ಕುಳಿತು ತಿನ್ನುವಷ್ಟು ಆದಾಯ ಇದ್ರೂ 12 ಗಂಟೆ Uber ಕೆಲ್ಸ ಮಾಡ್ತಿದ್ದಾರೆ ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿ!

Published : Jul 22, 2026, 12:32 PM IST
viral post

ಸಾರಾಂಶ

viral post : ಮನೆ ಬಾಡಿಗೆಯೇ 80 ಸಾವಿರ ಬರುತ್ತೆ ಅಂದ್ರೆ ಕೆಲ್ಸ ಯಾರು ಮಾಡ್ತಾರೆ? ಅದೂ 12 ಗಂಟೆ ಉಬರ್‌ ಚಾಲಕರಾಗಿ! ಇಲ್ಲೊಬ್ಬ ವ್ಯಕ್ತಿ ಹೃದಯಾಘಾತದ ನಂತ್ರ ಈ ಸಾಹಸಕ್ಕೆ ಕೈ ಹಾಕಿದ್ದಾರೆ.

ಹೃದಯಾಘಾತದಿಂದ ಉದ್ಯೋಗ ಕಳೆದುಕೊಂಡ ಮೇಲೂ ಆತ್ಮವಿಶ್ವಾಸ ಕಳೆದುಕೊಳ್ದೆ ಹೊಸ ಜೀವನ ಆರಂಭಿಸಿದ ವ್ಯಕ್ತಿಯೊಬ್ಬರ ಕಥೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೆಹಲಿಯ ಉಬರ್‌ ಚಾಲಕರನ್ನು ಬಳಕೆದಾರರು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಕ್ರಿಯೇಟರ್ ಆಸ್ಥಾ ಸೇಠ್, ಉಬರ್‌ ಚಾಲಕರ ಕಥೆ ಹಂಚಿಕೊಂಡಿದ್ದಾರೆ. ಬದುಕು ನಡೆಸಲು ಹಣ ಮಾತ್ರ ಅಗತ್ಯವಿಲ್ಲ, ಛಲ, ಆತ್ಮವಿಶ್ವಾಸದ ಅಗತ್ಯವಿದೆ ಎಂಬುದನ್ನು ಇವರು ತೋರಿಸಿದ್ದಾರೆ.

ವೈರಲ್‌ ಸ್ಟೋರಿ 

ತಿಂಗಳಿಗೆ ಯಾವ್ದೆ ಕೆಲ್ಸ ಮಾಡ್ದೆ 80 ಸಾವಿರ ಕೈಗೆ ಬರುತ್ತೆ ಅಂದ್ರೆ ಯಾರು ಕಷ್ಟಪಡ್ತಾರೆ. ಮನೆಯಲ್ಲಿ ಹಾಯಾಗಿ ಕುಳಿತು ಬಂದ ಹಣದಲ್ಲಿ ಜೀವನ ನಡೆಸ್ತಾರೆ. ಅದ್ರಲ್ಲೂ ಹೃದಯಾಘಾತವಾಗಿ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದು, ಬದುಕಿ ಬಂದ ವ್ಯಕ್ತಿ ಆದಷ್ಟು ಆರಾಮದಾಯಕ ಜೀವನ ಬಯಸ್ತಾರೆ. ಆದ್ರೆ ಈ ವ್ಯಕ್ತಿ ಎಲ್ಲರಿಗಿಂತ ಭಿನ್ನ. ಹಣ ಗಳಿಸೋದು ಮಾತ್ರ ಜೀವನ ಅಲ್ಲ, ನೆಮ್ಮದಿ ಮುಖ್ಯ ಎಂಬ ಕಾರಣಕ್ಕೆ ಅವರು ಉಬರ್‌ ಚಾಲನೆ ಶುರು ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

 ಆಸ್ಥಾ ಸೇಠ್ ಅವರ ಮಾಹಿತಿಯ ಪ್ರಕಾರ, ಈ ಚಾಲಕ ಮೂಲತಃ ಬಿಹಾರದ ಸಮಸ್ತಿಪುರದವರು. ಅವರು ದೆಹಲಿಯಲ್ಲಿರುವ ಸಂಬಂಧಿಕರ ಫ್ಯಾಕ್ಟರಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಮಾಡುತ್ತಿದ್ದರು. ಆದರೆ ಕಳೆದ ವರ್ಷ ಅವರಿಗೆ ಹೃದಯಾಘಾತವಾಗಿತ್ತು. ಕಠಿಣ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಕೆಲಸದಿಂದ ತೆಗೆದುಹಾಕಲಾಯಿತು.

ಎಲ್‌ಪಿಜಿ ಇನ್ನು ಮುಗಿದ ಅಧ್ಯಾಯ! ಕಾರು ಬಳಿಕ ಅಡುಗೆ ಮನೆಗೂ ಬಂತು ಎಥೆನಾಲ್?

ಉದ್ಯೋಗ ಕಳೆದುಕೊಂಡರೂ ಅವರು ನಿರಾಶರಾಗಲಿಲ್ಲ. ಮೊದಲೇ ಹೇಳಿದಂತೆ ಅವರಿಗೆ ಹಣದ ಕೊರತೆ ಇರ್ಲಿಲ್ಲ. ನೋಯ್ಡಾ ಎಲೆಕ್ಟ್ರಾನಿಕ್ ಸಿಟಿ ಸಮೀಪ ಎರಡು ಫ್ಲ್ಯಾಟ್ಗಳನ್ನು ಅವರು ಬಾಡಿಗೆ ನೀಡಿದ್ದಾರೆ. ಪ್ರತಿ ತಿಂಗಳು ಅವರಿಗೆ ಸುಮಾರು 80 ಸಾವಿರ ಬಾಡಿಗೆ ಬರುತ್ತೆ. ಇದನ್ನೇ ನಂಬಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯಬಹುದಿತ್ತು. ಆದ್ರೆ ಆರಾಮದ ಜೀವನ ಬಿಟ್ಟು ಉಬರ್ ಚಾಲಕರಾಗಿ ಕೆಲಸ ಮಾಡಲು ಅವರು ನಿರ್ಧರಿಸಿದ್ದರು.

ಆರೋಗ್ಯ ಸಮಸ್ಯೆ ಅವರ ಸಾಮರ್ಥ್ಯವನ್ನು ಕಸಿದುಕೊಳ್ಳಲಿಲ್ಲ. ನಾನು ಇನ್ನೂ ಕೆಲಸ ಮಾಡಬಲ್ಲೆ, ನನ್ನ ಸಾಮರ್ಥ್ಯ ಇನ್ನೂ ಜೀವಂತವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಲು ಅವರು ಮುಂದಾದ್ರು. ಇನ್ಸ್ಟಾಗ್ರಾಂ ಕ್ರಿಯೇಟರ್ ಆಸ್ಥಾ ಸೇಠ್ ಅವರೊಂದಿಗೆ ನಡೆದ ಕೇವಲ ಐದು ನಿಮಿಷಗಳ ಸಂಭಾಷಣೆ ಸಾವಿರಾರು ಜನರಿಗೆ ಬದುಕಿನ ದೊಡ್ಡ ಪಾಠವಾಗಿದೆ. ಜೀವನ ನಮ್ಮನ್ನು ಎಷ್ಟೇ ಪರೀಕ್ಷಿಸಿದರೂ, ನಮ್ಮ ಆತ್ಮವಿಶ್ವಾಸವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರು ಸಾಭೀತುಪಡಿಸಿದ್ದಾರೆ.

ವಿಶ್ವದ ಗಮನ ಸೆಳೆದ ನೀತಾ ಅಂಬಾನಿಯ ನೀಲಿ ಬಣ್ಣದ ಕಾಂಜೀವರಂ ಚಿನ್ನದ ಸೀರೆ: ಏನಿದರ ವಿಶೇಷತೆ Sponsored Content

ಸೋಶಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ ಗೆ ಸಾಕಷ್ಟು ಕಮೆಂಟ್‌ ಬಂದಿದೆ. ಉಬರ್‌ ಚಾಲಕನ ಕೆಲ್ಸವನ್ನು ಜನರು ಮೆಚ್ಚಿಕೊಂಡಿದ್ದಾರೆ.

 

 

PREV
Read more Articles on
click me!

Recommended Stories

'ನನ್ನನ್ನು ಟೀಕಿಸಿದವರು ಟೀಕಿಸುತ್ತಲೇ ಇರಲಿ, ನಾನು ಮಾತ್ರ ಎಂದೆಂದಿಗೂ ರಾಜಕುಮಾರಿಯೇ'-ಐಶ್ವರ್ಯಾ ರೈ
ಲೈಫ್‌ಟೈಮ್ ಕಮಿಟ್‌ಮೆಂಟ್‌ಗೆ ಗುಡ್‌ಬೈ? 5 ವರ್ಷ ಸಾಕು! – ಪ್ರೀತಿ-ಮದುವೆಯ ಹೊಸ ಟ್ರೆಂಡ್ 'ಸ್ಟಾರ್ಟರ್ ಮ್ಯಾರೇಜ್'!