"ಕಿತ್ತು ತಿನ್ನೋ ಬಡತನ"..ಬಿಸಿಲಿನಲ್ಲೇ ಮಗುವನ್ನು ಬಿಟ್ಟು ಕೂಲಿ ಕೆಲಸದಲ್ಲಿ ಬ್ಯುಸಿಯಾದ ತಾಯಿ

Published : Jun 05, 2025, 03:10 PM ISTUpdated : Jun 05, 2025, 04:02 PM IST
viral video

ಸಾರಾಂಶ

ಬಡತನದ ನಡುವೆಯೂ ಮಗುವಿನ ಭವಿಷ್ಯಕ್ಕಾಗಿ ಹೋರಾಡುವ ತಾಯಿಯ ಚಿತ್ರಣ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಸರ್ಕಾರ ಇಂತಹ ಕುಟುಂಬಗಳಿಗೆ ನೆರವು ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.

Mother Viral Video: ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ ಎಂಬ ಮಾತಿದೆ. ತನ್ನ ಮಗುವಿಗಾಗಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಗುಣ ತಾಯಿಗಿದೆ. ಯಾವುದೇ ಸಂದರ್ಭದಲ್ಲೂ ಆಕೆ ತನ್ನ ಮಗುವನ್ನು ಬಿಟ್ಟು ಕೊಡುವುದಿಲ್ಲ. ಆಕೆ ಸ್ವತಃ ಹಸಿದಿದ್ದರೂ ಸಹ, ತನ್ನ ಮಗುವಿಗೆ ಖಂಡಿತ ಆಹಾರವನ್ನು ನೀಡುತ್ತಾಳೆ. ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಾಳೆ. ಇದೀಗ ಇದೇ ಮಾತುಗಳನ್ನು ಸಾಬೀತುಪಡಿಸುವ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮಗುವಿನ ಅಳು ಕೇಳಿ ಓಡಿ ಬಂದ ತಾಯಿ
_prasad_dargude7788 Instagram ಪೇಜ್‌ನಿಂದ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ರೈಲ್ವೆ ಹಳಿಗಳನ್ನು ಹಾಕುವ ಕೆಲಸವು ಸುಡುವ ಬಿಸಿಲಿನಲ್ಲಿ ನಡೆಯುತ್ತಿದೆ ಎಂದು ತೋರಿಸುತ್ತದೆ. ಪುರುಷ ಮತ್ತು ಮಹಿಳಾ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ, ಮಗುವಿನ ಅಳುವ ಶಬ್ದ ಕೇಳಿಸುತ್ತದೆ. ನಂತರ ಒಬ್ಬ ಮಹಿಳೆ ಓಡಿಹೋಗಿ ಕಲ್ಲುಗಳ ನಡುವೆ ಮಲಗಿದ್ದ ಮಗುವನ್ನು ಎತ್ತಿಕೊಳ್ಳುತ್ತಾಳೆ. ನಂತರ ಆ ಮಗುವನ್ನು ಸಮಾಧಾನಪಡಿಸಿ, ಕರೆತಂದು ಕಲ್ಲುಗಳ ನಡುವೆ ಕೂರಿಸಿ, ಮತ್ತೆ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸುತ್ತಾಳೆ. ಒಂದು ವರ್ಷ ಕೂಡ ತುಂಬದ ಆ ಹುಡುಗಿ ಕಲ್ಲುಗಳೊಂದಿಗೆ ಆಟವಾಡುತ್ತಿರುವುದು ಕಂಡುಬರುತ್ತದೆ. ಬಡತನ ಮತ್ತು ತಾಯ್ತನದ ನಡುವಿನ ಮಹಿಳೆಯ ಹೋರಾಟದ ವಿಡಿಯೋ ಬಳಕೆದಾರರನ್ನು ಭಾವುಕರನ್ನಾಗಿ ಮಾಡಿದೆ.

ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ


ಇನ್‌ಸ್ಟ್ರಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಪೋಸ್ಟ್ ಮಾಡಿದಾಗಿನಿಂದ, ಲಕ್ಷಾಂತರ ಜನರು ಅದನ್ನು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದಾರೆ. ಬಳಕೆದಾರರು ಸಹ ವಿಡಿಯೋಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರು ತಾಯಿಯ ಹೋರಾಟ ಮತ್ತು ಮನೋಭಾವವನ್ನು ವಂದಿಸುತ್ತಿರುವುದು ಕಂಡುಬರುತ್ತದೆ.

ಹಲವು ಮಂದಿ ಆ ಮಹಿಳೆಯ ಧೈರ್ಯವನ್ನು ಪ್ರಶಂಸಿಸಿದರೆ, ಮತ್ತೆ ಕೆಲವರು ಸರ್ಕಾರ ಇಂತಹ ಕುಟುಂಬಗಳಿಗೆ ನೆರವಿನ ಕೈ ನೀಡಬೇಕು ಎಂಬ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇತರರು ಈ ದೃಶ್ಯವನ್ನು ‘ಕಣ್ಣೀರು ತರಿಸುವ ಪರಿ’ ಎಂದು ಬಣ್ಣಿಸಿದ್ದಾರೆ.

ಬಳಕೆದಾರರು ಹೇಳಿದ್ದೇನು?
ವಿಡಿಯೋದ ಬಗ್ಗೆ ಬಳಕೆದಾರರು "ಹೃದಯದಿಂದ ನಮಸ್ಕಾರ. ಈ ಜಗತ್ತಿನ ಅತಿದೊಡ್ಡ ಯೋಧ ತಾಯಿ", “ಓ ದೇವರೇ, ಯಾರೂ ಇಂತಹ ದಿನವನ್ನು ನೋಡಬೇಕಾಗಿಲ್ಲ. ಇಂತಹ ಬಡತನ ಯಾರ ಜೀವನದಲ್ಲೂ ಬರಬಾರದು. ಇದನ್ನೇ ನಾನು ಬಯಸುತ್ತೇನೆ", "ಕನಿಷ್ಠ ಪಕ್ಷ ಆ ಹುಡುಗಿಯನ್ನು ನೆರಳಿನಲ್ಲಿ ಕೂರಿಸಬೇಕಿತ್ತು", "ಪೋಷಕರಿಗೆ ಮಾತ್ರ ಅವರ ಜೀವನ ಏನೆಂದು ತಿಳಿದಿದೆ. ಆದರೆ ನಮ್ಮ ಭಾರತದ ಭವಿಷ್ಯ ಹೀಗಾಗಬಾರದು. ತಾಯಿಯ ಹೋರಾಟ ವ್ಯರ್ಥವಾಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದೆಲ್ಲಾ ಬರೆದುಕೊಂಡಿದ್ದಾರೆ.

ಯುನಿಸೆಫ್ ವರದಿಯ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ 76% ಮಕ್ಕಳಿಗೆ ತೀವ್ರ ಬಿಸಿಲಿನಿಂದ ತೊಂದರೆ ಆಗುವ ಅಪಾಯವಿದೆ. ಬಡತನ, ದುರ್ಬಲತೆ ಮತ್ತು ಹವಾಮಾನ ಬದಲಾವಣೆ ಇಂತಹ ಮಕ್ಕಳಿಗೆ ಹೆಚ್ಚಿನ ಕಷ್ಟ ತರುತ್ತದೆ. ಈ ವಿಡಿಯೋವೊಂದು ಕೇವಲ ವೈರಲ್ ವಿಷಯವಲ್ಲ. ಇದು ಸಮಾಜದಲ್ಲಿನ ತೀವ್ರ ಅಸಮಾನತೆ ಮತ್ತು ಕಾರ್ಮಿಕ ವರ್ಗದ ಅಸಹಾಯಕ ಪರಿಸ್ಥಿತಿಯನ್ನೂ ಬಿಂಬಿಸುತ್ತದೆ. ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ "ನಾವು ಇಂತಹ ತಾಯಂದರಿಗೆ ಸೂಕ್ತ ಸಹಾಯ ನೀಡುತ್ತಿದ್ದೇವಾ?. ಬಳಕೆದಾರರೊಬ್ಬರು ಬರೆದುಕೊಂಡಂತೆ,ತಾಯಿ ಮಗುವನ್ನು ಕಾಪಾಡಬೇಕೋ, ಜೀವನೋಪಾಯಕ್ಕಾಗಿ ದುಡಿಯಬೇಕೋ ಎಂಬ ದ್ವಂದ್ವದಲ್ಲಿ ಬಿದ್ದು ತೀವ್ರ ನೋವು ಉಂಟಾಗುತ್ತದೆ. ಇಂತಹ ದೃಶ್ಯಗಳು ಕೇವಲ ವೈರಲ್ ಆಗದೆ, ಸರ್ಕಾರದ ಗಮನ ಸೆಳೆಯಲಿ ಎಂಬುದೇ ಎಲ್ಲರ ಆಶಯ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್