ಮಾವಿನ ಹಣ್ಣು ತಿನ್ನಲು ಬೆಂಗಳೂರಿನ ಗೂಗಲ್​ ಕಚೇರಿಗೆ ಬಂದ ಟೆಕ್ಕಿ: ವಿಡಿಯೋ ಸಕತ್​ ವೈರಲ್​

Published : Jun 16, 2026, 10:07 PM IST
Mango Festival

ಸಾರಾಂಶ

ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಟೆಕ್ಕಿಯೊಬ್ಬರು, ತಮ್ಮ ಕಚೇರಿಯಲ್ಲಿ ನಡೆದ ಮಾವಿನ ಹಬ್ಬಕ್ಕಾಗಿ ಸಂಜೆ ಕಚೇರಿಗೆ ಬಂದಿದ್ದಾರೆ. ಈ ಉತ್ಸವದಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳು ಮತ್ತು ಮಾವಿನಿಂದ ಮಾಡಿದ ಸಿಹಿತಿಂಡಿಗಳನ್ನು ಸವಿದ ಅನುಭವವನ್ನು ಅವರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಇದು ಮಾವಿನ ಹಣ್ಣಿನ ಸೀಸನ್​. ಮಾವು ಎಂದರೆ ಬಹುತೇಕ ಎಲ್ಲರ ಬಾಯಲ್ಲಿಯೂ ನೀರು ಬರುತ್ತದೆ. ಇದರ ಬಗ್ಗೆ ಇದಾಗಲೇ ಥಹರೇವಾರಿ ವಿಡಿಯೋಗಳನ್ನು ಮಾಡಿ ಕಂಟೆಂಟ್​ ಕ್ರಿಯೇಟರ್ಸ್​ ಹಾಕುತ್ತಲೇ ಇರುತ್ತಾರೆ. ಆದರೆ, ಕೆಲವೇ ಕೆಲವು ವೈರಲ್​ ಆಗುವುದು ಉಂಟು. ಅದರಲ್ಲಿ ಒಂದು ಟೆಕ್ಕಿಯ ವಿಡಿಯೋ ಬೆಂಗಳೂರಿನ ಗೂಗಲ್​ ಕಚೇರಿಗೆ ಮಾವಿನ ಹಣ್ಣು ತಿನ್ನುವುದಕ್ಕಾಗಿ ಸಾಫ್ಟ್​ವೇರ್​ ಎಂಜಿನಿಯರ್​ ಒಬ್ಬಾಕೆ ಬಂದಿರುವ ವಿಡಿಯೋ ಇದಾಗಿದೆ.

ಬೆಂಗಳೂರಿನಲ್ಲಿ ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಗಜಲ್​ ಅರೋರಾ ಎನ್ನುವವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ನಡೆದ ಮಾವಿನ ಉತ್ಸವದ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಆಕೆ, ಸಂಜೆ 4 ಗಂಟೆಗೆ ಕಚೇರಿಗೆ ಬಂದು ಮಾವಿನ ಹಣ್ಣಿನ ಖಾದ್ಯಗಳನ್ನು ತಿನ್ನುವುದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಗೂಗಲ್ ಆಫೀಸ್‌ನಲ್ಲಿ ಮಾವಿನ ಉತ್ಸವ

ಈ ವಿಡಿಯೋವನ್ನು @unfilteredgazal ಹ್ಯಾಂಡಲ್ ಮೂಲಕ "ಗೂಗಲ್ ಆಫೀಸ್‌ನಲ್ಲಿ ಮಾವಿನ ಉತ್ಸವ" ಎಂಬ ಶೀರ್ಷಿಕೆಯೊಂದಿಗೆ Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದ ಆರಂಭದಲ್ಲಿ, ಮಹಿಳೆ ಸಂಜೆ ತನ್ನ ಕಚೇರಿಯಿಂದ ಹೊರಡುವುದನ್ನು ಕಾಣಬಹುದು. ಅಸಾಮಾನ್ಯ ಸಮಯದಲ್ಲಿ ಹೊರಡುವ ಕಾರಣವನ್ನು ವಿವರಿಸುತ್ತಾ, ಅವರು, "ಈಗ ಸಂಜೆ 4 ಗಂಟೆ, ಮತ್ತು ನಾನು ಈ ಸಮಯದಲ್ಲಿ ಹೊರಡುತ್ತಿದ್ದೇನೆ, ಏಕೆಂದರೆ ಇಂದು ಮಾವಿನ ಉತ್ಸವ, ಮತ್ತು ನಾನು ಅದನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ" ಎಂದು ಹೇಳುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಅವರು ತಮ್ಮ ಅನುಭವ ಮತ್ತು ಉದ್ಯೋಗಿಗಳಿಗೆ ಮಾಡಿದ ವ್ಯವಸ್ಥೆಗಳನ್ನು ವಿವರಿಸಿದರು.

ಎಷ್ಟಾದರೂ ತುಂಡು ತೆಗೆದುಕೊಳ್ಳಿ

"ಯಾರಾದರೂ ಎಷ್ಟು ಬೇಕಾದರೂ ತುಂಡುಗಳನ್ನು ತೆಗೆದುಕೊಳ್ಳಬಹುದು ಎಂದು ಮಾವಿನ ಹಣ್ಣು ತಿಂದಿದ್ದಾರೆ. ಅದರಿಂದ ವಾಪಸ್​ ಬಂದು ಮತ್ತೆ ವಿಡಿಯೋ ಮಾಡಿರುವ ಮಹಿಳೆ, "ನಾನು ಮಾವಿನ ಹಬ್ಬದಿಂದ ಹಿಂತಿರುಗಿದೆ, ಮತ್ತು ಅದು ಅದ್ಭುತವಾಗಿತ್ತು! ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಪ್ರತ್ಯೇಕ ಕೌಂಟರ್‌ಗಳಿದ್ದವು. ಬೇಕಾದಷ್ಟು ತುಂಡುಗಳನ್ನು ತೆಗೆದುಕೊಳ್ಳಿ, ಅಥವಾ ಇಡೀ ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳಿ. ಇಡೀ ಮಾವನ್ನು ತೆಗೆದುಕೊಂಡು, ತಿಂದು ಆನಂದಿಸಿ ಎಂದೆಲ್ಲಾ ಹೇಳಿದರು. ಈ ಹಬ್ಬವು ಕೇವಲ ತಾಜಾ ಮಾವಿನ ಹಣ್ಣುಗಳ ಬಗ್ಗೆ ಅಲ್ಲ. ಉದ್ಯೋಗಿಗಳು ಈ ಹಣ್ಣಿನಿಂದ ಮಾಡಿದ ವಿವಿಧ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಸಹ ಸವಿದರು. ಮಾವಿನ ಐಸ್ ಕ್ರೀಮ್, ಮಾವಿನ ಪೇಸ್ಟ್ರಿಗಳು, ಮಾವಿನ ಕೇಕ್, ಮಾವಿನ ಟಾಫಿ, ಮಾವಿನ ಫಲೂದ, ಮಾವು... ಅಬ್ಬಬ್ಬಾ ಎಲ್ಲವೂ ಅಲ್ಲಿತ್ತು ಎಂದಿದ್ದಾರೆ.

 

PREV
Read more Articles on
click me!

Recommended Stories

ಸೊಳ್ಳೆಗಳು ಪಕ್ಕದೋರನ್ನು ಬಿಟ್ಟು ನಿಮ್ಮನ್ನೇ ಹುಡುಕಿ ಕಚ್ಚೋದ್ಯಾಕೆ? ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ
Viral Video: ರೈಲಿನಲ್ಲಿ ಯುವತಿಯರ ವಿಡಿಯೋ ಮಾಡಿ ಅಶ್ಲೀಲ ಹಾಡು ಸೇರಿಸಿ ವೈರಲ್ ಮಾಡಿದ ಕಿಡಿಗೇಡಿ; ಮುಂದೇನಾಯ್ತು ನೋಡಿ