ಸದಸ್ಯರಿಂದ 4 ಲಕ್ಷ ರೂ ಸಾಲ ಪಡೆದು ಟೀಂ ಮ್ಯಾನೇಜರ್ ಪರಾರಿ, HR ಬಳಿ ಹೋದ ಎಂಪ್ಲಾಯ್ಸ್‌ಗೆ ಶಾಕ್

Published : Aug 10, 2026, 12:51 PM IST
Office meeting

ಸಾರಾಂಶ

ಕಾರ್ಪೋರೇಟ್ ಕಂಪನಿಯ ಮ್ಯಾನೇಜರ್ ತಂಡದ ಸದಸ್ಯರಿಂದ ಒಟ್ಟು 4 ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ. ಬಳಿಕ ಎಮರ್ಜೆನ್ಸಿ ಲೀವ್ ಪಡೆದು ಪರಾರಿಯಾದ ಘಟನೆ ನಡೆದಿದೆ. ಸಾಲ ಕೊಟ್ಟ ಉದ್ಯೋಗಿಗಳು ಹೆಚ್ಆರ್ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ಹೆಚ್ಆರ್ ಉತ್ತರವೇನು?

ಹೈದರಾಬಾದ್ (ಆ.10) ಕಾರ್ಪೋರೇಟ್ ಕಂಪನಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಟೀಂ ಮ್ಯಾನೇಜರ್ ತಂಡದ ಸದಸ್ಯರಿಂದ ಒಟ್ಟು 4 ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ. ಬಳಿಕ ಕಂಪನಿ ಬಳಿಕ ಎಮರ್ಜೆನ್ಸಿ ರಜೆ ಎಂದು ತೆರಳಿದ್ದಾರೆ. ಬಳಿಕ ಕಂಪನಿ ಕಡೆ ಮ್ಯಾನೇಜರ್ ಮುಖ ಮಾಡಿಲ್ಲ. ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ. 4 ಲಕ್ಷ ರೂಪಾಯಿ ಪಡೆದ ಪರಾರಿಯಾಗಿರುವ ಮ್ಯಾನೇಜರ್ ಕುರಿತು ಉದ್ಯೋಗಿಗಳು ಹೆಚ್ಆರ್ ಬಳಿ ದೂರು ನೀಡಿದ್ದಾರೆ. ಆದರೆ ಹೆಚ್ಆರ್ ನೀಡಿದ ಉತ್ತರಕ್ಕೆ ಉದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ.

ಮ್ಯಾನೇಜರ್ ಸಾಲ ಕೇಳಿದರೆ ಕೊಡದೇ ಇರೋಕ್ಕಾಗುತ್ತಾ?

ಕಾರ್ಪೋರೇಟ್ ಕಚೇರಿಯ ಮ್ಯಾನೇಜರ್. ತನ್ನ ಸಹೋದ್ಯೋಗಿಗಳ ಬಳಿ ಸಾಲ ಕೊಡಿ ಎಂದಾಗ ಇಲ್ಲದಿದ್ದರೂ, ಕೊಡಲು ಸಾಧ್ಯವಿಲ್ಲದಿದ್ದರೂ ಹಲವರು ಕೊಟ್ಟಿದ್ದಾರೆ. ಮ್ಯಾನೇಜರ್ ಸಾಲ ಕೇಳಿ ಕೊಡದೆ ಇದ್ದರೆ ಮುಂದೆ ತಮ್ಮ ಸ್ಯಾಲರಿ ಹೈಕ್ , ಪ್ರಮೋಶನ್ ವಿಚಾರದಲ್ಲಿ ಸಮಸ್ಯೆಗಳಾಗಬಹುದು ಎಂದು ಎಲ್ಲರೂ ಸಾಲ ಕೊಟ್ಟಿದ್ದಾರೆ. ಹೀಗೆ ಒಟ್ಟು 4 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. ಮ್ಯಾನೇಜರ್ ನಮಗಿಂತ ಹೆಚ್ಚು ಸ್ಯಾಲರಿ ಇರುತ್ತೆ, ಒಂದೆರೆಡು ತಿಂಗಳಲ್ಲಿ ಮರಳಿ ನೀಡುತ್ತಾರೆ ಎಂದು ಎಲ್ಲರೂ ಕೊಟ್ಟಿದ್ದಾರೆ. ಮನೆಯಲ್ಲಿ ತುರ್ತು ಚಿಕಿತ್ಸೆ ಎಂದು ಕೆಲವರಲ್ಲಿ ಹೇಳಿದರೆ, ಮತ್ತೆ ಕೆಲವರಲ್ಲಿ ವೈಯುಕ್ತಿಕ ಕೆಲ ಸಮಸ್ಯೆಗಳು ಎಂದು ಹೇಳಿದ್ದಾರೆ. 10 ಸಾವಿರ, 20 ಸಾವಿರ ಸೇರಿದಂತೆ ಹಲವು ಹಂತದಲ್ಲಿ ಸಾಲ ಪಡೆದುಕೊಂಡಿದ್ದಾನೆ.

ಎಮರ್ಜೆನ್ಸಿ ರಜೆ ಪಡೆದ ಪರಾರಿ

ಒಟ್ಟು 4 ಲಕ್ಷ ರೂಪಾಯಿ ಸಾಲ ಪಡೆದ ಮ್ಯಾನೇಜರ್, ಹೆಚ್ಆರ್ ಬಳಿ ತನಗೆ ಎಮರ್ಜೆನ್ಸಿ ರಜೆ ಬೇಕು ಎಂದು ಇಮೇಲ್ ಮಾಡಿದ್ದಾನೆ. ಹೀಗಾಗಿ ಹೆಚ್ಆರ್ ಹಿಂದೂ ಮುಂದು ನೋಡದೆ ಮ್ಯಾನೇಜರ್‌ಗೆ ರಜೆ ನೀಡಿದ್ದಾರೆ. ರಜ ಮುಗಿದ ಒಂದೆರಡು ದಿನವಾದರೂ ಮ್ಯಾನೇಜರ್ ಸುಳಿವಿಲ್ಲ. ಎಮರ್ಜೆನ್ಸಿ ರಜೆಯಿಂದ ಬಂದ ಬಳಿಕ ಸಾಲ ಕೇಳಬೇಕು ಎಂದು ಎಲ್ಲಾ ಸಹೋದ್ಯೋಗಿಗಳು ಸಜ್ಜಾಗಿದ್ದಾರೆ. ಆದರೆ ಎಮರ್ಜೆನ್ಸಿ ರಜೆಯಿಂದ ಮ್ಯಾನೇಜರ್ ಮರಳಲೇ ಇಲ್ಲ.

ಮ್ಯಾನೇಜರ್ ಮರಳದ ಕಾರಣ ಫೋನ್ ಮಾಡಿದರೆ ಸ್ವಿಚ್ ಆಫ್. ಇತ್ತ ಹೆಚ್ಆರ್ ಬಳಿ ಕೇಳಿದಾಗ ಮ್ಯಾನೇಜರ್ ಕುರಿತು ಯಾವುದೇ ಸುಳಿವು ಇರಲಿಲ್ಲ. ಹೆಚ್ಆರ್ ಕರೆ ಮಾಡಿದರೂ ಫೋನ್ ಸ್ವಿಚ್ ಆಫ್. ಈ ಕುರಿತು ಹೆಚ್ಆರ್ ಇಮೇಲ್ ಮಾಡಿದರೂ ಯಾವುದೇ ಸ್ಪಂದನೆ ಇರಲಿಲ್ಲ. ಹೀಗಾಗಿ ಕಿರಿಯ ಉದ್ಯೋಗಿಗಳು ಚರ್ಚಿಸಿ ಹೆಚ್ಆರ್ ಬಳಿ ತಾವು ಸಾಲ ಕೊಟ್ಟಿರುವ ವಿಚಾರ ಹೇಳಿದ್ದಾರೆ.

ಹೆಚ್ಆರ್ ಉತ್ತರ ಕೇಳಿ ಕಿರಿಯ ಉದ್ಯೋಗಿಗಳು ಕಂಗಾಲು

ಹೆಚ್ಆರ್ ಬಳಿ ಕಿರಿಯ ಉದ್ಯೋಗಿಗಳು ಮ್ಯಾನೇಜರ್ ಕುರಿತು ದೂರು ನೀಡಿದ್ದಾರೆ. ಮ್ಯಾನೇಜರ್ ಸಾಲ ಕೇಳಿರುವ ವಿಚಾರ, ನೀವು ಕೊಟ್ಟಿರುವ ವಿಚಾರ ಈಗಷ್ಟೆ ತಿಳಿದಿದೆ. ಇದು ಕಂಪನಿ ಸಂಬಂಧಿಸಿದ್ದಲ್ಲ. ನೀವು ಸಾಲ ಕೊಡುವ ಮುನ್ನ ಅಥವಾ ಮ್ಯಾನೇಜರ್ ಸಾಲ ಕೇಳುವಾಗ ಕಂಪನಿ ಮೂಲಕ ನಡೆದಿಲ್ಲ. ವೈಯುಕ್ತಿಕವಾಗಿ ನಿಮ್ಮ ವಿಶ್ವಾಸ, ನಂಬಿಕೆಯಲ್ಲಿ ನೀವು ಕೊಟ್ಟಿದ್ದೀರಿ. ಇದಕ್ಕೆ ಕಂಪನಿ ಹೊಣೆಯಲ್ಲ ಎಂದಿದ್ದಾರೆ. ಇದೀಗ ಕಿರಿಯ ಉದ್ಯೋಗಿಗಳು ತಮ್ಮ ಹಣ ವಾಪಸ್ ಬರಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಲವರು ಕೆಲ ಸಲಹೆ ನೀಡಿದ್ದಾರೆ. ಕಿರಿಯ ಉದ್ಯೋಗಳು ಬಹುತೇಕ ಅಕೌಂಟ್ ಟ್ರಾನ್ಸಾಕ್ಷನ್, ಯುಪಿಐ ಮೂಲಕ ಹಣ ಕಳುಹಿಸಿರುತ್ತಾರೆ. ಈ ದಾಖಲೆ ತೋರಿಸಿ, ಮ್ಯಾನೇಜರ್ ಸೆಟ್ಲ್‌ಮೆಂಟ್ ಮೊತ್ತದಲ್ಲಿ ಕಡಿತ ಮಾಡಿ ಕಿರಿಯ ಉದ್ಯೋಗಿಳಿಗೆ ನೀಡಲಿ ಎಂದಿದ್ದಾರೆ.

PREV
Read more Articles on
click me!

Recommended Stories

9 ರೂಪಾಯಿಗೆ ಸತಾಯಿಸಿದ ಬ್ಯಾಂಕ್​ಗೇ ಬುದ್ಧಿ ಕಲಿಸಿದ ಹಾಸನದ ರೈತ: ಅಭಿನಂದನೆಗಳ ಸುರಿಮಳೆ
ಸಣ್ಣ ಬಂಡವಾಳ, ದೊಡ್ಡ ಲಾಭ; ₹10 ಸಾವಿರದಿಂದ ಶುರುವಾದ ಸ್ಟಾಲ್ 4 ದಿನದಲ್ಲೇ ₹10,530