ಲಂಡನ್‌ನಲ್ಲಿ ಕೆಲಸ ಕಳೆದುಕೊಂಡ ಮಗ.. ಭಾರತದಲ್ಲಿದ್ದ ಅಪ್ಪನ ರಿಯಾಕ್ಷನ್‌ಗೆ ಇಡೀ ಜಗ್ಗತ್ತು ಬೆರಗಾಯ್ತು..

Published : Aug 25, 2026, 06:44 AM IST
Fathers Response To Layoff

ಸಾರಾಂಶ

ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಯುವಕನೊಬ್ಬ ಏಕಾಏಕಿ ಕೆಲಸ ಕಳೆದುಕೊಂಡ. ಬೆನ್ನಲ್ಲೇ ಆತನಿಗೆ ಅಪ್ಪ ನೆನಪಾಗಿದ್ದಾನೆ. ಕರೆ ಮಾಡಿ ತಿಳಿಸಿದಾಗ ಅಪ್ಪ ಕೊಟ್ಟ ಉತ್ತರಕ್ಕೆ ಇಡೀ ವಿಶ್ವವೇ ಮೆಚ್ಚಿ ಭೇಷ್ ಎಂದಿದೆ. ಅಷ್ಟಕ್ಕೂ ಆ ಉತ್ತರ ಏನಾಗಿತ್ತು? ಈ ಸ್ಟೋರಿಯಲ್ಲಿದೆ..

ಲಂಡನ್: ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವೃತ್ತಿಪರ ಕೈಶ್ ಅನ್ಸಾರಿ (Kaish Ansari) ಅವರು ಇತ್ತೀಚೆಗೆ ಹಂಚಿಕೊಂಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬ್ರಿಟನ್‌ನಲ್ಲಿ ಕೆಲಸ ಕಳೆದುಕೊಂಡ (Layoff) ನಂತರ ಆ ವಿಷಯವನ್ನು ತಂದೆಗೆ ತಿಳಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಈಗ ಲಕ್ಷಾಂತರ ಜನರ ಕಣ್ಣು ಒದ್ದೆ ಮಾಡಿದೆ.

ಏನಿದು ಘಟನೆ?

ಕೈಶ್ ಅನ್ಸಾರಿ ಸ್ಕಾಟ್ಲೆಂಡ್‌ನ ಗ್ಲ್ಯಾಸ್ಗೋದಲ್ಲಿರುವ 'ಜೆಪಿ ಮೋರ್ಗಾನ್' (JP Morgan) ಸಂಸ್ಥೆಯಲ್ಲಿ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರಿಗೆ ಲೇ-ಆಫ್ (ಕೆಲಸದಿಂದ ತೆಗೆದುಹಾಕುವಿಕೆ) ಬಿಸಿ ತಟ್ಟಿದೆ. ವಿದೇಶದಲ್ಲಿ ಕೆಲಸ ಕಳೆದುಕೊಳ್ಳುವುದು ಆರ್ಥಿಕ ಸಮಸ್ಯೆ ಮಾತ್ರವಲ್ಲದೆ, ವೀಸಾ ಅವಲಂಬನೆಯಿಂದಾಗಿ ದೊಡ್ಡ ಆತಂಕವನ್ನು ತಂದೊಡ್ಡುತ್ತದೆ. ಈ ಕಹಿ ಸುದ್ದಿಯನ್ನು ಭಾರತದಲ್ಲಿರುವ ತನ್ನ ತಂದೆಗೆ ತಿಳಿಸಲು ಕೈಶ್ ಭಯಪಟ್ಟಿದ್ದರು.

ತಂದೆಯ ಅಮೂಲ್ಯ ಮಾತು

ಕೈಶ್ ತನ್ನ ತಂದೆಗೆ ಫೋನ್ ಮಾಡಿ ಕೆಲಸ ಹೋದ ಬಗ್ಗೆ ತಿಳಿಸಿದಾಗ ತಂದೆ ಗಾಬರಿಯಾಗುವ ಬದಲು ಅತ್ಯಂತ ಶಾಂತವಾಗಿ ಪ್ರತಿಕ್ರಿಯಿಸಿದರು. ಇದು ಅಲ್ಲಾಹನ ಇಚ್ಛೆ. ಮುಂದೆ ನಿನಗೆ ಇದಕ್ಕಿಂತ ಒಳ್ಳೆಯದು ಸಿಗಬಹುದು ಎಂದು ಧೈರ್ಯ ತುಂಬಿದರು. ಮಗನ ವೃತ್ತಿಜೀವನಕ್ಕಿಂತ ಹೆಚ್ಚಾಗಿ ಆತನ ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯೇ ಮುಖ್ಯ ಎಂಬುದು ತಂದೆಯ ಆ ಮಾತಿನಲ್ಲಿ ಎದ್ದು ಕಾಣುತ್ತಿತ್ತು.

ಕೈಶ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾ ಹೀಗೆ ಬರೆದಿದ್ದಾರೆ: ನಾನು ಇದನ್ನು ಸಹಾನುಭೂತಿ ಪಡೆಯಲು ಹಂಚಿಕೊಳ್ಳುತ್ತಿಲ್ಲ. ಕಷ್ಟದ ಸಮಯದಲ್ಲಿ ನೀವು ಒಬ್ಬರೇ ಅಲ್ಲ, ನಿಮ್ಮ ಕುಟುಂಬ ಸದಾ ನಿಮ್ಮ ಜೊತೆ ಇರುತ್ತದೆ ಎಂದು ನೆನಪಿಸಲು ಹಂಚಿಕೊಳ್ಳುತ್ತಿದ್ದೇನೆ. ಲೇ-ಆಫ್ ಎಂಬುದು ನಿಮ್ಮ ಸಾಮರ್ಥ್ಯದ ಅಳತೆಯಲ್ಲ. ಇದು ನಿಮ್ಮ ವೃತ್ತಿಜೀವನದ ಒಂದು ಭಾಗವಷ್ಟೇ, ಅಂತ್ಯವಲ್ಲ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸುಮಾರು 8.3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 51 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕೈಶ್, ಇಷ್ಟು ಅರ್ಥ ಮಾಡಿಕೊಳ್ಳುವ ತಂದೆ ಸಿಗಲು ನೀನು ಪುಣ್ಯ ಮಾಡಿದ್ದೀಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಂದೆಯ ಮುಖದಲ್ಲಿನ ಆ ನಗು ನಾನಿದ್ದೇನೆ ಮಗನೇ ಎಂಬ ಭರವಸೆ ನೀಡುವಂತಿತ್ತು ಎಂದು ಇನ್ನೊಬ್ಬರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಅನ್ಸಾರಿ ಅವರ ತಂದೆಯ ನಿರ್ಧಾರವನ್ನು ಕಿಂಗ್ ಮೆಂಟಾಲಿಟಿ (ರಾಜನಂತಹ ಗುಣ) ಎಂದು ಬಣ್ಣಿಸಿದ್ದಾರೆ. ಸದ್ಯ ಆರ್ಥಿಕ ಅನಿಶ್ಚಿತತೆಯ ನಡುವೆ ಕೆಲಸ ಕಳೆದುಕೊಂಡು ಕಂಗಾಲಾಗಿರುವ ಸಾವಿರಾರು ಯುವಕರಿಗೆ ಕೈಶ್ ಅನ್ಸಾರಿ ಅವರ ಈ ವಿಡಿಯೋ ದೊಡ್ಡ ಮಟ್ಟದ ಸ್ಫೂರ್ತಿ ನೀಡುತ್ತಿದೆ.

PREV
Read more Articles on
click me!

Recommended Stories

ಆಟೋದಲ್ಲಿ ಅಳುತ್ತಿದ್ದ ಯುವತಿಗೆ ಸಾಂತ್ವನ ಹೇಳಿದ ಚಾಲಕ: ವೈರಲ್ ಆಯ್ತು 'ಕ್ಯೂಟೆಸ್ಟ್ ಅಣ್ಣ'ನ ಕಥೆ!
ಈಜಲು ಹೋಗಿದ್ದ ಬಾಲಕಿಯ ಬಲಿ ಪಡೆದ ಮಿದುಳು ತಿನ್ನುವ ಅಮೀಬಾ; ದಾರುಣ ಘಟನೆ