Viral Video: ರೈಲಿನಲ್ಲಿ ಯುವತಿಯರ ವಿಡಿಯೋ ಮಾಡಿ ಅಶ್ಲೀಲ ಹಾಡು ಸೇರಿಸಿ ವೈರಲ್ ಮಾಡಿದ ಕಿಡಿಗೇಡಿ; ಮುಂದೇನಾಯ್ತು ನೋಡಿ

Published : Jun 16, 2026, 08:41 PM IST
Indian Railway girls video record

ಸಾರಾಂಶ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವತಿಯರ ವಿಡಿಯೋವನ್ನು ಮೇಲಿನ ಬರ್ತ್‌ನಲ್ಲಿದ್ದ ಯುವಕನೊಬ್ಬ ರಹಸ್ಯವಾಗಿ ಚಿತ್ರೀಕರಿಸಿದ್ದಾನೆ. ನಂತರ ಆ ವಿಡಿಯೋಗೆ ಅಶ್ಲೀಲ ಹಾಡನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದು ಮಹಿಳಾ ಸುರಕ್ಷತೆಯ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳಾ ಸುರಕ್ಷತೆ ಬಗ್ಗೆ ಸರ್ಕಾರಗಳು ಭಾಷಣ ಬಿಗೀತಾನೇ ಇರ್ತವೆ. ಆದ್ರೆ, ದೇಶದಲ್ಲಿ ಮಹಿಳೆಯರಿಗೆ ಎಲ್ಲೂ ಸೇಫ್ಟಿ ಇಲ್ಲ ಅನ್ನೋದು ಪದೇ ಪದೇ ಸಾಬೀತಾಗ್ತಿದೆ. ಈಗ ಇಂಥದ್ದೇ ಒಂದು ಘಟನೆ ಮತ್ತೆ ಬೆಳಕಿಗೆ ಬಂದಿದೆ. ಈ ಘಟನೆಯನ್ನು ನೋಡಿದ ನೆಟ್ಟಿಗರು ಇದೊಂದು 'ಲೈಂಗಿಕ ದಾರಿದ್ರ್ಯ' ಎಂದು ಕಿಡಿಕಾರಿದ್ದಾರೆ.

ಟ್ರೇನ್‌ನಲ್ಲಿ ಕೆಳಗಿನ ಬರ್ತ್‌ನಲ್ಲಿ ಕೂತಿದ್ದ ಇಬ್ಬರು ಯುವತಿಯರ ವಿಡಿಯೋವನ್ನು, ಮೇಲಿನ ಬರ್ತ್‌ನಲ್ಲಿದ್ದ ಯುವಕನೊಬ್ಬ ಚಿತ್ರೀಕರಿಸಿದ್ದಾನೆ. ಈ ವಿಡಿಯೋಗೆ ಅಶ್ಲೀಲ ಹಾಡೊಂದನ್ನು ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸರ್ಕಾರದ ವಿರುದ್ಧವೂ ಟೀಕೆಗಳು ವ್ಯಕ್ತವಾಗಿವೆ.

ಮಹಿಳಾ ಪ್ರಯಾಣಿಕರ ವಿಡಿಯೋ ಮಾಡಿದ ಯುವಕ

ಮನೀಶ್ ಕುಮಾರ್ ಸಿಂಗ್ ಅನ್ನೋರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. "ನಿತೀಶ್ ಜಾತವ್ ಎಂಬಾತ ಯುವತಿಯರ ವಿಡಿಯೋವನ್ನು ಅನುಚಿತವಾಗಿ ರೆಕಾರ್ಡ್ ಮಾಡಿ, ಅಶ್ಲೀಲ ಹಾಡುಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾನೆ" ಎಂದು ಅವರು ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶ ಪೊಲೀಸರನ್ನು (UP Police) ಟ್ಯಾಗ್ ಮಾಡಿ, ಈ ಬಗ್ಗೆ ತನಿಖೆ ನಡೆಸಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಪೋಸ್ಟ್ ಬಳಿಕ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರೈಲ್ವೆ ಇಲಾಖೆ, ರೈಲ್ವೆ ಸಚಿವ ಮತ್ತು ಯುಪಿ ಪೊಲೀಸರನ್ನು ಟ್ಯಾಗ್ ಮಾಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಮಾಡಿದ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ವಿಡಿಯೋ ಶೇರ್ ಆಗಿ ಒಂದು ದಿನ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ನೆಟ್ಟಿಗರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ. ಈ ವಿಡಿಯೋವನ್ನು ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.

 

 

ಇಲ್ಲಿ ಕಾನೂನು ಇಲ್ವಾ?

ಈ ವಿಡಿಯೋ ಕ್ಲಿಪ್ ವೈರಲ್ ಆಗ್ತಿದ್ದಂತೆ, ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಅನೇಕರು ಪ್ರಶ್ನೆ ಎತ್ತಿದ್ದಾರೆ. "ಈ ಸಮಾಜದಲ್ಲಿ ನಮ್ಮ ಹೆಣ್ಣುಮಕ್ಕಳು ಹೇಗೆ ಬದುಕುತ್ತಾರೆ ಅನ್ನೋದೇ ಆಶ್ಚರ್ಯ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ರೈಲ್ವೆ ಸೇವಾ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಸಚಿವಾಲಯವನ್ನು ಟ್ಯಾಗ್ ಮಾಡಿ, ‘ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ನೀವು ಹೇಗೆ ಖಚಿತಪಡಿಸುತ್ತೀರಿ?’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ‘ಅಪರಾಧಿ ಇನ್ನೂ ಆರಾಮಾಗಿ ಓಡಾಡಿಕೊಂಡಿದ್ದಾನೆ. ಇಡೀ ವ್ಯವಸ್ಥೆಯೇ ಈಗ ದಯನೀಯ ಸ್ಥಿತಿಯಲ್ಲಿದೆ’ ಎಂದು ಮತ್ತೊಬ್ಬರು ತೀವ್ರವಾಗಿ ಟೀಕಿಸಿದ್ದಾರೆ.

PREV
Read more Articles on
click me!

Recommended Stories

ಮಲೆ ಮಹದೇಶ್ವರ ಬೆಟ್ಟದಲ್ಲಿ ಆಹಾರಕ್ಕಾಗಿ ಪ್ಲಾಸ್ಟಿಕ್ ತಿನ್ನುತ್ತಿರುವ ಗಜರಾಜ! ಜಿಂಕೆ, ಕೋತಿ, ಹಸು ಆಯ್ತು ಈಗ ಆನೆ!
Squirrel Viral Video: ತಿಂಡಿಗಾಗಿ ಬೇಡುತ್ತೆ ಮುದ್ದು ಅಳಿಲು, ಆದ್ರೆ ಇದೇ ಗ್ರಾಂಡ್ ಕ್ಯಾನ್ಯನ್‌ನ 'ಅಪಾಯಕಾರಿ ಜೀವಿ'!