳನ್ನು ಹಾಕದೆ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಅನೇಕ ಸೋಶಿಯಲ್ ಮೀಡಿಯಾ ಯೂಸರ್‌ಗಳು ಹೋಟೆಲ್ ಮ್ಯಾನೇಜ್‌ಮೆಂಟ್‌ಅನ್ನು ದೂಷಿಸುತ್ತಿದ್ದಾರೆ. ಇನ್ನು ಕೆಲವರು ಇದನ್ನು ವೈಯಕ್ತಿಕ ಸ್ಥಳದ ಗಂಭೀರ ಆಕ್ರಮಣ ಎಂದು ಕರೆದು ವೀಡಿಯೊವನ್ನು ರೆಕಾರ್ಡ್ ಮಾಡಿ ಹಂಚಿಕೊಂಡ ವ್ಯಕ್ತಿಯನ್ನು ಟೀಕಿಸಿದ್ದಾರೆ.
"ಜೈಪುರದ 22 ಗೋಡೌನ್ ಬಳಿಯ ಹಾಲಿಡೇ ಇನ್ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ 'ಯೋಗ' ಮಾಡುತ್ತಿರುವ ವೀಡಿಯೊ ವಿಭಿನ್ನ ರೀತಿಯ ಸೆನ್ಸೇಷನ್ ಸೃಷ್ಟಿಸಿದೆ. ಬಹುಶಃ ಅವರು ಪರದೆಗಳನ್ನು ಹಾಕಲು ಮರೆತಿರಬಹುದು! ನೀವು ಹೇಳುವ ಹಾಗೆ, ಯೋಗ ಮಾಡುವಾಗ ಪರದೆ ಹಾಕಬೇಕೇ?" ಎಂದು ಸೋಶಿಯಲ್ ಮೀಡಿಯಾ ಯೂಸರ್ ಒಬ್ಬರು ಆನ್‌ಲೈನ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
"ಜೈಪುರದ ಹೋಟೆಲ್ ಒಂದರ ವೀಡಿಯೊವನ್ನು ಅನೇಕ ಜನರು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಪತ್ರಕರ್ತರೂ ಆಗಿದ್ದಾರೆ. ಇದು ಅಪರಾಧ. ಈ ರೆಕಾರ್ಡಿಂಗ್ ಅನ್ನು ಕಾನೂನುಬಾಹಿರ ರೀತಿಯಲ್ಲಿ ಮಾಡಲಾಗಿದೆ. ಸಾಮಾನ್ಯ ಕುಟುಂಬ/ಗಂಡ-ಹೆಂಡತಿಯ ವ್ಯಕ್ತಿಯೊಬ್ಬರು ಹೋಟೆಲ್‌ನಲ್ಲಿ ತಂಗಿರುವ ಸಾಧ್ಯತೆಯಿದೆ. ಈ ರೀತಿಯಾಗಿ, ಯಾರಾದರೂ ಯಾರೊಬ್ಬರ ಮನೆಯ ಮೂಲೆಯಿಂದ ಇಣುಕಿ ನೋಡಿ ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಬಹುದೇ @jaipur_police ಇದನ್ನು ವೈರಲ್ ಮಾಡಿದ ವ್ಯಕ್ತಿಯನ್ನು ಗುರುತಿಸಿ, ಅವರು ಅದನ್ನು ಏಕೆ ಮತ್ತು ಹೇಗೆ ರೆಕಾರ್ಡ್ ಮಾಡಿದ್ದಾರೆ ಅನ್ನೋದನ್ನ ವಿಚಾರಣೆ ಮಾಡಿ. ಸೋಶಿಯಲ್ ಮೀಡಿಯಾದಲ್ಲಿ ಅದನ್ನು ವೈರಲ್ ಮಾಡಿದವರಿಗೆ ನೋಟಿಸ್ ನೀಡಬೇಕು" ಎಂದು ಮತ್ತೊಬ್ಬ ಯೂಸರ್ ಬರೆದಿದ್ದಾರೆ.
ವಿಡಿಯೋದಲ್ಲಿ ಕಂಡುಬರುವ ಜೋಡಿಗಳ ಗುರುತು ಇಲ್ಲಿಯವರೆಗೆ ತಿಳಿದಿಲ್ಲ ಮತ್ತು ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.