World's Thinnest Car: ಇಲ್ಲಿದೆ ನೋಡಿ ಜಗತ್ತಿನ ಅತ್ಯಂತ ತೆಳ್ಳಗಿನ ಕಾರು: ವೀಡಿಯೋ ವೈರಲ್

Published : Jun 25, 2025, 12:53 PM ISTUpdated : Jun 26, 2025, 02:44 PM IST
world smallest car

ಸಾರಾಂಶ

ಇಟಲಿಯ ಸಂಶೋಧಕರೊಬ್ಬರು ಫಿಯಟ್ ಪಾಂಡಾ ಕಾರನ್ನು ಬಳಸಿ ಜಗತ್ತಿನ ಅತ್ಯಂತ ತೆಳ್ಳಗಿನ ಕಾರನ್ನು ಸಿದ್ಧಪಡಿಸಿದ್ದಾರೆ. 

ಕಾರುಗಳ ವೀಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅವುಗಳ ವಿಶೇಷತೆ, ಐಷಾರಾಮಿತನ, ಅತ್ಯಾಧುನಿಕ ತಂತ್ರಜ್ಞಾನ ಬ್ರಾಂಡ್‌ಗಳ ಕಾರಣಕ್ಕೆ ಕಾರುಗಳು ಬಹುತೇಕ ಮೋಟರ್‌ಪ್ರಿಯರನ್ನು ಸೆಳೆಯುತ್ತಲೇ ಇರುತ್ತವೆ. ಆದರೆ ಈಗ ಜಗತ್ತಿನ ಅತ್ಯಂತ ತೆಳ್ಳಗಿನ ಕಾರೊಂದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರನ್ನು ಸೆಳೆಯುತ್ತಿದೆ. ಈ ಕಾರನ್ನು ಇಟಾಲಿಯನ್ ಸಂಶೋಧಕರೊಬ್ಬರು ಸಿದ್ಧಪಡಿಸಿದ್ದಾರೆ. ಫಿಯಟ್ ಪಾಂಡಾ(Fiat Panda)ಕಾರನ್ನು ಬಳಸಿಕೊಂಡು ಅವರು ಜಗತ್ತಿನ ಅತ್ಯಂತ ತೆಳ್ಳಗಿನ ಕಾರನ್ನು ಸಿದ್ಧಪಡಿಸಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ಅಚ್ಚರಿ ಪಟ್ಟಿದ್ದಾರೆ. ಈ ಕಾರನ್ನು ಡ್ರೈವ್ ಮಾಡಲಾಗುತ್ತಾ? ಹೇಗಿದೆ ಈ ಕಾರಿನ ವಿಶೇಷತೆ ನೋಡೋನ ಬನ್ನಿ...

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

(Worlds Smallest car)ಜಗತ್ತಿನಲ್ಲಿ ಹಲವು ವಿಧದ ಕಾರುಗಳಿವೆ. ಕೆಲವು ಕಾರುಗಳು ನೋಡುವುದಕ್ಕೆ ವಿಚಿತ್ರವೆನಿಸುತ್ತವೆ. ಅದನ್ನು ಚಾಲನೆ ಮಾಡುವುದು ಹೇಗೆ ಎಂಬ ಬಗ್ಗೆ ಅನೇಕರಿಗೆ ಗೊಂದಲ ಆಗುತ್ತದೆ. ಅದೇ ರೀತಿ ಈಗ ಇಟಲಿಯಲ್ಲಿ ಜಗತ್ತಿನ ಅತ್ಯಂತ ತೆಳ್ಳಗಿನ ಕಾರೊಂದನ್ನು ಸಂಶೋಧಕರೊಬ್ಬರು ನಿರ್ಮಿಸಿದ್ದು, ಅದನ್ನು ಅವರು ಅಲ್ಲಿನ ರಸ್ತೆಗಳಲ್ಲಿ ಓಡಿಸುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Dicirelu ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಫಿಯಟ್ ಪಂಡಾ ಕಾರನ್ನು ಬಳಸಿ ಸಿದ್ಧಪಡಿಸಿದ ಅತ್ಯಂತ ತೆಳ್ಳಗಿನ ಕಾರು

ಕೆಲ ವರದಿಗಳ ಪ್ರಕಾರ ಇಟಲಿಯ ವ್ಯಕ್ತಿಯೊಬ್ಬರು ಫಿಯಟ್ ಪಂಡಾ ಕಾರನ್ನು ಬಳಸಿ ಜಗತ್ತಿನ ಅತ್ಯಂತ ಸಣ್ಣ ಕಾರನ್ನು ನಿರ್ಮಿಸಿದ್ದು, ಈ ಕಾರು 4 ಚಕ್ರಗಳನ್ನು ಹೊಂದಿದೆ. ಆದರೆ ಈ ಚಕ್ರಗಳ ಮಧ್ಯೆ ಜಾಸ್ತಿ ಅಂತರವಿಲ್ಲ, ವೀಡಿಯೋದಲ್ಲಿ ವ್ಯಕ್ತಿ ಆರಾಮವಾಗಿ ಅಲ್ಲಿನ ರಸ್ತೆಗಳಲ್ಲಿ ಈ ಕಾರನ್ನು ಆರಾಮವಾಗಿ ಡ್ರೈವ್ ಮಾಡಿಕೊಂಡು ಹೋಗುವುದನ್ನು ನೋಡಬಹುದಾಗಿದೆ.

ನೆಟ್ಟಿಗರ ಕಾಮೆಂಟ್ ಹೀಗಿದೆ

ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಇದು ಬಜೆಟ್ ಫ್ರೆಂಡ್ಲಿ ಆಗಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ರಸ್ತೆಯ ತಿರುವಿನಲ್ಲಿ ಬೈಕರ್‌ಗಳಂತೆ ವೇಗವಾಗಿ ತಿರುವು ಪಡೆದುಕೊಳ್ಳುವುದನ್ನು ನಾನು ನೋಡುವುದಕ್ಕೆ ಬಯಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಒಬ್ಬರು ಓಡಾಡುವ ಕಾರು ಕೂಡ ಇದೆಯೇ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಈ ಕಾರಿನ ಬಗ್ಗೆ ನಿಮಗೇನನಿಸಿತು. ಕಾಮೆಂಟ್ ಮಾಡಿ.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್