2BHK ಮನೆ ಖರೀದಿಸೋಕು ಕಷ್ಟ ಆಗ್ತಿದೆ ಎಂದ ಶ್ರೀಮಂತ ಇಂಜಿನಿಯರ್, ವೈರಲ್ ಆಯ್ತು ಪೋಸ್ಟ್

Published : Jul 24, 2026, 03:51 PM IST
Home Loan

ಸಾರಾಂಶ

Hyderabad Techie Viral Post: ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಇತ್ತೀಚಿನ ಪೋಸ್ಟ್ ದೇಶದ ತೆರಿಗೆ ವ್ಯವಸ್ಥೆ ಮತ್ತು ಮನೆಗಳ ಬೆಲೆ ಏರಿಕೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕೈತುಂಬಾ ಸಂಬಳವಿದ್ದು, ದೇಶದ ಪ್ರಮುಖ ಆರ್ಥಿಕ ವರ್ಗದಲ್ಲಿದ್ದರೂ ₹2 ಕೋಟಿಯ ಸಣ್ಣ ಮನೆ ಕೊಳ್ಳುವುದು ಕಷ್ಟ ಎನ್ನುವ ಅವರ ಮಾತಿಗೆ ಲಕ್ಷಾಂತರ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ.

ಸಂಬಳ ಎಷ್ಟೇ ಹೆಚ್ಚಿದ್ದರೂ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಉದ್ಯೋಗಿಗಳಿಗೆ ದೇಶದ ಮೆಟ್ರೋ ನಗರಗಳಲ್ಲಿ ಸ್ವಂತ ಮನೆ ಖರೀದಿಸುವುದು ಎಷ್ಟು ಕಷ್ಟಕರವಾಗಿದೆ ಎಂಬುದಕ್ಕೆ ಹೈದರಾಬಾದ್‌ನ ಓರ್ವ ಟೆಕ್ನಿಕಲ್ ಪ್ರಪ್ರೊಷೆನಲ್ ಸೋಶಿಯಲ್ ಮೀಡಿಯಾ ಪೋಸ್ಟ್ ಸಾಕ್ಷಿಯಾಗಿದೆ.

ಹೌದು, ಸಾಮಾಜಿಕ ಜಾಲತಾಣ ‘X’ನಲ್ಲಿ ಹರ್ಷವರ್ಧನ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಹಂಚಿಕೊಂಡಿರುವ ಪೋಸ್ಟ್ ದೇಶದ ತೆರಿಗೆ ವ್ಯವಸ್ಥೆ, ಆದಾಯದ ಮಟ್ಟ ಹಾಗೂ ಮನೆಗಳ ಬೆಲೆ ಏರಿಕೆಯ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಪೋಸ್ಟ್‌ನಲ್ಲಿರುವುದೇನು?

ಎಷ್ಟೇ ಆದಾಯವಿದ್ರೂ ಅಷ್ಟೇ
ಸರ್ಕಾರಿ ಅಂಕಿಅಂಶಗಳ ಪ್ರಕಾರ ತಾವು ದೇಶದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಶೇಕಡ 2ರಷ್ಟು ಜನರ ಪಟ್ಟಿಯಲ್ಲಿದ್ದರೂ, ವಾಸ್ತವವೇ ಬೇರೆಯಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

2BHK ಫ್ಲ್ಯಾಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ
ತಮಗಿರುವ ಹೆಚ್ಚಿನ ವೇತನದ ಹೊರತಾಗಿಯೂ, ಹೈದರಾಬಾದ್‌ನ ಉತ್ತಮ ಗೇಟೆಡ್ ಕಮ್ಯುನಿಟಿಯಲ್ಲಿ ಒಂದು 2BHK ಫ್ಲ್ಯಾಟ್ ಖರೀದಿಸಲು ಅಥವಾ ದೀರ್ಘಕಾಲ ಪ್ರೀಮಿಯಂ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಆಸ್ತಿಯ ತೀವ್ರ ಬೆಲೆ ಏರಿಕೆ
ಉದಾಹರಣೆ ನೀಡಿದ ಅವರು, ತಾವು ಇರುವ ಸೊಸೈಟಿಯಲ್ಲೇ 2BHK ಫ್ಲ್ಯಾಟ್‌ನ ಬೆಲೆ ಸುಮಾರು ₹2 ಕೋಟಿ ತಲುಪಿದೆ. ಪ್ರಾಮಾಣಿಕವಾಗಿ ಗಳಿಸುವ ಸಂಬಳದಲ್ಲಿ ತೆರಿಗೆ ಪಾವತಿಸಿದ ನಂತರ ಉಳಿಯುವ ಹಣದಲ್ಲಿ ಇಷ್ಟೊಂದು ದುಬಾರಿ ಮನೆ ಖರೀದಿಸಲು ಎಷ್ಟು ವರ್ಷಗಳು ಬೇಕಾಗಬಹುದು ಎಂದು ಪ್ರಶ್ನಿಸಿದ್ದಾರೆ.

ಸಾಮಾನ್ಯ ತೆರಿಗೆದಾರರಿಗೆ ಕಷ್ಟ ಕಷ್ಟ
ದೇಶದಲ್ಲಿ ಕಪ್ಪು ಹಣದ 'ಸಮಾಂತರ ಅರ್ಥವ್ಯವಸ್ಥೆ' (Parallel Economy) ಮುಕ್ತವಾಗಿ ನಡೆಯುತ್ತಿದ್ದು, ಅನೇಕರು ತಮಗಿಂತ ಹೆಚ್ಚು ಗಳಿಸುತ್ತಿದ್ದರೂ ತೆರಿಗೆ ಕಟ್ಟುತ್ತಿಲ್ಲ. ಇದರಿಂದಾಗಿ ಸರ್ಕಾರಿ ಅಂಕಿಅಂಶಗಳು ವಾಸ್ತವದಿಂದ ದೂರವಿದ್ದು, ಸಾಮಾನ್ಯ ತೆರಿಗೆದಾರರಿಗೆ ಜೀವನ ನಿರ್ವಹಣೆ ಹಾಗೂ ಮನೆ ಖರೀದಿ ಎಟುಕದಂತಾಗಿದೆ ಎಂದು ಆರೋಪಿಸಿದ್ದಾರೆ.

ತೀವ್ರ ಚರ್ಚೆ ನಡೆಸಿದ ನೆಟ್ಟಿಗರು

ಈ ಪೋಸ್ಟ್ ಹಾಕುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ..

"ಆದಾಯ ತೆರಿಗೆ ಇಲಾಖೆಯು ಕೇವಲ ಹಾಲಿ ಇರುವ ತೆರಿಗೆದಾರರ ಮೇಲೆ ಗಮನ ಹರಿಸುತ್ತಿದೆಯೇ ಹೊರತು, ತೆರಿಗೆ ವಂಚಿಸುವ ಶೇ. 80ರಷ್ಟು ಉದ್ಯಮಿಗಳು ಅಥವಾ ವ್ಯಾಪಾರಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಿಲ್ಲ.",

"ದೇಶದಲ್ಲಿ ನಿಜವಾಗಿಯೂ ಅಷ್ಟೊಂದು ಸಮೃದ್ಧಿ ಇದ್ದಿದ್ದರೆ ವರ್ಷಕ್ಕೆ ಕೇವಲ 50,000 ಲಕ್ಸುರಿ ಕಾರುಗಳು ಮಾರಾಟವಾಗುತ್ತಿರಲಿಲ್ಲ. ಕಪ್ಪು ಹಣದ ಮೇಲೆ ನಿಯಂತ್ರಣ ಹೇರಬೇಕಿರುವುದು ಅಗತ್ಯ."

ಒಟ್ಟಾರೆಯಾಗಿ, ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಈ ಪೋಸ್ಟ್ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಪ್ರಾಮಾಣಿಕ ತೆರಿಗೆದಾರರು ಅನುಭವಿಸುತ್ತಿರುವ ಆರ್ಥಿಕ ಒತ್ತಡಕ್ಕೆ ಕನ್ನಡಿ ಹಿಡಿದಂತಿದೆ.

PREV
Read more Articles on
click me!

Recommended Stories

1.9 ಮಿಲಿಯನ್ ಜನಕ್ಕೆ ಇಷ್ಟವಾಯ್ತು ಟೀ ತಯಾರಿಸೋ ಈ ಹೊಸ ವಿಧಾನ - ನೀವೂ ಟ್ರೈ ಮಾಡಿ
'ಡ್ಯಾಡೀಸ್ ಹೋಮ್'.. ಯಶ್ ಹೋದಲ್ಲೆಲ್ಲಾ ಫಾಲೋ ಮಾಡ್ತಿದೆ ಈ ಡೈಲಾಗ್; ಅಷ್ಟಕ್ಕೂ ಇದರಲ್ಲಿರೋ ಸೀಕ್ರೆಟ್ ಏನು?