
ಭಾರತ ಶಿಲ್ಪಕಲೆಗಳ ನಾಡು. ಇಲ್ಲಿನ ಸೌಂದರ್ಯ, ಕಲೆ ಅರಿಯಲು ಅನೇಕ ವಿದೇಶಿಗರು ಭಾರತಕ್ಕೆ ಬರ್ತಾರೆ. ಅದ್ರಲ್ಲಿ ಕೆಲವರು ಕೋಟ್ಯಾಂತರ ಭಾರತೀಯರ ಮನಸ್ಸು ಕದಿಯುತ್ತಾರೆ. ಭಾರತ ಪ್ರವಾಸಕ್ಕೆ ಬಂದಿದ್ದ ಆಸ್ಟ್ರೇಲಿಯನ್ ವ್ಲಾಗರ್ ಡಂಕನ್ ಮೆಕ್ನಾಟ್ ಕೂಡ ಇವರಲ್ಲಿ ಒಬ್ಬರು. ಡಂಕನ್ ಸೃಷ್ಟಿಸಿದ ಸಣ್ಣ ಕ್ಷಣವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂತೋಷದ ಕಥೆಯಾಗಿ ಹರಿದಾಡ್ತಿದೆ. ಮಹಾರಾಷ್ಟ್ರದ ಎಲ್ಲೋರಾ ಗುಹೆಗಳಲ್ಲಿರುವ ಕೈಲಾಸ ದೇವಾಲಯಕ್ಕೆ ಭೇಟಿ ನೀಡಿದ್ದ ಡಂಕನ್ ಮೆಕ್‌ನಾಟ್ ಕೂಗಿದ ಎರಡು ಘೋಷಣೆ ಭಾರತೀಯರ ಗಮನ ಸೆಳೆದಿದೆ.
ವ್ಲಾಗರ್ ಡಂಕನ್ ಮೆಕ್ ನಾಟ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ನಾನು ಭಾರತದಲ್ಲಿದ್ದೇನೆ ಅಂತ ತಮ್ಮ ಮಾತು ಶುರು ಮಾಡ್ತಾರೆ. ನಂತ್ರ ದೇವಾಲಯದ ಕಡೆ ಮುಖ ಮಾಡಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯನ್ನು ಎರಡು ಬಾರಿ ಕೂಗ್ತಾರೆ. ಡಂಕನ್ ಮೆಕ್ ನಾಟ್, ಭಾರತ್ ಮಾತಾ ಕಿ ಎನ್ನುತ್ತಿದ್ದಂತೆ ದೇವಸ್ಥಾನದ ಹೊರಗಿದ್ದ ಎಲ್ಲರೂ ಜೈ ಅನ್ನೋದನ್ನು ಕೇಳಬಹುದು. ಅಷ್ಟೇ ಅಲ್ಲ ಡಂಕನ್ ಜೈ ಶ್ರೀ ರಾಮ್ ಎಂದು ಕೂಗುತ್ತಾರೆ. ಕೆಳಗಿದ್ದ ಪ್ರವಾಸಿಗರು ಇದಕ್ಕೂ ಪ್ರತಿಕ್ರಿಯೆ ನೀಡ್ತಾರೆ. ಡಂಕನ್ ಭಾರತದ ಆಧಾರ್ ಕಾರ್ಡ್ ಪಡೆಯಲು ನಾನು ಸಿದ್ಧವೇ ಎನ್ನುವ ಶೀರ್ಷಿಕೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಮದ್ವೆ ಮುಗಿಯೋತನಕ ತಡ್ಕೊಳ್ರಪ್ಪಾ: ಮಂಟಪದಲ್ಲೇ ಕಿಸ್ಸಿಂಗ್ ಶುರು- ಪುರೋಹಿತರಿಂದ ಬ್ರೇಕ್! ವಿಡಿಯೋ ವೈರಲ್
ವಿದೇಶಿಯೊಬ್ಬ ಭಾರತೀಯ ಸಂಸ್ಕೃತಿಯನ್ನು ಗೌರವದಿಂದ ಸ್ವೀಕರಿಸಿ, ಸ್ಥಳೀಯರೊಂದಿಗೆ ಒಂದಾಗಿ ಘೋಷಣೆ ಕೂಗಿದ್ದು, ಅಲ್ಲಿನ ವಾತಾವರಣವನ್ನೇ ಬದಲಿಸಿತ್ತು. ಜನರ ಮುಖಗಳಲ್ಲಿ ನಗು, ಕಣ್ಣುಗಳಲ್ಲಿ ಉತ್ಸಾಹ ಸ್ಪಷ್ಟವಾಗಿ ಕಾಣ್ತಿತ್ತು. ಅನೇಕರು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ, ಅನೇಕರು ಭಾಷೆ, ದೇಶ, ಸಂಸ್ಕೃತಿ ಬೇರೆ ಆದರೂ ಭಾವನೆ ಒಂದೇ,ಭಾರತೀಯ ಸಂಸ್ಕೃತಿಯ ಸೌಂದರ್ಯ ಇದಲ್ಲವೇ? ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ಭಾರತದ ಆತಿಥ್ಯ ಮತ್ತು ಒಗ್ಗಟ್ಟಿನ ಸಂಕೇತ ಎಂದು ಹೊಗಳಿದ್ದಾರೆ. ಡಂಕನ್ ಅವರಿಗೆ ಆಧಾರ್ ಕಾರ್ಡ್ ನೀಡಬಹುದು, ನೀವು ಆಧಾರ್ ಕಾರ್ಡ್ ಪಡೆಯಿರಿ ಅಂತ ಜನ ಕಮೆಂಟ್ ಮಾಡಿದ್ದಾರೆ.
ಡಂಕನ್ ಭೇಟಿ ನೀಡಿದ ಎಲ್ಲೋರಾ ಗುಹೆಗಳಲ್ಲಿರುವ ಕೈಲಾಸ ದೇವಾಲಯವು ಒಂದೇ ಬಂಡೆಯಿಂದ ಕೆತ್ತಿದ ವಿಶ್ವದ ಅತಿದೊಡ್ಡ ಏಕಶಿಲೆಯ ದೇವಾಲಯವಾಗಿದೆ. ಗಮನಾರ್ಹವಾದ ಕರಕುಶಲತೆ, ಬೃಹತ್ ರಚನೆ ಮತ್ತು ತಡೆರಹಿತ ನಿರ್ಮಾಣ ತಂತ್ರಗಳಿಂದ ನಿರ್ಮಿಸಲಾದ ಈ ದೇವಾಲಯವು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಉತ್ತಮ ಪ್ರವಾಸಿ ತಾಣವಾಗಿದೆ.
651 ಕ್ವಿಂಟಾಲ್ ಪ್ರಸಾದ ತಯಾರಿಸೋದು ಕಷ್ಟಕಷ್ಟ, ಮಿಕ್ಸಿಂಗ್ ಗೆ ಜೆಸಿಬಿ ಬಳಸಿದ ದೇವಸ್ಥಾನ
ಭಾರತೀಯರ ಅಭಿಮಾನ ಗಳಿಸಲು ಅನೇಕ ವಿದೇಶಿ ವ್ಲಾಗರ್‌ಗಳು ಭಾರತಕ್ಕೆ ಬರ್ತಾರೆ. ಕೆಲ ವ್ಲಾಗರ್ಸ್ ತಮ್ಮ ವರ್ತನೆಯಿಂದ ಗಮನ ಸೆಳೆಯುತ್ತಾರೆ. ಅಂಥ ವ್ಲಾಗರ್ಸ್ ತಮ್ಮ ದೇಶಕ್ಕೆ ವಾಪಸ್ ಆದ್ರೂ ಭಾರತೀಯರು ಅವರನ್ನು ನೆನಪಿಸಿಕೊಳ್ತಾರೆ. ಈಗ ಡಂಕನ್ ಕೂಡ ಈ ಸಾಲಿಗೆ ಸೇರ್ತಿದ್ದಾರೆ. ವ್ಲಾಗರ್ ಡಂಕನ್ ಮೆಕ್‌ನಾಟ್ (@duncan.mcnaught) ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 170,000 ಫಾಲೋವರ್ಸ್ ಹೊಂದಿದ್ದಾರೆ. 15 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಈ ವೀಡಿಯೊವನ್ನು 535,000 ಕ್ಕೂ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದಾರೆ. ಅವರ ರೀಲ್‌ನಲ್ಲಿ ವೀಕ್ಷಣೆ ಸಂಖ್ಯೆ ಈಗಾಗಲೇ 5.2 ಮಿಲಿಯನ್ ಮೀರಿದೆ. ರೀಲ್‌ನಲ್ಲಿ 5 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.