₹422 ಕೋಟಿ ವೆಚ್ಚದ ಡಬಲ್ ಡೆಕ್ಕರ್ ಫ್ಲೈಓವರ್ ನಟ್-ಬೋಲ್ಟ್ ಬಿಚ್ಚಿದ ಮಕ್ಕಳು! ವಿಡಿಯೋ ವೈರಲ್

Published : Jun 14, 2025, 05:57 PM ISTUpdated : Jun 14, 2025, 07:34 PM IST
Patna flyover Nut Bolt Remove video

ಸಾರಾಂಶ

ಹೊಸ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಮಕ್ಕಳು ನಟ್ ಮತ್ತು ಬೋಲ್ಟ್‌ಗಳನ್ನು ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕೃತ್ಯವು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಮಕ್ಕಳು ಮಾಡುವ ಕೆಲವು ಕಿಡಿಗೇಡಿ ಕೆಲಸಗಳು ಗಂಭೀರ ಹಾನಿಯನ್ನುಂಟು ಮಾಡುತ್ತವೆ ಎಂಬುದು ತಮಗೇ ಅರಿವಿರುವುದಿಲ್ಲ. ಅದೇ ರೀತಿ ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ ಕೆಲವೇ ದಿನಗಳಲ್ಲಿ ಮಕ್ಕಳು ಸೇತುವೆಗೆ ಅಳವಡಿಸಿದ ನಟ್ ಮತ್ತು ಬೋಲ್ಟ್‌ಗಳನ್ನು ಬಿಚ್ಚಿ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪಾಟ್ನಾದಲ್ಲಿ ಜೂ.11ರಂದು ಉದ್ಘಾಟನೆಯಾದ 422 ಕೋಟಿ ರೂ. ವೆಚ್ಚದ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಸಾರ್ವಜನಿಕರಿಗೆ ತೆರೆದ ತಕ್ಷಣವೇ ಆತಂಕಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹೊಸದಾಗಿ ನಿರ್ಮಿಸಲಾದ ಸೇತುವೆಯ ಮೇಲೆ ಮಕ್ಕಳ ಗುಂಪೊಂದು ಕಿಡಿಗೇಡಿತನ ಮಾಡುತ್ತಿರುವುದು ವಿಡಿಯೋದಲ್ಲಿದೆ. ಫ್ಲೈಓವರ್‌ನ ರೇಲಿಂಗ್‌ಗಳಲ್ಲಿ ಅಳವಡಿಸಲಾಗಿರುವ ನಟ್ ಮತ್ತು ಬೋಲ್ಟ್‌ಗಳನ್ನು ಮಕ್ಕಳು ತೆಗೆಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವಿಷಯದ ಗಂಭೀರತೆ ತಿಳಿಯದೆ ಮಕ್ಕಳು ಮಾಡುವ ಈ ಕೃತ್ಯವು ದೊಡ್ಡ ಸುರಕ್ಷತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಸಾರ್ವಜನಿಕ ಸುರಕ್ಷತೆ ಮತ್ತು ಮೂಲಸೌಕರ್ಯಗಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸುವ ಈ ವಿಡಿಯೋವನ್ನು ಜೆಮ್‌ಸೋಫ್‌ಬಬೂಸ್ ಎಂಬ ಎಕ್ಸ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜೂ.11ರಂದು ಉದ್ಘಾಟಿಸಲಾದ ಮೇಲ್ಸೇತುವೆ ನಟ್ ಬೋಲ್ಟ್ ಬಿಚ್ಚುವ ಮಕ್ಕಳು ಸ್ಥಳೀಯರಲ್ಲ, ಬಾಂಗ್ಲಾದೇಶೀಯರಂತೆ ಕಾಣುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ವಿಡಿಯೋದಲ್ಲಿ, ಸೇತುವೆಯ ಮೇಲೆ ನಡೆದುಕೊಂಡು ಹೋಗುವ ಮಕ್ಕಳ ಗುಂಪೊಂದು ಸೇತುವೆಯ ರೇಲಿಂಗ್‌ಗಳಲ್ಲಿ ಅಳವಡಿಸಲಾಗಿರುವ ನಟ್ ಮತ್ತು ಬೋಲ್ಟ್‌ಗಳನ್ನು ತೆಗೆಯುತ್ತಿರುವುದನ್ನು ಕಾಣಬಹುದು. ವಿಡಿಯೋ ಚಿತ್ರೀಕರಣವಾಗುತ್ತಿದೆ ಎಂದು ತಿಳಿದ ತಕ್ಷಣ ಮಕ್ಕಳು ಓಡಿಹೋಗುತ್ತಾರೆ. ನಂತರ, ವಿಡಿಯೋದಲ್ಲಿ ಅವರು ತೆಗೆದ ನಟ್ ಮತ್ತು ಬೋಲ್ಟ್‌ಗಳನ್ನು ತೋರಿಸಲಾಗುತ್ತದೆ. ನಮ್ಮ ದೇಶದ ಸಾರ್ವಜನಿಕ ಮೂಲಸೌಕರ್ಯಗಳನ್ನು ಹಾಳುಮಾಡುವ ಮತ್ತು ನಾಶಮಾಡುವ ಇಂತಹ ಕೃತ್ಯಗಳನ್ನು ಈ ವಿಡಿಯೋ ಬಹಿರಂಗಪಡಿಸುತ್ತದೆ.

ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಕೆಲವರು ಬರೆದಿದ್ದಾರೆ. ಉತ್ತಮ ಶಿಕ್ಷಣದ ಕೊರತೆಯಿಂದಾಗಿ ಮಕ್ಕಳು ಇಂತಹ ಕೃತ್ಯಗಳನ್ನು ಮಾಡುತ್ತಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ಅವರು ಸೇತುವೆಯನ್ನೇ ಕದ್ದುಕೊಂಡು ಹೋಗುತ್ತಾರೆ ಎಂದು ಒಬ್ಬರು ತಮಾಷೆಯಾಗಿ ಬರೆದಿದ್ದಾರೆ. ಮಕ್ಕಳಿಂದಲೂ ಸುಲಭವಾಗಿ ತೆಗೆಯಬಹುದಾದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆಯೇ, ಇದಕ್ಕೆ ಏನು ಸುರಕ್ಷತೆ ಇದೆ ಎಂದು ಇತರರು ಪ್ರಶ್ನಿಸಿದ್ದಾರೆ.

ಆದರೆ, ಈ ಬಗ್ಗೆ ಸ್ಥಳೀಯ ಆಡಳಿತ ಅಥವಾ ಕಾನೂನು ಜಾರಿ ಸಂಸ್ಥೆಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್