
ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ರೈಲು ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಸದಾ ಆತಂಕದ ವಿಷಯವಾಗಿರುತ್ತೆ. ಆದರೆ, ಈಗ ವೈರಲ್ ಆಗಿರುವ ವಿಡಿಯೋವೊಂದು ಮನುಷ್ಯನ ವಿಕೃತಿ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತಿದೆ. ಚಲಿಸುವ ರೈಲಿನಲ್ಲಿ ಕಿಟಕಿಯ ಮೂಲಕ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಆ ಮೂತ್ರವನ್ನು ಪಕ್ಕದಲ್ಲೇ ಮಲಗಿದ್ದ ಮಹಿಳೆಯ ಮೇಲೆ ಸಿಡಿಸಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಘಟನೆ ನಡೆದಿದ್ದು ಮಧ್ಯರಾತ್ರಿಯ ಸಮಯದಲ್ಲಿ. ಎಲ್ಲ ಪ್ರಯಾಣಿಕರು ನಿದ್ರೆಗೆ ಜಾರಿದ್ದಾಗ, ಈ ಕಾಮೋನ್ಮಾದಿ ವ್ಯಕ್ತಿ ರೈಲಿನ ಕಿಟಕಿಯ ಬಳಿ ನಿಂತು ಕಿಟಕಿಯಿಂದಲೇ ಮೂತ್ರ ವಿಸರ್ಜಿಸಲು ಶುರು ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ವಿಕೃತಿ, ಕಿಟಕಿಯ ಪಕ್ಕದ ಸೀಟಿನಲ್ಲೇ ಮಲಗಿದ್ದ ಅನ್ಯ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರವನ್ನು ಉದ್ದೇಶಪೂರ್ವಕವಾಗಿ ಎರಚಿದ್ದಾನೆ.
ತನ್ನ ಮೈಮೇಲೆ ಏನೋ ದ್ರವ ಸಿಡಿಯುತ್ತಿರುವುದನ್ನು ಗಮನಿಸಿದ ಮಹಿಳೆ ತಕ್ಷಣ ಎಚ್ಚರಗೊಂಡಿದ್ದಾರೆ. ಈ ವೇಳೆ ಗಾಬರಿಗೊಂಡ ಆ ವಿಕೃತ ವ್ಯಕ್ತಿ ಕೂಡಲೇ ಪ್ಯಾಂಟ್ ಜಿಪ್ ಹಾಕಿಕೊಂಡು ಏನೂ ತಿಳಿಯದವನಂತೆ ತನ್ನ ಸೀಟಿನಲ್ಲಿ ಕುಳಿತುಕೊಂಡಿದ್ದಾನೆ. ಆದರೆ, ಆತನ ಈ ಅಸಹ್ಯಕರ ಕೃತ್ಯದಿಂದ ಗಲಿಬಿಲಿಗೊಂಡ ಮಹಿಳೆ, ಆತನನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜೋರಾಗಿ ಮಾತಿನ ಚಕಮಕಿ ನಡೆದಿದೆ.
ಮಹಿಳೆ ಮತ್ತು ಆ ವ್ಯಕ್ತಿಯ ನಡುವೆ ಗಲಾಟೆ ಶುರುವಾಗುತ್ತಿದ್ದಂತೆ, ಮಹಿಳೆಯ ಪಕ್ಕದ ಸೀಟಿನಲ್ಲಿದ್ದ ಆಕೆಯ ಸಂಬಂಧಿಕ ಮಹಿಳೆ ಹಾಗೂ ಮತ್ತೊಬ್ಬ ಪುರುಷ ಎಚ್ಚರಗೊಂಡು ಸಹಾಯಕ್ಕೆ ಬಂದಿದ್ದಾರೆ. ನಡೆದ ಘಟನೆಯನ್ನು ಮಹಿಳೆ ವಿವರಿಸಿದಾಗ ಇಡೀ ಬೋಗಿಯಲ್ಲಿದ್ದ ಪ್ರಯಾಣಿಕರು ಸ್ತಬ್ದರಾಗಿದ್ದಾರೆ. ಆಕ್ರೋಶಗೊಂಡ ಮಹಿಳೆಯ ಕಡೆಯವರು ಮತ್ತು ಇತರೆ ಪ್ರಯಾಣಿಕರು ಆತನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆತನನ್ನು 'ಮನುಷ್ಯ ರೂಪದ ಮೃಗ' ಎಂದು ಕರೆದಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ವಿವೇಕಹೀನ ಘಟನೆ ಯಾವ ರೈಲಿನಲ್ಲಿ ನಡೆದಿದೆ? ಯಾವ ಊರಿಗೆ ಹೋಗುತ್ತಿತ್ತು? ಮತ್ತು ಯಾವ ದಿನಾಂಕದಂದು ನಡೆದಿದೆ ಎಂಬ ಬಗ್ಗೆ ಇನ್ನು ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ, ರೈಲ್ವೆ ಪೊಲೀಸರು ಈ ವಿಡಿಯೋವನ್ನು ಆಧರಿಸಿ ಆತನನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ರೈಲುಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಬೇಕಿದೆ.