ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೋತಿಯೊಂದು ಕ್ಯಾಮೆರಾ ಬಳಸಿ ವ್ಲಾಗ್ ಮಾಡುತ್ತಿದೆ. ಈ ವಿಡಿಯೋ ಎಷ್ಟು ವೈರಲ್ ಆಗಿದೆ ಎಂದರೆ ಸುಮಾರು 100 ಮಿಲಿಯನ್ ವೀಕ್ಷಣೆಗಳು ಮತ್ತು 8 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ವಿಡಿಯೋವನ್ನು 1.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೋಡಿದ ನಂತರ ಅದೇ ಇನ್ ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಲಾದ ಹಲವು ವಿಡಿಯೋಗಳನ್ನು ಜನರು ನೋಡಿದಾಗ ಒಂದು ವಿಷಯ ಬೆಳಕಿಗೆ ಬಂದಿದೆ. ಅದಕ್ಕೂ ಮೊದಲು ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ...
ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಹರಿದ್ವಾರದ ಹರ್ ಕಿ ಪೌರಿಯಲ್ಲಿ ಸ್ನಾನ ಮಾಡಲು ಬಂದಿರುವ ಕೋತಿಯೊಂದು, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಿದೆ. ಥೇಟ್ ವ್ಲಾಗರ್ ಶೈಲಿಯಲ್ಲಿ 'ನಮಸ್ಕಾರ ಸ್ನೇಹಿತರೇ, ಇಂದು ನಾನು ಹರಿದ್ವಾರಕ್ಕೆ ಹರ್ ಕಿ ಪೌರಿಯಲ್ಲಿ ಗಂಗಾ ಸ್ನಾನ ಮಾಡಲು ಮತ್ತು ಗಂಗಾ ಮಾತೆಯ ಆಶೀರ್ವಾದ ಪಡೆಯಲು ಬಂದಿದ್ದೇನೆ' ಎಂದು ಹೇಳುತ್ತಿದೆ. ಅಷ್ಟೇ ಅಲ್ಲ, ಕೋತಿ ಈಗ 'ನಾನು ಆಧ್ಯಾತ್ಮಿಕ ವ್ಲಾಗ್ ಮಾಡಲು ರೆಡಿಯಾಗಿದ್ದೇನೆ' ಎಂದು ಹೇಳುತ್ತಿರುವುದು ಕಂಡುಬರುತ್ತದೆ. 'ನಾನು ಮೊದಲ ಬಾರಿಗೆ ಗಂಗಾ ಸ್ನಾನ ಮಾಡಲು ಬಂದಿದ್ದೇನೆ. ನೀರು ಸ್ವಲ್ಪ ತಂಪಾಗಿದೆ. ಆದರೆ ನನ್ನ ಹೃದಯ ನಿರಾಳವಾಗಿದೆ' ಎಂದು ಕೋತಿ ಹೇಳುತ್ತದೆ. ಜೀವನದಲ್ಲಿ ಇಂತಹ ಕ್ಷಣಗಳು ಕೆಲವೊಮ್ಮೆ ಬರುತ್ತವೆ ಎಂದು ಸಹ ಕೋತಿ ಹೇಳಿದೆ. ಇದನ್ನು ನೋಡುತ್ತಿದ್ದ ಹಾಗೆ ಎಲ್ಲರ ಮನಸ್ಸಿನಲ್ಲಿ ಮೂಡಿದ್ದು ಅದೊಂದೇ ಪ್ರಶ್ನೆ. ಕೋತಿಯು ಮನುಷ್ಯರಂತೆ ವ್ಲಾಗ್ ಅನ್ನು ಹೇಗೆ ಮಾಡಬಹುದು. ಅದು ಕೂಡ ಮಾನವ ಧ್ವನಿಯಲ್ಲಿ.
ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ ನೋಡಿ
ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ಅದನ್ನು ಪರಿಶೀಲಿಸಿದಾಗ ಅದರ ಸತ್ಯಾಸತ್ಯತೆ ಹೊರಬಂದಿದೆ. ವಾಸ್ತವವಾಗಿ ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (Al) ಬಳಸಿ ಕ್ರಿಯೇಟ್ ಮಾಡಲಾಗಿದೆ. ಡೀಪ್‌ಫೇಕ್ ಸ್ಕ್ಯಾನರ್ ಎಂಬ ಉಪಕರಣದೊಂದಿಗೆ ವೈರಲ್ ವಿಡಿಯೋವನ್ನು ಪರಿಶೀಲಿಸಲಾಗಿದೆ. Al-ನಿರ್ಮಿತ ಡೀಪ್‌ಫೇಕ್ ವಿಡಿಯೋಗಳನ್ನು ಪರಿಶೀಲಿಸಲು ಈ ಉಪಕರಣವನ್ನು ಬಳಸಲಾಗುತ್ತದೆ. ಇದು ವೀಡಿಯೊದಲ್ಲಿ ಮುಖಗಳ ಚಲನೆ ಮತ್ತು ಅಸ್ವಾಭಾವಿಕತೆಯನ್ನು ಸೆರೆಹಿಡಿಯುತ್ತದೆ. ಇದರೊಂದಿಗೆ, ಈ ಉಪಕರಣವು ತುಟಿಗಳ ಚಲನೆಯನ್ನು ಸಹ ಓದುತ್ತದೆ. ಇದು Al ರಚಿತ ಮತ್ತು ನೈಜ ವಿಡಿಯೋಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
ಈ ಹಿಂದೆಯೂ ಬಂದಿತ್ತು!
ಒಂದು ತಿಂಗಳ ಹಿಂದೆಯೂ ಇದೇ ರೀತಿ ವಿಡಿಯೋ ವೈರಲ್ ಆಗಿತ್ತು. ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯವು ತುಂಬಾ ಭಯಾನಕವಾಗಿ ಕಾಣುವುದಲ್ಲದೆ, ಮೈಯೆಲ್ಲಾ ಪುಳಕವಾಗುವಂತೆ ಮಾಡಿತ್ತು. ವಿಡಿಯೋ ನೋಡಿದ ಜನರು ಅದನ್ನು 'ಅನಕೊಂಡ ನದಿ' ಎಂದೇ ಕರೆದರು. ಆದರೆ ನಿಜ ಹೇಳಬೇಕೆಂದರೆ ಈ ಫೋಟೋ ರಿಯಲ್ ಅಲ್ಲ, ಹೌದು, ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿತ್ತು.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ ಟ್ವಿಟರ್) ನಲ್ಲಿ @PlacesMagi15559 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿತ್ತು. ಕೇವಲ 10 ಸೆಕೆಂಡುಗಳ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದರು. ಈ ಶಾಕಿಂಗ್ ವೈರಲ್ ವಿಡಿಯೋದಲ್ಲಿ ಹೆಲಿಕಾಪ್ಟರ್ ಒಳಗಿನಿಂದ, ನದಿಯನ್ನು ಕೆಳಗೆ ನೋಡಲಾಗುತ್ತಿದ್ದು, ಅಲ್ಲಿ ಅನೇಕ ದೈತ್ಯ ಅನಕೊಂಡಗಳು (ಹಾವುಗಳು) ನೀರಿನ ಮೇಲ್ಮೈಯಲ್ಲಿ ಈಜುತ್ತಿರುವುದನ್ನು ಕಾಣಬಹುದು. ದೃಶ್ಯವು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿತ್ತು.