
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನಮ್ಮ ದೇಶಕ್ಕೆ ಸೂಕ್ತ ಸ್ಥಾನ ಮಾನ ನೀಡಲು, ಭಾರತೀಯರಿಗೆ ಒಂದು ಗೌರವದ ಸ್ಥಾನ ಒದಗಿಸಿಕೊಡಲು ಇನ್ನಿಲ್ಲದ ಪ್ರಯತ್ನ ನಡೆಸ್ತಿದ್ದಾರೆ. ಪ್ರತಿಯೊಂದು ದೇಶ ಈಗ ಭಾರತದತ್ತ ಮುಖ ಮಾಡಲು ಮೋದಿ ಕಾರಣವಾದ್ರೂ ಭಾರತೀಯರಿಗೆ ಸಿಕ್ಕ ಗೌರವವನ್ನು ಉಳಿಸಿಕೊಳ್ಳುವ ಅರ್ಹತೆ ಇಲ್ಲ. ನಮ್ಮ ಮರ್ಯಾದೆಯನ್ನು ನಾವೇ ತೆಗೆದುಕೊಳ್ತಿದ್ದೇವೆ. ವಿದೇಶಿಗರ ಮುಂದೆ ತಲೆ ತಗ್ಗಿಸುವ ಕೆಲ್ಸ ಮಾಡ್ತಿದ್ದೇವೆ. ಭಾರತೀಯರ ಮೇಲೆ ವಿದೇಶಿಯರಿಗೆ ನಿಧಾನವಾಗಿ ನಂಬಿಕೆ ಬರ್ತಿದೆ. ಆದ್ರೆ ಅದನ್ನು ನಾವೇ ಕಳೆದುಕೊಳ್ತಿದ್ದೇವೆ. ನಮ್ಮನ್ನು ಅನುಮಾನದಿಂದ ನೋಡುವಂತೆ ಮಾಡ್ತಿದ್ದೇವೆ. ಕೆಲವರು ತಮ್ಮ ಕೆಳ ಬುದ್ಧಿಯನ್ನು ಬಿಡೋದಿಲ್ಲ. ವಿದೇಶ ಸುತ್ತೋಕೆ ದುಡ್ಡಿರುತ್ತೆ, ವಿದೇಶದಲ್ಲಿ ನೆಲೆ ನಿಲ್ಲಲು ಹಣವಿರುತ್ತೆ ಆದ್ರೆ ಸಣ್ಣಪುಟ್ಟ ವಸ್ತುಗಳ ಖರೀದಿಗೆ ಹಣ ಇರೋದಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಮೋಸ ಮಾಡಿ, ಅವ್ರ ವಸ್ತುಗಳನ್ನು ಕದಿಯುವ ಅದೆಷ್ಟೋ ಶ್ರೀಮಂತರು ನಮ್ಮ ದೇಶದಲ್ಲಿದ್ದಾರೆ. ಬರೀ ನಮ್ಮ ದೇಶದ ವ್ಯಾಪಾರಿಗಳಿಗೆ ಮಾತ್ರವಲ್ಲ ವಿದೇಶಿಗರಿಗೂ ಇವ್ರು ಮೋಸ ಮಾಡ್ತಿದ್ದಾರೆ. ಈಗ ವಿಯೆಟ್ನಾಂನಲ್ಲಿ ಕಳ್ಳತನ ಮಾಡಿದ ಭಾರತೀಯರ ವಿಡಿಯೋ ವೈರಲ್ ಆಗಿದೆ.
ಬರೋಬ್ಬರಿ 6,600 ಕೋಟಿ ರೂ ಬಿಟ್‌ಕಾಯಿನ್ ಹಗರಣ: ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ವಿರುದ್ಧ ಇಡಿ ಎಫ್‌ಐಆರ್
ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಫೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಭಾರತೀಯ ದಂಪತಿಯನ್ನು ನೀವು ಕಾಣಬಹುದು. ಬೀದಿ ಬದಿಯಲ್ಲಿರುವ ವ್ಯಾಪಾರಿ ಜೊತೆ ಪತಿ ಮಾತನಾಡ್ತಿದ್ದರೆ ಪತ್ನಿ, ವ್ಯಾಪಾರಸ್ಥೆಗೆ ತಿಳಿಯದೆ ವಸ್ತುವನ್ನು ತೆಗೆದು ತನ್ನ ಬ್ಯಾಗ್ ಗೆ ಹಾಕ್ತಿದ್ದಾಳೆ. ವ್ಯಾಪಾರಸ್ಥೆ ಗಮನ ಬೇರೆಡೆ ಹೋದಾಗ, ಪತಿ ಕೂಡ ವಸ್ತುವನ್ನು ಕದ್ದು, ಪತ್ನಿಗೆ ನೀಡ್ತಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ... ಜಾಗತಿಕವಾಗಿ ತಮ್ಮನ್ನು ಮತ್ತು ರಾಷ್ಟ್ರವನ್ನು ಮುಜುಗರಕ್ಕೀಡುಮಾಡುತ್ತಿದೆ ಅಂತ ಇದಕ್ಕೆ ಶೀರ್ಷಿಕೆ ಹಾಕಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಘಟನೆ ನಡೆದಿರೋದು ವಿಯಟ್ನಾಂನಲ್ಲಿ. ಭಾರತೀಯ ದಂಪತಿ ಕಳ್ಳತನ ಮಾಡುವಾಗ ಸಿಸಿಟಿವಿ ಕಣ್ಣಿಗೆ ಸೆರೆಯಾಗಿದ್ದಾರೆ ಅಂತ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ದಂಪತಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಗಾಜಾ ಪ್ರಜೆಗಳ ಮೊಬೈಲ್ ಹ್ಯಾಕ್ ಮಾಡಿ, ನೆತನ್ಯಾಹು ವಿಶ್ವಸಂಸ್ಥೆ ಭಾಷಣ ಪ್ರಸಾರ ಮಾಡಿದ ಇಸ್ರೇಲ್ ಸೇನೆ!
ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಕೋಪಗೊಂಡಿದ್ದಾರೆ. ಇಂಥ ಭಾರತೀಯರಿಂದ ನಮ್ಮ ಹಾಗೂ ದೇಶದ ಮರ್ಯಾದೆ ಹಾಳಾಗ್ತಿದೆ ಎಂದು ಕಿಡಿಕಾರಿದ್ದಾರೆ. ಇದೇ ಕಾರಣಕ್ಕೆ ವಿದೇಶಿಗರು, ಭಾರತೀಯರನ್ನು ನಂಬೋದಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ತಂದೆ – ತಾಯಿ ವರ್ತನೆ ಮಕ್ಕಳ ಮೇಲೂ ಪರಿಣಾಮ ಬೀರುತ್ತೆ ಎನ್ನುವ ಕಮೆಂಟ್ ಕೂಡ ಬಂದಿದೆ. ತಾಯಿ ಹಾಗೂ ತಂದೆ ಕಳ್ಳತನ ಮಾಡೋದನ್ನು ಮಗು ನೋಡ್ತಿದೆ. ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಭಾರತೀಯರು ಹೀಗೆ ಮಾಡಿದ್ರೆ, ಬೇರೆ ದೇಶಗಳು ಭಾರತೀಯ ಪ್ರವಾಸಿಗರ ವೀಸಾ ಕ್ಯಾನ್ಸಲ್ ಮಾಡುತ್ತೆ, ಇಂಥವನ್ನು ಹಿಡಿದು ಜೈಲಿಗೆ ಹಾಕ್ಬೇಕು ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಇಂಡಿಯಾ ಜನರನ್ನು ಇಸ್ರೇಲ್ ಜೊತೆ ಹೋಲಿಕೆ ಮಾಡಿದ್ದಾರೆ. ಇಂಡಿಯಾ ಹಾಗೂ ಇಸ್ರೇಲ್ ಜನರು ಒಂದೇ ಸ್ವಭಾವದವರು, ವಿದೇಶ ಸುತ್ತಲು ಹಣವಿರುತ್ತೆ, ಸಣ್ಣ ವಸ್ತು ಖರೀದಿಗೆ ಹಣ ಇರೋದಿಲ್ವಾ? ನಾಚಿಕೆಗೇಡು ಅಂತ ಕಮೆಂಟ್ ಮಾಡಿದ್ದಾರೆ.