ಇದ್ದರೆ ಹೀಗಿರಬೇಕು ಬಾಸ್.. 10 ದಿನ ರಜೆ ಮುಗಿಸಿ ಆಫೀಸ್‌ಗೆ ಮರಳಿದ ಉದ್ಯೋಗಿಗೆ ಹೇಳಿದ್ದೇನು ಗೊತ್ತಾ?

Published : Jun 03, 2026, 12:06 PM IST
Viral WhatsApp chat

ಸಾರಾಂಶ

Viral WhatsApp chat: ದೀರ್ಘಾವಧಿಯ ರಜೆ ಮುಗಿಸಿ ಆಫೀಸ್‌ಗೆ ಮರಳುವಾಗ 'ಬಾಸ್ ಏನ್ ಹೇಳ್ತಾರೋ' ಅನ್ನೋ ಭಯ ಎಲ್ಲರಲ್ಲೂ ಇರುತ್ತೆ. ಆದರೆ, ಇಲ್ಲೊಬ್ಬ ಮ್ಯಾನೇಜರ್ ತನ್ನ ಉದ್ಯೋಗಿಗೆ ಕಳುಹಿಸಿದ ವಾಟ್ಸಾಪ್ ಸಂದೇಶ ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದೆ. ಆ ಮೆಸೇಜ್ ನೋಡಿದ ನೆಟಿಜನ್‌ಗಳು 'ಪ್ರತಿಯೊಬ್ಬರಿಗೂ ಇಂತಹ ಬಾಸ್ ಸಿಗಬೇಕು' ಅಂತ ಕೊಂಡಾಡ್ತಿದ್ದಾರೆ! ಏನಿದೆ ಆ ಚಾಟ್‌ನಲ್ಲಿ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

Boss employee viral message: ಕಾರ್ಪೊರೇಟ್ ಕಚೇರಿಗಳಲ್ಲಿ ದಿನವಿಡೀ ಕೆಲಸ ಮಾಡುವ ಉದ್ಯೋಗಿಗಳಿಗೆ ದೀರ್ಘಾವಧಿಯ ರಜೆ ಸಿಗುವುದು ಒಂದು ರೀತಿ ಅದೃಷ್ಟ ಹಾಗೂ ವರ ಎಂದೇ ಹೇಳಬಹುದು. ಮಿತಿಮೀರಿದ ಕೆಲಸದ ಒತ್ತಡ, ಸರಣಿ ಸಭೆಗಳು ಮತ್ತು ನಿರಂತರ ಡೆಡ್‌ಲೈನ್‌ಗಳಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬ ಉದ್ಯೋಗಿಯೂ ವರ್ಷಕ್ಕೊಮ್ಮೆಯಾದರೂ ಲಾಂಗ್ ವೆಕೇಶನ್ ಪ್ಲಾನ್ ಮಾಡುತ್ತಾರೆ. ಆದರೆ, ರಜೆ ಮುಗಿಸಿ ಮರಳಿ ಆಫೀಸ್‌ಗೆ ಹೆಜ್ಜೆ ಇಡುವಾಗ ಪ್ರಶಾಂತವಾಗಿದ್ದ ಮನಸ್ಸು ಮತ್ತೆ ಆತಂಕಕ್ಕೆ ಒಳಗಾಗುವುದು ಸಹಜ. ಬಾಸ್ ಮೂಡ್ ಹೇಗಿರುತ್ತದೋ ಅಥವಾ ಕೆಲಸದ ಹೊರೆ ಎಷ್ಟು ಬೆಟ್ಟದಂತೆ ಕಾಯುತ್ತಿದೆಯೋ ಎಂಬ ಭಯ ಎಲ್ಲರಲ್ಲೂ ಇರುತ್ತದೆ. ಆದರೆ ಸದ್ಯ ಬಾಸ್ ಮತ್ತು ಉದ್ಯೋಗಿ ನಡುವಿನ ವಾಟ್ಸಾಪ್ ಚಾಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣವೂ ಇದೆ.

ಉದ್ಯೋಗಿ ಕೇಳಿದ್ದೇನು, ಬಾಸ್‌ ಹೇಳಿದ್ದೇನು?

ವೈರಲ್ ಕಥೆಯ ಪ್ರಕಾರ, ಉದ್ಯೋಗಿಯೊಬ್ಬರು ಸತತ 10 ದಿನಗಳ ಸುದೀರ್ಘ ರಜೆ ಮುಗಿಸಿ ಮರುದಿನ ಆಫೀಸ್‌ಗೆ ಬರಲು ಸಿದ್ಧರಾಗಿದ್ದರು. ಒಬ್ಬ ಜವಬ್ದಾರಿಯುತ ಉದ್ಯೋಗಿಯಾಗಿರುವ ಅವರು ಮುಂಚಿತವಾಗಿ ತಮ್ಮ ಬಾಸ್‌ಗೆ ಮೆಸೇಜ್ ಮಾಡಿ, "ನಾನು ನಾಳೆಯಿಂದ ಕೆಲಸಕ್ಕೆ ಮರಳುತ್ತಿದ್ದೇನೆ, ಬಾಕಿ ಇರುವ ಕೆಲಸಗಳು ಅಥವಾ ಪ್ರಾಜೆಕ್ಟ್‌ಗಳ ಅಪ್‌ಡೇಟ್ಸ್ ಇದ್ದರೆ ತಿಳಿಸಿ, ಪೂರ್ಣಗೊಳಿಸಲು ಸಿದ್ಧನಾಗಿದ್ದೇನೆ" ಎಂದು ಕೇಳಿದ್ದರು. ರಜೆ ಮುಗಿಸಿ ಹೊಸ ಉತ್ಸಾಹ ಹಾಗೂ ಹೊಸ ಎನರ್ಜಿಯೊಂದಿಗೆ ಕಚೇರಿ ತಲುಪಿದ ಉದ್ಯೋಗಿಗೆ ಅವರ ಬಾಸ್‌ನಿಂದ ನಿರೀಕ್ಷಿಸದ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಆ ಸಂದೇಶ ಉದ್ಯೋಗಿಯ ಫ್ಯೂಸ್ ಔಟ್ ಆಗುವಂತೆ ಮಾಡಿತ್ತು.

ಅಷ್ಟಕ್ಕೂ ಆ ವಾಟ್ಸಾಪ್ ಚಾಟ್‌ನಲ್ಲಿ ಏನಿತ್ತು?

ಸಾಮಾನ್ಯವಾಗಿ ಕಂಪನಿಗಳಲ್ಲಿ ಮ್ಯಾನೇಜರ್‌ಗಳು ಉದ್ಯೋಗಿ ಬಂದ ತಕ್ಷಣ ಕೆಲಸದ ಪ್ರಗತಿ ಹಾಗೂ ಬಾಕಿ ಇರುವ ಫೈಲ್‌ಗಳ ಬಗ್ಗೆ ಕೇಳುತ್ತಾರೆ. ಆದರೆ ಈ ಬಾಸ್ ನೀಡಿದ ವಿಭಿನ್ನ ಉತ್ತರ ನೆಟ್ಟಿಗರನ್ನು ಸಂಪೂರ್ಣ ಆಶ್ಚರ್ಯಚಕಿತರನ್ನಾಗಿಸಿದೆ. ಬಾಸ್ ತನ್ನ ಮೆಸೇಜ್‌ನಲ್ಲಿ, "ನೀನು ಮರಳಿ ಬರುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಆದರೆ, ನಾಳೆ ಆಫೀಸ್‌ಗೆ ಬಂದ ತಕ್ಷಣ ಕೆಲಸದ ಬಗ್ಗೆ ಯಾವುದೇ ಒತ್ತಡ ಅಥವಾ ಗಡಿಬಿಡಿ ಮಾಡಿಕೊಳ್ಳುವ ಅಗತ್ಯವಿಲ್ಲ. ಮೊದಲ ದಿನ ಕಚೇರಿಯ ವಾತಾವರಣಕ್ಕೆ ನಿಧಾನವಾಗಿ ಹೊಂದಿಕೊ (Ease into your day). ಅಷ್ಟಕ್ಕೂ ನಿನ್ನ 10 ದಿನಗಳ ರಜೆ ಹೇಗಿತ್ತು? ಚೆನ್ನಾಗಿ ಎಂಜಾಯ್ ಮಾಡಿದೆಯಾ? ನಿನ್ನ ಪ್ರಯಾಣದ ಸುಂದರ ಅನುಭವಗಳು ಮತ್ತು ಫೋಟೋಗಳನ್ನು ನನ್ನೊಂದಿಗೆ ಹಂಚಿಕೊ" ಎಂದು ಅತ್ಯಂತ ಆತ್ಮೀಯವಾಗಿ ಬರೆದಿದ್ದರು.

ಕೊಂಡಾಡಿದ ನೆಟ್ಟಿಗರು

ಈ ಚಾಟ್‌ನ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆ ವೈರಲ್ ಆಗಿದ್ದು, ನೆಟಿಜನ್‌ಗಳು ಆ ಮ್ಯಾನೇಜರ್ ಮೇಲೆ ಪ್ರಶಂಸೆಯ ಮಳೆ ಹರಿಸುತ್ತಿದ್ದಾರೆ. ಇಂದಿನ ಧಾವಂತದ ಕಾರ್ಪೊರೇಟ್ ಯುಗದಲ್ಲಿ ಇಂತಹ ಸಕಾರಾತ್ಮಕ ಉದಾಹರಣೆಗಳು ನಿಜಕ್ಕೂ ವಿರಳ. "ಪ್ರತಿಯೊಬ್ಬ ಉದ್ಯೋಗಿಗೂ ಇಂತಹ ಬಾಸ್ ಸಿಗುವುದು ಒಂದು ದೊಡ್ಡ ವರ. ಇಂತಹ ಮಾನವೀಯತೆ ಇರುವ ನಾಯಕರು ಇದ್ದಾಗ ಉದ್ಯೋಗಿಗಳು ಮತ್ತಷ್ಟು ಉತ್ಸಾಹ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ವರ್ಕ್-ಲೈಫ್ ಬ್ಯಾಲೆನ್ಸ್ ಹಾಗೂ ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಸದಾ ಆದ್ಯತೆ ನೀಡುವ ಇಂತಹ ಉತ್ತಮ ಬಾಸ್‌ಗಳು ಇಂದಿನ ಕಾರ್ಪೊರೇಟ್ ಜಗತ್ತಿಗೆ ತುಂಬಾ ಅಗತ್ಯವಿದ್ದಾರೆ. ಇವರು ಕೇವಲ ಬಾಸ್ ಅಲ್ಲ, ನಿಜವಾದ ಲೀಡರ್" ಎಂದು ನೆಟಿಜನ್‌ಗಳು ಕೊಂಡಾಡುತ್ತಿದ್ದಾರೆ.

PREV
Read more Articles on
click me!

Recommended Stories

Viral Video: ಒಂದು ಕೇರಳ ಪ್ರವಾಸ, ನಾಲ್ಕು ದಶಕಗಳ ಪ್ರೀತಿ! ಇಂದು ಜಪಾನ್‌ನಲ್ಲಿ ದೋಸೆ-ಇಡ್ಲಿ ವ್ಯಾಪಾರ ಮಾಡುವ ಜಪಾನಿ ದಂಪತಿ!
ವಿಶ್ವದ ಮೂಲೆಯಲ್ಲೂ ವೈರಲ್ ಆಗಿರೋ ರಾಮ್‌ ಚರಣ್ ಬಾಡಿ ಗಾರ್ಡ್ ಅಂತಿಂಥವರಲ್ಲ; ಗೊತ್ತಾದ್ರೆ ಶಾಕ್ ಆಗ್ತೀರಾ!