Viral Video: ಇವ್ರು ನಿಮ್ಮನ್ನ ಹೀಗೆ ಮರುಳು ಮಾಡೋದು, ಬಯಲಾಯ್ತು ಜಾದೂಗಾರರ ರಹಸ್ಯ

Published : Sep 23, 2025, 04:16 PM IST
Viral magic trick

ಸಾರಾಂಶ

Magic Secret: ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೇಗವಾಗಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಜಾದೂಗಾರರ ಟೆಕ್ನಿಕ್ಸ್ ರಿವೀಲ್ ಆಗುತ್ತದೆ ಮತ್ತು ಅವರ ಕೈಚಳಕವನ್ನೂ ತೋರಿಸುತ್ತದೆ.

Magician Secrets: ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ರೀತಿಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗ್ತವೆ. ಪ್ರಸ್ತುತ ಜಾದೂಗಾರನೊಬ್ಬನ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ವಿಡಿಯೋ ಜಾದೂಗಾರನ ಟೆಕ್ನಿಕ್ ಮತ್ತು ಅವನು ತನ್ನ ಕೈಚಳಕವನ್ನ ಬಳಸಿಕೊಂಡು ಹೇಗೆ ಮ್ಯಾಜಿಕ್ ಮಾಡುತ್ತಾನೆ ಎಂಬುದನ್ನು ತೋರಿಸುತ್ತದೆ. ವಿಡಿಯೋವನ್ನ ಇಲ್ಲಿ ವೀಕ್ಷಿಸಿ.

"ಅವ್ರು ಮ್ಯಾಜಿಕ್ ಮಾಡ್ತಾರಂತೆ"...ಹೀಗೆ ಯಾರಾದ್ರೂ ಹೇಳಿದ್ರೆ ಅಲ್ಲಿ ಜನ ಜಂಗುಳಿಯೇ ನೆರೆದಿರುತ್ತದೆ. ಮ್ಯಾಜಿಕ್ ಅಂದ್ರೆನೇ ಹಾಗೆ. ಚಿಕ್ಕವರಿಂದ ದೊಡ್ಡವರ ತನಕ ಪ್ರತಿಯೊಬ್ಬರಿಗೂ ಕ್ರೇಜ್ ಇದ್ದೇ ಇರುತ್ತದೆ. ನೀವು ಬಹುಶಃ ಈ ಮಾತನ್ನು ಕೇಳಿರುತ್ತೀರಿ. "ಮ್ಯಾಜಿಕ್ ಅಂಥ ಏನೂ ಇಲ್ಲ, ಅದೆಲ್ಲವೂ ಮನಸ್ಸಿನ ಆಟ". ಹೌದು, ತಮ್ಮ ವಿವಿಧ ಟೆಕ್ನಿಕ್‌ನಿಂದ ನಮ್ಮನ್ನು ಮರುಳು ಮಾಡುವ ಜಾದೂಗಾರರ ಟೆಕ್ನಿಕ್ ಈಗ ಬಯಲಾಗಿದೆ.  ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೇಗವಾಗಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಜಾದೂಗಾರರ ಟೆಕ್ನಿಕ್ಸ್ ರಿವೀಲ್ ಆಗುತ್ತದೆ ಮತ್ತು ಅವರ ಕೈಚಳಕವನ್ನೂ ತೋರಿಸುತ್ತದೆ. 

ವೈರಲ್ ಆದ ಜಾದೂಗಾರನ ವಿಡಿಯೋ
 

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಬ್ಬ ಜಾದೂಗಾರ ಹುಡುಗಿಯರಿಗಾಗಿ ಮ್ಯಾಜಿಕ್ ಟ್ರಿಕ್ ಮಾಡುವುದನ್ನು ಕಾಣಬಹುದು. ಮೊದಲು, ಅವನು ಒಂದು ಲೋಟದಲ್ಲಿ ನೀರಿರುವ ಟೆಕ್ನಿಕ್ ಪ್ರದರ್ಶಿಸುತ್ತಾನೆ. ಅದನ್ನು ಅವನು ಬಹಳ ಕರಾರುವಕ್ಕಾಗಿ ಮಾಡುತ್ತಾನೆ. ನಂತರ ಅವನು ಕಾರ್ಡ್ ಟ್ರಿಕ್ಸ್, ಬಾಲ್-ವ್ಯಾನಿಶಿಂಗ್ ಟ್ರಿಕ್ಸ್ ಮತ್ತು ಇತರ ಹಲವು ರೀತಿಯ ಟೆಕ್ನಿಕ್ಸ್ ಮಾಡುತ್ತಾನೆ. ಹುಡುಗಿಯರು ತಮ್ಮ ಕಣ್ಣನ್ನ ತಮಗೇ ನಂಬಲು ಸಾಧ್ಯವಾಗಲ್ಲ. ಆದರೆ ತೆರೆಮರೆಯಲ್ಲಿ ಇದು ಕ್ಯಾಮೆರಾದಲ್ಲಿ ದಾಖಲಾಗುತ್ತಿರುವುದು ಆಶ್ಚರ್ಯಕರವಾಗಿದೆ.

2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ
 

ಈ ವೈರಲ್ ವಿಡಿಯೋವನ್ನು ಇಲ್ಲಿಯವರೆಗೆ 200,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸುಮಾರು 2,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್‌ಗಳು ಬಂದಿವೆ. ಕೆಲವರು ತಮ್ಮ ಬಾಲ್ಯದ ಮ್ಯಾಜಿಕ್ ಅನ್ನು ವೀಕ್ಷಿಸಿದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಜಾದೂಗಾರರ ಪ್ರತಿಭೆಯನ್ನು ಹೊಗಳುತ್ತಿದ್ದಾರೆ.

ಎಂಥ ಮುಗ್ಧ ಹೆಂಡತಿ
ಸಾಮಾಜಿಕ ಮಾಧ್ಯಮವು ಯಾವಾಗಲೂ ಎಲ್ಲಾ ರೀತಿಯ ವಿಡಿಯೋಗಳು, ಫೋಟೋಗಳು ಮತ್ತು ಪೋಸ್ಟ್‌ಗಳಿಂದ ತುಂಬಿರುತ್ತದೆ. ನೀವು ಇಲ್ಲಿಗೆ ಭೇಟಿ ನೀಡಿದಾಗಲೆಲ್ಲಾ ಸ್ಕ್ರಾಲ್‌ ಮಾಡುತ್ತಾ ಹೋದರೆ ಚಿತ್ರ-ವಿಚಿತ್ರ ಮಾತ್ರವಲ್ಲ, ಸುಂದರವಾದ ವಿಡಿಯೋಗಳೂ ಇರ್ತವೆ. ಈ ವಿಡಿಯೋದಲ್ಲಿ ಹಲವು ವೈರಲ್ ಆಗುತ್ತವೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಬಹುಶಃ ಇದು ಸ್ಕ್ರಿಪ್ಟೆಡ್ ಅನಿಸುತ್ತದೆ. ಆದ್ರೂ ಹಾಸ್ಯಮಯವಾಗಿದೆ. ಹಾಗಾದ್ರೆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡೋಣ.

ವೈರಲ್ ವಿಡಿಯೋದಲ್ಲಿ ಏನಿದೆ?
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ಮಹಿಳೆ ಸೋಫಾದ ಅಂಚಿನಲ್ಲಿ ಕುಳಿತು ಫೋನ್‌ನಲ್ಲಿ ಏನೋ ನೋಡ್ತಿದ್ದಾಳೆ. ನಂತರ ಇದಕ್ಕಿದ್ದಂತೆ ಬರುವ ಆಕೆಯ ಗಂಡ ಪೊರಕೆಯಲ್ಲಿ ಬಟ್ಟೆಯನ್ನು ನೇತುಹಾಕಿಕೊಂಡು ಮೇಲಕ್ಕೆ ನೋಡುತ್ತಾ ಹೋಗುವುದನ್ನು ನೋಡುತ್ತಾಳೆ. ಹೆಂಡತಿಗೆ ಗಂಡನ ವರ್ತನೆ ನೋಡಿ ಆಶ್ಚರ್ಯವಾಗುತ್ತೆ. ನಂತರ ಅವಳು ಮತ್ತೆ ಫೋನ್‌ ನೋಡ್ತಾ ಸುಮ್ನಾಗ್ತಾಳೆ. ಹಾಗೆ ಹೋದ ಗಂಡ ಮತ್ತೆ ಹಿಂತಿರುಗುತ್ತಾನೆ. ಮತ್ತದೇ ರೀತಿಯಲ್ಲಿ. ಈ ಬಾರಿ ಒಂದೇ ವ್ಯತ್ಯಾಸವೆಂದರೆ ಅವನ ಇನ್ನೊಂದು ಕೈ ಖಾಲಿಯಾಗಿಲ್ಲ, ಬದಲಿಗೆ ಡ್ರಿಂಕ್ಸ್ ಬಾಟಲಿಯಿದೆ. ಇದನ್ನ ಹೆಂಡ್ತಿ ಗಮನಿಸಲ್ಲ. ಆ ವ್ಯಕ್ತಿ ಬಾಟಲಿಯನ್ನು ತೆಗೆದುಕೊಳ್ಳಲು ಇಷ್ಟೆಲ್ಲಾ ಮಾಡ್ತಾನೆ.

ವಿಡಿಯೋವನ್ನು ಇಲ್ಲಿ ವೀಕ್ಷಿಸಿ
ನೀವು ಈಗಷ್ಟೇ ವೀಕ್ಷಿಸಿದ ವಿಡಿಯೋವನ್ನ @OGitala ಎಂಬ ಖಾತೆಯು X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದ ಜೊತೆಗೆ ಶೀರ್ಷಿಕೆ "ದೇವರು ಎಲ್ಲರಿಗೂ ಇಂತಹ ಮುಗ್ಧ ಹೆಂಡತಿಯನ್ನು ಕೊಡಲಿ." ಎಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ವಿಡಿಯೋವನ್ನ 29,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಇತರ ಖಾತೆಗಳಿಂದಲೂ ಮರು ಪೋಸ್ಟ್ ಮಾಡಲಾಗುತ್ತಿದೆ. ವಿಶಿಷ್ಟತೆಯಿಂದಾಗಿ ವಿಡಿಯೋ ವೈರಲ್ ಆಗ್ತಿದೆ.

PREV
Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್