ವಿಮಲ್ ಬ್ಯಾಗ್‌ನ ಕಮಾಲ್: ಪಾನ್‌ ಬೀಡಾ ಬ್ಯಾಗ್ ಹಾಕೊಂಡು ಸುತ್ತಾಡ್ತಿರುವ ವಿದೇಶಿಗರ ವೀಡಿಯೋ ವೈರಲ್

Published : Jun 25, 2025, 12:07 PM IST
Vimal Pan Masala Bag

ಸಾರಾಂಶ

ಭಾರತೀಯರು ದಿನಸಿ ಸಾಮಾನುಗಳ ತರಲು ಬಳಸುವ ಪಾನ್ ಮಸಾಲದ ಬ್ಯಾಗ್‌ಗಳನ್ನು ವಿದೇಶಿ ಯುವತಿಯರು ಫ್ಯಾಷನ್ ಆಗಿ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾವುದೇ ಒಂದು ಬ್ರಾಂಡ್ ಸ್ಥಾಪನೆಯಾದಾಗ ಅದರ ಸಾಗಣೆಗಾಗಿ ಹಾಗೂ ಪ್ರಮೋಷನ್‌ಗಾಗಿ ಸಂಸ್ಥೆಯೊಂದು ಲಕ್ಷ ಕೋಟಿಗಳಲ್ಲಿ ವೆಚ್ಚ ಮಾಡುತ್ತದೆ. ಆ ಬ್ರಾಂಡ್ನ ಹೆಸರಿನಲ್ಲಿ ಹಲವು ಉಚಿತವಾದ ಉತ್ಪನ್ನಗಳನ್ನು ನಿರ್ಮಿಸಿ ಜನರಿಗೆ ಉಚಿತವಾಗಿ ನೀಡುವ ಮೂಲಕ ಅದು ತನ್ನ ಬ್ರಾಂಡ್‌ನ ಪ್ರಚಾರ ಮಾಡುತ್ತದೆ,. ಎಸಿಸಿ ಸಿಮೆಂಟ್, ಅಕ್ಕಿ ಚೀಲ, ಅಗರಬತ್ತಿ ಹೀಗೆ ಅನೇಕ ವಸ್ತುಗಳನ್ನು ತಯಾರಿಸುವ ಸಂಸ್ಥೆಗಳು ಹೀಗೆ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ದೊಡ್ಡದಾದ ಬ್ಯಾಗ್ ಕೊಡೆ, ರೈನ್‌ಕೋಟ್ ಅಥವಾ ಜಾಕೆಟ್‌ಗಳನ್ನು ತನ್ನ ಉತ್ಪನ್ನಗಳನ್ನು ದೊಡ್ಡಮಟ್ಟದಲ್ಲಿ ಖರೀದಿ ಮಾಡಿದವರಿಗಾಗಿ ನೀಡುತ್ತಾರೆ. ಇಂತಹ ಬ್ಯಾಗ್‌ಗಳನ್ನು ಭಾರತದಲ್ಲಿ ಜನ ದಿನಸಿ ಸಾಮಾನುಗಳನ್ನು ತರಲು ಬಳಕೆ ಮಾಡುತ್ತಾರೆ. 50-100 ರೂಪಾಯಿ ದರದಲ್ಲಿ ಈ ಬ್ಯಾಗ್‌ಗಳು ನಮಗೆ ಸಿಗುತ್ತವೆ. ಆದರೆ ಇಂತಹ ಬ್ಯಾಗನ್ನು ಯಾವ ಹುಡುಗಿಯರು ಕೂಡ ಸ್ಟೈಲ್‌ಗಾಗಿ ಹಿಡಿದುಕೊಂಡು ತಿರುಗಾಡುವುದಿಲ್ಲ. ಆದರೆ ವಿದೇಶಿ ಮಹಿಳೆಯರು ಬ್ರಾಂಡೆಡ್ ಬ್ಯಾಗ್ ರೀತಿ ಹೆಗಲಿಗೆ ಹಾಕಿಕೊಂಡು ತಿರುಗಾಡುತ್ತಿದ್ದು, ಇದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಮಲ್ ಬ್ರಾಂಡ್‌ನ ಬ್ಯಾಗ್ ಜೊತೆ ವಿದೇಶಿ ಬೆಡಗಿಯರು:

ಈ ವಿದೇಶಿ ಬೆಡಗಿಯರು ಗುಸ್ಸಿ(Gucci),ಪ್ರಾಡ(Prada)ಮುಂತಾದ ಬ್ರಾಂಡೆಡ್ ಬ್ಯಾಗ್‌ಗಳ ಬದಲು 50 ರೂಪಾಯಿಗೆ ಸಿಗುವ ದೈನಂದಿನ ದಿನಸಿ ಸಾಮಾನುಗಳನ್ನು ತರುವುದಕ್ಕೆ ಬಳಸಲಾಗುವ ವಿಮಲ್ ಬ್ಯಾಗನ್ನು ಬಳಸುತ್ತಿರುವುದನ್ನು ನೋಡಿದ ಭಾರತೀಯ ಬಿದ್ದು ಬಿದ್ದು ನಗುತ್ತಿದ್ದಾರೆ. namasterosy and jamocu ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ಯುವತಿಯರಿಬ್ಬರು ವಿಮಲ್ ಪಾನ್ ಮಸಾಲದ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ಬೀದಿಯಲ್ಲಿ ನಡೆದು ಹೋಗುತ್ತಿದ್ದಾರೆ. ನೋ ಗುಸ್ಸಿ,, ನೋ ಪ್ರದಾ, ನೋ ಎಲ್‌ವಿ ಓನ್ಲಿ ವಿಮಲ್ ಎಂದು ವೀಡಿಯೋದ ಮೇಲೆ ಈ ಯುವತಿಯರು ಬರೆದುಕೊಂಡಿದ್ದಾರೆ.

ವೀಡಿಯೋ ನೋಡಿದ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ

ವಿದೇಶಿ ಯುವತಿಯರು ಹೀಗೆ ವಿಮಲ್ ಬ್ರಾಂಡ್‌ನ ಮಾಮೂಲಿ ಬ್ಯಾಗನ್ನು(Vimal Pan Masala Bag) ಬ್ರಾಂಡೆಡ್ ಬ್ಯಾಗ್ ರೀತಿ ಹಿಡಿದುಕೊಂಡು ಹೋಗುತ್ತಿರುವ ವೀಡಿಯೋವನ್ನು ನೋಡಿದ ಜನ ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಬ್ಬರು ಇದು ಭಾರತದ ಅತ್ಯಂತ ಒಳ್ಳೆಯ ಬ್ರಾಂಡ್ ಎಂದು ಕಾಮೆಂಟ್ ಮಾಡಿದ್ದಾರೆ. ಬಹುಶಃ ಅವರು ಅದರ ಮೇಲಿರುವ ಚಿತ್ರವನ್ನು ಪೇಂಟಿಂಗ್ ಎಂದು ಭಾವಿಸಿರಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹಾಗೆಯೇ ಮತ್ತೊಬ್ಬರು ಇದು ವಿಶ್ವದಲ್ಲೇ ಅತ್ಯುತ್ತಮ ಬ್ರಾಂಡ್ ಎಂದು ನಗೆಯಾಡಿದ್ದಾರೆ. ಈ ಬ್ಯಾಗನ್ನು ವಿದೇಶದಲ್ಲಿ ಕ್ಯಾರಿ ಬ್ಯಾಗ್ ರೀತಿ ಬಳಸುತ್ತಾರೆ. ಆದರೆ ಭಾರತೀಯರಿಗೆ ಇದು ಉಚಿತವಾಗಿ ಸಿಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದರ ಬ್ರಾಂಡ್ ಅಂಬಾಸಿಡರ್ ಅಜಯ್ ದೇವಗನ್ ಎಂದು ಮತ್ತೊಬ್ಬರು ನೆನಪು ಮಾಡಿಕೊಂಡಿದ್ದಾರೆ. ಹಾಗೆಯೇ ಈ ವಿಮಲ್ ಬ್ರಾಂಡ್‌ನ ಟ್ಯಾಗ್‌ಲೈನ್ ಅನ್ನು ನೆನಪು ಮಾಡಿಕೊಂಡು ಒಬ್ಬರು ಜುಬಾನ್ ಕೇಸರಿ (ಬಾಯಲ್ಲಿ ಹೇಳಿ ಕೇಸರಿ) ಎಂದು ಕಾಮೆಂಟ್ ಮಾಡಿದ್ದಾರೆ.

ವಿಮಲ್ ಬ್ರಾಂಡ್ ಅಂಬಾಸಿಡರ್‌ಗಳಾಗಿರುವ ಬಾಲಿವುಡ್ ಸೆಲೆಬ್ರಿಟಿಗಳು

ವಿಮಲ್ ಪಾನ್ ಮಸಾಲ (vimal pan masala brand)ಭಾರತದ ಅತ್ಯಂತ ಸುಪ್ರಸಿದ್ದ ಪಾನ್ ಮಸಾಲ ಬ್ರಾಂಡ್‌ಗಳಲ್ಲಿ ಒಂದು ಬಾಲಿವುಡ್ ಸೆಲೆಬ್ರಿಟಿಗಳಾದ ಅಜಯ್ ದೇವಗನ್ (Ajay Devgn) ಹಾಗೂ ಶಾರುಖ್ ಖಾನ್ (Shah Rukh Khan) ಈ ಪಾನ್ ಮಸಾಲ ಬ್ರಾಂಡ್‌ನ ಅಂಬಾಸೀಡರ್‌ಗಳಾಗಿದ್ದಾರೆ. ವಿಮಲ್ ಪಾನ್ ಮಸಾಲ ಬ್ರಾಂಡ್‌ ಜಾಹೀರಾತಿಗಾಗಿಯೇ ಕೋಟಿ ಕೋಟಿಗಟ್ಟಲೇ ಹಣವನ್ನು ವೆಚ್ಚ ಮಾಡುತ್ತಿದೆ. ಆದರೆ ಇದರ ದೊಡ್ಡ ದೊಡ್ಡ ಬ್ಯಾಗ್‌ ಈಗ ರೀತಿ ಟ್ರೆಂಡ್ ಆಗುತ್ತಿರುವುದನ್ನು ನೋಡಿ ಭಾರತೀಯರಿಗೆ ನಗು ಬರುತ್ತಿದೆ. ಇದೊಂದು ತಂಬಾಕು ಉತ್ಪನ್ನವಾಗಿದ್ದು, ಭಾರತದಲ್ಲಿ ಕೋಟ್ಯಾಂತರ ಜನ ಇದರ ಸೇವನೆ ಮಾಡುತ್ತಿದ್ದಾರೆ. ಈ ಹಿಂದೆ ಅಕ್ಷಯ್ ಕುಮಾರ್ (Akshay Kumar)ಕೂಡ ಈ ಮಸಾಲ ಬ್ರಾಂಡ್‌ನ ಅಂಬಾಸಿಡರ್ ಆಗಿದ್ದರು.

ಹಾಗೆಯೇ ಬಾಲಿವುಡ್‌ನ ಇತರ ನಟರಾದ ಟೈಗರ್ ಶ್ರಾಫ್ ಮತ್ತು ಅಮೈರಾ ದಸ್ತೂರ್ ಅವರಂತಹ ಇತರ ಸೆಲೆಬ್ರಿಟಿಗಳು ವಿಮಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಕ್ಷಯ್ ಕುಮಾರ್ ಈ ಬ್ರಾಂಡ್‌ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಟೀಕೆ ವ್ಯಕ್ತವಾದ ಹಿನ್ನೆಲೆ ಅವರು ಒಮ್ಮೆ ಹಿಂದೆ ಸರಿದಿದ್ದರು ಆದರೆ ಮತ್ತೆ ಕಾಣಿಸಿಕೊಂಡಿದ್ದರು. ಪಾನ್ ಮಸಾಲಾವನ್ನು ಅನುಮೋದಿಸಿದ ಇತರ ಸೆಲೆಬ್ರಿಟಿಗಳಲ್ಲಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ರಣವೀರ್ ಸಿಂಗ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮತ್ತು ಅನುಷ್ಕಾ ಶರ್ಮಾ ಕೂಡ ಸೇರಿದ್ದಾರೆ.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್