
56 ವರ್ಷಗಳ ನಂತರ ಕುಟುಂಬಕ್ಕೆ ಬಂದ ಹೆಣ್ಣು ಮಗು; ಕುಟುಂಬಸ್ಥರಿಂದ ಅದ್ದೂರಿ ಸ್ವಾಗತ
ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಕೆಲವು ಅದ್ಭುತ ವೀಡಿಯೊಗಳು ನಮ್ಮ ಮನಸ್ಸನ್ನು ಸೆಳೆಯುತ್ತವೆ. ಈಗ ವೈರಲ್ ಆಗುತ್ತಿರುವ ವೀಡಿಯೊ ಕೂಡ ಹಾಗೆಯೇ ಇದೆ. ಐದು ದಶಕಗಳ ನಂತರ ಒಂದು ಕುಟುಂಬಕ್ಕೆ ಹೆಣ್ಣು ಮಗು ಬಂದ ಸಂತೋಷವನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ಆ ಮಗು ಅದೃಷ್ಟ ಮಾಡಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ದೆಹಲಿ ಮೂಲದ ಕುಟುಂಬದವರದ್ದು ಎನ್ನಲಾಗಿದೆ. dr.chahatrawal ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ.
ದೆಹಲಿ ಮೂಲದ ಕುಟುಂಬದಲ್ಲಿ 56 ವರ್ಷಗಳಿಂದ ಹೆಣ್ಣು ಮಗುವಿನ ಜನನವಾಗಿರಲಿಲ್ಲ. ಮನೆಯ ಎಲ್ಲಾ ಮಕ್ಕಳಿಗೂ ಗಂಡು ಮಗವೇ ಜನನವಾಗಿತ್ತು. ಇತ್ತೀಚೆಗೆ ಕುಟುಂಬದ ಪುತ್ರನಿಗೆ ಹೆಣ್ಣು ಮಗುವಾಗಿದ್ದು, ಕಂದಮ್ಮನನ್ನು ಅದ್ಧೂರಿಯಾಗಿ ಮೆನೆಗೆ ಕರೆದುಕೊಂಡು ಬರಲಾಗಿದೆ. ಮಗುವನ್ನು ಕುಟುಂಬಸ್ಥರು ಸ್ವಾಗತಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಸಹ ಈ ವಿಡಿಯೋವನ್ನು ಪ್ರೀತಿಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಕುಟುಂಬಸ್ಥರು ಹೆಣ್ಣು ಮಗುವಿನ ಆಗಮನಕ್ಕೆ ಸಂತೋಷವಾಗಿರೋದನ್ನು ಗಮನಿಸಬಹುದಾಗಿದೆ.
ವಿಡಿಯೋದಲ್ಲಿ ಏನಿದೆ?
ಮಗು ಕರೆದುಕೊಂಡು ಬಂದಿರುವ ಕಾರ್ ನ್ನು ಸಹ ಬಲೂನ್ ಮತ್ತು ಹೂಗಳಿಂದ ಅಲಂಕರಿಸಲಾಗಿದೆ. ವಿಡಿಯೋದಲ್ಲಿ ಗುಲಾಬಿ ಬಲೂನ್‌ಗಳಿಂದ ಅಲಂಕರಿಸಿದ ಮನೆಯನ್ನು ನೋಡಬಹುದು. ಹೂವುಗಳಿಂದಲೂ ಮನೆಯನ್ನು ಅಲಂಕರಿಸಲಾಗಿದೆ. ಮಗುವಿನೊಂದಿಗೆ ಬರುವ ದಾರಿಯುದ್ದಕ್ಕೂ ಹೂವುಗಳನ್ನು ಹಾಕಿ ಅಲಂಕರಿಸಲಾಗಿದೆ. ನಂತರ ತಾಯಿ ಮತ್ತು ತಂದೆ ಮಗುವಿನೊಂದಿಗೆ ಒಳಗೆ ಹೋಗುವುದನ್ನು ನೋಡಬಹುದು.
‘ನಮ್ಮ ಕುಟುಂಬದಲ್ಲಿ 56 ವರ್ಷಗಳ ನಂತರ ಹೆಣ್ಣು ಮಗು ಜನಿಸಿದೆ ಅಂತ ವೀಡಿಯೊದ ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ. ಇದು ಮನಸ್ಸಿಗೆ ಮುದ ನೀಡುವ ದೃಶ್ಯ ಎಂಬುದರಲ್ಲಿ ಸಂದೇಹವಿಲ್ಲ ಎಂದು ನೋಡಗರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ‘ಈ ಮಗುವನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ‘ಈ ಮಗುವಿನ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಕೆಯ ಪೋಷಕರಿಗೆ ಅವಕಾಶ ನೀಡಬೇಕು ಎಂದು ಎಲ್ಲಾ ಕುಟುಂಬ ಸದಸ್ಯರನ್ನು ವಿನಂತಿಸಿಕೊಂಡಿದ್ದಾರೆ.
ಪೋಷಕರಿಗೆ ಸಲಹೆ ನೀಡಿದ ನೆಟ್ಟಿಗರು
ನಿಮಗೆ ಇವಳು ರಾಜಕುಮಾರಿ ಆಗಿರಬಹುದು. ಹಾಗಂತ ಅತಿಯಾಗಿ ಮುದ್ದು ಮಾಡಬೇಡಿ. ಸಾಮಾನ್ಯ ಮಕ್ಕಳಂತೆ ಮಗುವನ್ನು ನೋಡಿಕೊಳ್ಳಿ. ಅತಿಯಾದ ಪ್ರೀತಿಯಲ್ಲಿ ಮಗುವನ್ನು ಕಟ್ಟಿ ಹಾಕಬೇಡಿ. ಹೆಚ್ಚಾದ್ರೆ ಅಮೃತವೂ ವಿಷವಾಗುತ್ತೆ ಎಂಬ ಮಾತಿದೆ ಎಂದು ನೆಟ್ಟಿಗರು ಪೋಷಕರಿಗೆ ಸಲಹೆ ನೀಡಿದ್ದಾರೆ. ಬಹುತೇಕರು 56 ವರ್ಷಗಳ ಬಳಿಕ ಹೆಣ್ಣು ಮಗು ಬಂದಿರೋದಕ್ಕೆ ಕುಟುಂಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.