
ಬೆಂಗಳೂರು (ಜೂ.05): ನಮ್ಮ ದೇಶವನ್ನು ಸಂಪ್ರದಾಯಸ್ಥ ಮತ್ತು ಸುಸಂಸ್ಕೃತ ದೇಶವೆಂದು ನಾವು ಹೇಳುತ್ತೇವೆ. ಆದರೆ, ಪಾಶ್ಚಾತ್ಯ ದೇಶಗಳು ಹಾಗೂ ಸಿನಿಮಾದ ಪ್ರಭಾವಗಳಿಂದ ಇತ್ತೀಚಿನ ದಿನಗಳಲ್ಲಿ ಕೆಲವು ಯುವಕ-ಯುವತಿಯರು ತಮ್ಮ ಪ್ರೀತಿಯ ಗಡಿಮೀರಿ ಎಲ್ಲೆಂದರಲ್ಲಿ ರೊಮ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಇಲ್ಲೊಂದು ಜೋಡಿ ವಿದ್ಯಾರ್ಥಿಗಳು ಕಾಲೇಜು ಹಿಂಭಾಗದಲ್ಲಿಯೇ ಲಜ್ಜೆಗೆಟ್ಟು ರೊಮ್ಯಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿನ ಯುವಜನತೆ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಎಲ್ಲೆಂದರೆ ಮಿತಿಮೀರಿ ವರ್ತಿಸುವುದು ಸಾಮಾನ್ಯವಾಗಿದೆ. ಈ ಘಟನೆಗಳು ಇವರಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಸೌಜನ್ಯತೆಯ ಕೊರತೆಯನ್ನು ತೋರಿಸುತ್ತಿದೆ. ಇದೀಗ ಇದೇ ರೀತಿಯ ಘಟನೆ ಒಂದು ಜೋರಾಗಿ ವೈರಲ್ ಆಗಿದೆ. ಕಾಲೇಜು ಬಂಕ್ ಮಾಡಿದ ಪ್ರೇಮಿಗಳು ನಡು ರಸ್ತೆಯಲ್ಲೇ ರೊಮ್ಯಾಂಟಿಕ್ ಆಗಿ ಮುದ್ದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ (ಈಗಿನ ಎಕ್ಸ್) @manojsh28986262 ಎಂಬ ಖಾತೆಯಿಂದ ಜೂನ್ 2ರಂದು ಶೇರ್ ಮಾಡಲಾಗಿದೆ. ಕಾಲೇಜು ಹಿಂಬದಿಯಲ್ಲಿ ಇರುವ ಸಣ್ಣ ಗಲ್ಲಿಯೊಂದರಲ್ಲಿ ಯುವಕನೊಬ್ಬ ತನ್ನ ಗೆಳತಿಯನ್ನು ಅಪ್ಪಿಕೊಳ್ಳುತ್ತಾನೆ. ಆ ನಂತರ ಅವಳನ್ನು ಎತ್ತಿಕೊಂಡು ತಿರುಗಿಸುತ್ತಾನೆ. ಈ ದೃಶ್ಯವನ್ನು ಸ್ಥಳೀಯ ನಿವಾಸಿಗಳು ಕಟ್ಟಡದ ಮೇಲಿನಿಂದ ನಿಂತುಕೊಂಡು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಇನ್ನು ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವು ನೆಟ್ಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ಇವನಿಗೆ ಸಿಲಿಂಡರ್ ಎತ್ತು ಎಂದರೆ ಅಳುತ್ತಾನೆ, ಆದರೆ ಹುಡುಗಿಯನ್ನು ಹೇಗೆ ಎತ್ತುತ್ತಿದ್ದಾನೆ ನೋಡಿ!' ಎಂದು ವ್ಯಂಗ್ಯದ ಕಾಮೆಂಟ್ ಒಂದು ಬಂದಿದೆ. ಇನ್ನೊಬ್ಬರು ಇದು ಅವರ ವೈಯುಕ್ತಿಕ ವಿಷಯ, ನಿಮಗೇಕೆ? ಎಂದು ವಿವಾದಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ನೆಟ್ಟಿಗ 'ಈ ರೀತಿ ನಡೆಯೋದು ಭಾರತದಲ್ಲೇ ಸಾಧ್ಯ!' ಎಂದು ವ್ಯಂಗ್ಯವಾಡಿದ್ದಾರೆ.
ಈ ಘಟನೆಗಳು ಪ್ರೀತಿ ಮಾಡುವುದು ಹಾಗೂ ಮುದ್ದಾಡುವುದು ಖಾಸಗಿ ವಿಷಯವಾದರೂ, ಅದನ್ನು ಸಾರ್ವಜನಿಕವಾಗಿ ತೋರಿಸುವುದು ಸಾರ್ವಜನಿಕ ಜವಾಬ್ದಾರಿಯ ವ್ಯಾಪ್ತಿಗೆ ಬರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆಯು ಸಮಾಜದ ಇತರರಿಗೆ ಮುಜುಗರವನ್ನುಂಟು ಮಾಡುತ್ತದೆ. ಜೊತೆಗೆ, ಯುವಜನತೆಯ ಬುದ್ಧಿವಾದ ಮತ್ತು ಮೌಲ್ಯಗಳು ಕುಸಿಯುತ್ತಿವೆಯೇ ಎಂಬ ಪ್ರಶ್ನೆ ಬರುತ್ತದೆ. ಸೋಶಿಯಲ್ ಮೀಡಿಯಾ ಪ್ರಭಾವದಿಂದ ಇಂತಹ ಘಟನೆಗಳು ಕೆಲವೇ ಕ್ಷಣಗಳಲ್ಲಿ ದೇಶದಮಟ್ಟದ ಚರ್ಚೆಗೆ ಕಾರಣವಾಗುತ್ತಿವೆ. ಪ್ರೀತಿ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದ್ದರೂ, ಅದನ್ನು ಯಾವ ಸ್ಥಳದಲ್ಲಿ ಮತ್ತು ಯಾವ ರೀತಿಯಲ್ಲಿ ಮಾಡಬೇಕು ಎಂಬ ಅರಿವೂ ಅಗತ್ಯವಿದೆ ಎಂಬುದನ್ನು ಈ ಘಟನೆಯಿಂದ ತಿಳಿದುಬರುತ್ತದೆ.