Viral Video: ಗ್ಲಾಸ್ ಒಡೆದು ಹೋಗಲಿ , ಆದ್ರೆ ನಿಮ್ಮ ಜೀವ ಮುಖ್ಯ! ಕೆಲಸಗಾರನ ಮೇಲೆ ಸಿಟ್ಟಾಗದ ಮನೆ ಮಾಲೀಕನಿಗೆ ಸಲಾಂ

Published : Aug 08, 2026, 10:25 PM IST
Kind Customer Helps Handyman After Glass Shatters in Viral Video

ಸಾರಾಂಶ

ಮನೆಯೊಂದರಲ್ಲಿ ಬಾತ್‌ರೂಂ ಗ್ಲಾಸ್ ಪ್ಯಾನೆಲ್ ಅಳವಡಿಸುವಾಗ ಆಕಸ್ಮಿಕವಾಗಿ ಒಡೆದುಹೋಗಿದೆ. ಈ ವೇಳೆ ಮನೆ ಮಾಲೀಕರು, ಕೆಲಸಗಾರನ ಸುರಕ್ಷತೆಯ ಬಗ್ಗೆ ಮೊದಲು ವಿಚಾರಿಸಿ, ಒಡೆದ ಗಾಜನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದ್ದಾರೆ. ಅವರ ಈ ಮಾನವೀಯತೆಗೆ ಆನ್‌ಲೈನ್‌ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮನೆ ರಿಪೇರಿ ಕೆಲಸದ ವೇಳೆ ನಡೆದ ಒಂದು ಅನಿರೀಕ್ಷಿತ ಘಟನೆ ಮತ್ತು ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಈಗ ವೈರಲ್ ವಿಡಿಯೋ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಾತ್‌ರೂಂಗೆ ಹಾಕಬೇಕಿದ್ದ ದುಬಾರಿ ಗ್ಲಾಸ್ ಒಡೆದುಹೋಗಿದೆ. ಆದರೆ ಮನೆ ಮಾಲೀಕರು ಕೆಲಸಗಾರನ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲಸಗಾರನೊಬ್ಬ ಭಾರವಾದ ಗ್ಲಾಸ್ ಪ್ಯಾನೆಲ್ ಅನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾಗ, ಅದು ಆಕಸ್ಮಿಕವಾಗಿ ಒಡೆದು ನೂರಾರು ಚೂರುಗಳಾಗಿ ಬಾತ್‌ರೂಂ ತುಂಬಾ ಹರಡಿಕೊಂಡಿದೆ.

ಈ ವೇಳೆ ಮನೆ ಮಾಲೀಕ ಕೋಪಗೊಳ್ಳುವ ಬದಲು ಮೊದಲು ಆ ಕೆಲಸಗಾರನಿಗೆ ಏನಾದರೂ ಗಾಯವಾಯಿತೇ ಎಂದು ವಿಚಾರಿಸಿದ್ದಾರೆ. ಒಡೆದ ಗ್ಲಾಸ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಮೊದಲು ನಿಮಗೆ ಗಾಯವಾಗಿಲ್ಲ ತಾನೇ? ನೀವು ಸುರಕ್ಷಿತವಾಗಿರೋದು ಮುಖ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಒಡೆದ ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸಲು ಅವರೂ ಕೈಜೋಡಿಸಿದ್ದಾರೆ. ಇದರಿಂದ ಒಂದು ಪ್ರಮಾದ, ಕೆಟ್ಟ ಪರಿಸ್ಥಿತಿ, ಮಾನವೀಯತೆ ಮತ್ತು ಸಹಾನುಭೂತಿಯ ಸ್ಪರ್ಶದೊಂದಿಗೆ ಸುಖಾಂತ್ಯ ಕಂಡಿದೆ. ಯೋಚಿಸಿ ಮನೆ ಮಾಲೀಕರು ಬೇರೆಯವರಾಗಿದ್ದರೆ ಹೇಗೆ ವರ್ತಿಸುತ್ತಿದ್ದರು?

ವೈರಲ್ ಆದ ವಿಡಿಯೋದಲ್ಲೇನಿದೆ?

ಈ ಘಟನೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಒಬ್ಬ ಹ್ಯಾಂಡಿಮ್ಯಾನ್ (ಕೆಲಸಗಾರ) ಗ್ರಾಹಕರೊಬ್ಬರ ಬಾತ್‌ರೂಂನಲ್ಲಿ ದೊಡ್ಡ ಗ್ಲಾಸ್ ಪ್ಯಾನೆಲ್ ಅಳವಡಿಸುತ್ತಿರುವುದು ಕಾಣಿಸುತ್ತದೆ. ಆಗ ಇದ್ದಕ್ಕಿದ್ದಂತೆ ಆ ಗ್ಲಾಸ್ ಪ್ಯಾನೆಲ್ ಪುಡಿಪುಡಿಯಾಗಿ ಒಡೆದುಹೋಗುತ್ತದೆ. ಒಡೆದ ಗಾಜಿನ ಚೂರುಗಳು ನೆಲದ ಮೇಲೆಲ್ಲಾ ಹರಡಿಕೊಂಡು ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಯಿತು. ಆದರೂ ಮನೆ ಮಾಲೀಕ ಶಾಂತವಾಗಿ ಕೆಲಸಗಾರನಿಗೆ ಏನಾದರೂ ಆಯಿತೇ ಎಂದು ವಿಚಾರಿಸುತ್ತಿದ್ದರು. ಆಗಿರುವ ನಷ್ಟದ ಬಗ್ಗೆ ಪ್ರಶ್ನಿಸುವ ಬದಲು ಮನೆ ಮಾಲೀಕರು ಆ ಕೆಲಸಗಾರನಿಗೆ ಗಾಯವಾಗಿದೆಯೇ ಎಂದು ಕೇಳಿದರು. ಒಡೆದ ಗಾಜಿನ ಬಗ್ಗೆ ಚಿಂತಿಸುವ ಮೊದಲು, ತನಗೆ ಯಾವುದೇ ಗಾಯಗಳಾಗಿಲ್ಲವೇ ಎಂದು ಪರೀಕ್ಷಿಸಿಕೊಳ್ಳುವಂತೆ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮನೆ ಮಾಲೀಕನ ಮನಸು ಎಷ್ಟು ಒಳ್ಳೆಯದು!

ದುಬಾರಿ ಬೆಲೆಯ ಗಾಜು ಒಡೆದಾಗ ಮನೆ ಮಾಲೀಕ ಕೆಲಸಗಾರ ಮೇಲೆ ರೇಗಾಡಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ, ಕೆಲಸಗಾರನಿಗೆ ಏನಾದ್ರೂ ಆಯ್ತೇ ಎಂದು ವಿಚಾರಿಸುವುದರ ಜೊತೆಗೆ ಒಡೆದ ಗಾಜಿನ ಚೂರುಗಳನ್ನು ಸಂಗ್ರಹಿಸಲು ಮತ್ತು ಬಾತ್‌ರೂಂ ಸ್ವಚ್ಛಗೊಳಿಸಲು ಕೂಡ ಸಹಾಯ ಮಾಡಿದರು. ಅವರ ಈ ಶಾಂತ ಮತ್ತು ಸಹಾನುಭೂತಿಯ ವರ್ತನೆ ಕೆಲಸಗಾರನಿಗೆ ಬಹಳ ಖುಷಿ ಕೊಟ್ಟಿದೆ. ನಂತರ ಆ ಕೆಲಸಗಾರ ಮನೆ ಮಾಲೀಕನ ದೊಡ್ಡ ಗುಣಕ್ಕೆ ಅವರ ಕುಟುಂಬದೊಂದಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.

ಈ ವಿಡಿಯೋ ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು, ದುಬಾರಿ ನಷ್ಟವಾದರೂ ಕೋಪಗೊಳ್ಳದೆ ಮಾನವೀಯತೆ ತೋರಿದ ಮನೆ ಮಾಲೀಕರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

9ನೇ ತರಗತಿ ಫೇಲಾಗಿದ್ದ ಟ್ಯಾಕ್ಸಿ ಡ್ರೈವರ್‌ಗೆ ಕೆಲಸ ಕೊಟ್ಟ ಸ್ಟಾರ್ಟ್‌ಅಪ್ ಮಾಲೀಕ: ಈಗ ಕಂಪನಿಯ ಇಂಡಿಯಾ ಹೆಡ್!
ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್; 'ಯಶ್ ನನ್ನ ತಮ್ಮ, ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾರೆ' ಎಂದ 'ಕರುನಾಡ ಚಕ್ರವರ್ತಿ'