ಬೆಂಗಳೂರು: ಮನೆ ಕೆಲಸ ಮಾಡೋರಿಗೆ ಸಿಗೋ ಸಂಬಳ ನೋಡಿ ಐಟಿ ಉದ್ಯೋಗಿಗಳೇ ಶಾಕ್

Published : Oct 17, 2025, 12:37 PM IST
Maid Salary

ಸಾರಾಂಶ

ಮನೆ ಕೆಲ್ಸಕ್ಕೆ, ಮಕ್ಕಳನ್ನು ನೋಡಿಕೊಳ್ಳುವವರಿಗೆ ಬೇಡಿಕೆ ಹೆಚ್ಚಿದೆ. ಸಿಗುವ ಕೆಲ್ಸದವರೂ ಒಂದೇ ಕಡೆ ನಿಲ್ಲೋದು ಕಷ್ಟ. ಭರವಸೆ ಉಳಿಸಿಕೊಂಡಿರುವ ದಾದಿಗೆ ಮಹಿಳೆಯೊಬ್ಬರು ಕೈತುಂಬ ಸಂಬಳ ನೀಡ್ತಿದ್ದಾರೆ. ಅವ್ರ ಪೋಸ್ಟ್ ಈಗ ವೈರಲ್ ಆಗಿದೆ. 

ಮನೆ ಕೆಲ್ಸದಾಕೆ (Maid) ರಜೆ ಇದ್ರೆ ಕೈಕಾಲು ಆಡೋದಿಲ್ಲ. ಯಾವ್ದೂ ಕೆಲ್ಸ ಸರಿಯಾಗಿ ನಡೆಯೋದಿಲ್ಲ. ಈಗಿನ ದಿನಗಳಲ್ಲಿ ಮನೆ ಕೆಲಸಕ್ಕೆ ಕೆಲ್ಸಗಾರರು ಬೇಕೇಬೇಕು. ಮನೆ ಕ್ಲೀನಿಂಗ್, ಬಟ್ಟೆ, ಪಾತ್ರೆ ವಾಶ್ ಅಂತ ಅಡುಗೆಯವರೆಗೂ ಜನರು ಕೆಲ್ಸದವರನ್ನು ಇಟ್ಕೊಂಡಿರ್ತಾರೆ. ಬಾಡಿಗೆ ಮನೆ ಇರ್ಲಿ, ಸ್ವಂತದ ಮನೆ ಇರ್ಲಿ, ಮೇಡ್ ಅಗತ್ಯ ಭಾರತೀಯರಿಗೆ ಸಿಕ್ಕಾಪಟ್ಟೆ ಇದೆ. ಇದೇ ಕಾರಣಕ್ಕೆ ಮೇಡ್ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಒಂದೇ ಮಹಿಳೆ, ಬೆಳಿಗ್ಗೆಯಿಂದ ಸಂಜೆಯವರೆಗೆ ಹತ್ತಾರು ಮನೆ ಕೆಲ್ಸ ಮಾಡಿ ಜೀವನ ನಡೆಸ್ತಿದ್ದಾಳೆ. ಆಕೆ ಒಂದು ದಿನ ಮನೆ ಕೆಲ್ಸಕ್ಕೆ ಬಂದಿಲ್ಲ ಅಂದ್ರೆ ಆಕಾಶ ತಲೆ ಮೇಲೆ ಬಿದ್ದಂತಾಗುತ್ತೆ. ಡಿಮ್ಯಾಂಡ್ ಹೆಚ್ಚಾದಂತೆ ಮನೆ ಕೆಲ್ಸದವರ ಸಂಬಳ ಕೂಡ ಏರಿಕೆ ಆಗ್ತಿದೆ. ಆದ್ರೆ ಇಲ್ಲೊಬ್ಬ ಮಹಿಳೆ ಮಾತ್ರ ಮನೆ ಕೆಲಸದಾಕೆಗೆ ನೀಡ್ತಿರುವ ಸಂಬಳ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಮನೆ ಕೆಲಸದಾಕೆಗೆ ಸಿಗ್ತಿದೆ ಇಷ್ಟೊಂದು ಸಂಬಳ : 

ಬೆಂಗಳೂರಿನಲ್ಲಿ ವಾಸಿಸುವ ರಷ್ಯಾದ ಮಹಿಳೆ ಯೂಲಿಯಾ ಅಸ್ಲಾಮೋವಾ, ತನ್ನ ಮನೆ ಕೆಲ್ಸದಾಕೆಗೆ ನೀಡ್ತಿರುವ ಸಂಬಳ ಎಲ್ಲರನ್ನು ಅಚ್ಚರಿಗೊಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಯೂಲಿಯಾ ಅಸ್ಲಾಮೋವಾ ಪೋಸ್ಟ್ ನೋಡಿದ ಜನ ದಂಗಾಗಿದ್ದಾರೆ. ಯೂಲಿಯಾ ಅಸ್ಲಾಮೋವಾ, ನಮ್ಮ ಮನೆ ಕೆಲ್ಸಕ್ಕೆ ಬರುವ ಮಹಿಳೆಗೆ ತಿಂಗಳಿಗೆ 45,000 ರೂಪಾಯಿ ಸಂಬಳ ನೀಡ್ತಿದ್ದಾಳೆ. ಜನರನ್ನು ಸದಾ ಪ್ರೋತ್ಸಾಹಿಸುವ ಯೂಲಿಯಾ ಅಸ್ಲಾಮೋವಾ, ದೀರ್ಘ ಸಂಬಂಧದ ಮೇಲೆ ನಂಬಿಕೆ ಇಡ್ತಾರೆ. ನಮ್ಮ ಮಗಳಿಗೆ ದಾದಿಯನ್ನು ನೇಮಿಸಿಕೊಳ್ಳುವ ಸಮಯದಲ್ಲಿ ಯೂಲಿಯಾ ಗಂಭೀರವಾಗಿದ್ದರು. 20ಕ್ಕೂ ಹೆಚ್ಚು ಜನರನ ಇಂಟರ್ವ್ಯೂ ಮಾಡಿದ್ದರು. ಮಗಳನ್ನು ನೋಡ್ಕೊಳ್ಳೋಕೆ ಎಂಥವರು ಬೇಕು ಎಂಬುದನ್ನು ಅರ್ಥಮಾಡ್ಕೊಳ್ಳಲು ಲೀಸ್ಟ್ ರೆಡಿ ಮಾಡಿದ್ರು.

ಒಂದು ಯುಟ್ಯೂಬ್ ರೀಲ್ಸ್‌ಗೆ ಸಿಗೋ ಹಣ ಇಷ್ಟೊಂದಾ: ಆದಾಯ ರೀವಿಲ್ ಮಾಡಿ ಕಿವಿಮಾತು ಹೇಳಿದ ಗಣೇಶ್ ಕಾರಂತ್

ದಾದಿ (nanny)ಗೆ ಹೆಚ್ಚಾಯ್ತು ಸಂಬಳ : 

ಯೂಲಿಯಾ ಅಸ್ಲಾಮೋವಾ, ಅಳೆದು ತೂಗಿ ದಾದಿಯನ್ನು ನೇಮಕ ಮಾಡ್ಕೊಂಡಿದ್ದಾರೆ. ಚೌಕಾಶಿ ಇಲ್ದೆ ಸಂಬಳ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೊದಲ ವರ್ಷದ ಕೆಲ್ಸ ನೋಡಿ ಸಂಬಳವನ್ನು ಶೇಕಡಾ 10ರಷ್ಟು ಹೆಚ್ಚು ಮಾಡಿದ್ರು. ಎರಡನೇ ವರ್ಷ ಕೆಲ್ಸದ ಆಧಾರದ ಮೇಲೆ ಮತ್ತೆ ಸಂಬಳ ಹೆಚ್ಚಾಯ್ತು. ಮೂರನೇ ವರ್ಷ, ಅವರನ್ನೇ ಪೂರ್ಣಾವಧಿ ಉದ್ಯೋಗಿಯಾಗಿ ನೇಮಿಸಿಕೊಂಡ ಯೂಲಿಯಾ, 1.7 ಪಟ್ಟು ಸಂಬಳ ಹೈಕ್ ಮಾಡಿದ್ದಲ್ಲದೆ, ದಾದಿಗೆ ಡ್ರೈವಿಂಗ್ ಕಲಿಸಿಕೊಟ್ರು. ವೃತ್ತಿಪರ ತರಬೇತಿ ನೀಡಿದ್ರು. ಮಗಳನ್ನು ಸ್ಕೂಲಿಗೆ ಬಿಡುವ ಜವಾಬ್ದಾರಿಯನ್ನು ದಾದಿಗೆ ನೀಡಿದ್ರು.

ತಲುಪಲೇ ಇಲ್ಲ ಮಗಳು ಕಳುಹಿಸಿದ ಮೆಸೇಜ್: ಅಮ್ಮನಿಗೆ ಕಳುಹಿಸಿದ ಕೊನೆ ಸಂದೇಶ ಹಂಚಿಕೊಂಡು ಕಣ್ಣೀರಿಟ್ಟ ಮಗಳು

ಕೆಲ್ಸದಲ್ಲಿ ಭೇದ- ಭಾವ ಇಲ್ಲ. ಎಲ್ಲರನ್ನೂ ಒಂದೇ ರೀತಿ ನೋಡ್ಬೇಕು ಎಂಬುದು ಯೂಲಿಯಾ ವಾದವಾಗಿದೆ. ನಾವು ಹೇಗೆ ಜನರನ್ನು ನೋಡುತ್ತೇವೋ ಅದೇ ರೀತಿ ಜನರು ನಮ್ಮನ್ನು ನೋಡ್ತಾರೆ. ಮನೆ ಕೆಲ್ಸದವರು ನಿಲ್ಲೋದಿಲ್ಲ, ಓಡಿ ಹೋಗ್ತಾರೆ ಎನ್ನುವ ಮಾತನ್ನು ನಾನು ನಂಬೋದಿಲ್ಲ. ನೀವು ನಿಮ್ಮ ಕೆಲ್ಸದ ಬಗ್ಗೆ ಯೋಚಿಸುವ ರೀತಿಯಲ್ಲೇ ಇತರರ ಕೆಲ್ಸದ ಬಗ್ಗೆಯೂ ಯೋಚಿಸಿ, ಹುದ್ದೆಯನ್ನು ಲೆಕ್ಕಿಸಬೇಡಿ ಎಂದು ಯೂಲಿಯಾ ಬರೆದಿದ್ದಾರೆ. ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವ ಬದಲು ನೀವು ಪ್ರತಿದಿನ 4–5 ಗಂಟೆಗಳ ಕಾಲ ಮನೆಗೆಲಸ ಮಾಡುತ್ತಿದ್ದರೆ, ನೀವು ಮುಖ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದೀರಿ. ಕೆಲಸಗಾರರನ್ನು ನೇಮಿಸಿಕೊಳ್ಳುವುದನ್ನು ಲಘುವಾಗಿ ತೆಗೆದುಕೊಂಡರೆ ಬಹುಮುಖ್ಯ ಸಮಯವನ್ನು ನೀವು ಕಳೆದುಕೊಳ್ತಿದ್ದೀರಿ. ಜನರನ್ನು ಕೆಟ್ಟದಾಗಿ ನಡೆಸಿಕೊಂಡ್ರೆ ಕರ್ಮ ನಮ್ಮನ್ನು ಬಿಡೋದಿಲ್ಲ ಎಂದು ಬರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯೂಲಿಯಾ ಪೋಸ್ಟ್ ವೈರಲ್ ಆಗಿದ್ದು, ಜನರು ಕಮೆಂಟ್ ಮಾಡ್ತಿದ್ದಾರೆ. ಕೆಲವರು ಯೂಲಿಯಾ ಕೆಲ್ಸವನ್ನು ಮೆಚ್ಚಿದ್ರೆ ಮತ್ತೆ ಕೆಲವರು ಮಧ್ಯಮ ವರ್ಗದವರಿಗೆ ಇದು ಅಸಾಧ್ಯ ಎಂದಿದ್ದಾರೆ.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್