ಮೋದಿ ಭಾಷಣ ಲಿಪ್‌ಸಿಂಕ್ ಮಾಡಿದ ಆಸ್ಟ್ರೇಲಿಯಾ ಕಂಟೆಂಟ್ ಕ್ರಿಯೇಟರ್, ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ

Published : Jul 12, 2026, 02:34 PM IST
Australian Influencer Lip Sync of PM Modi Speech

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆಸ್ಟ್ರೇಲಿಯಾ ಭೇಟಿ ವೇಳೆ ಭಾರತೀಯ ಸಮುದಾಯವನ್ನುದ್ದೇಶಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕನ್ನು ಆಸಿಸ್ ಕಂಟೆಂಟ್ ಕ್ರಿಯೇಟರ್ ಲಿಪ್ ಸಿಂಕ್ ಮಾಡಿ ಪ್ರಸ್ತುತ ಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಸಿಡ್ನಿ (ಜು.12) ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ತೆರಳಿದರೂ ಅಲ್ಲಿಯ ಭಾರತೀಯ ಸಮುದಾಯವನ್ನು ಭೇಟಿಯಾಗುತ್ತಾರೆ. ಅವರ ಜೊತೆ ಕೆಲ ಹೊತ್ತು ಕಳೆಯುತ್ತಾರೆ. ಈ ಮೂಲಕ ದೇಶ ವಿದೇಶಗಳಲ್ಲಿ ಭಾರತೀಯರ ಜೊತೆ ಮೋದಿ ಉತ್ತಮ ಸಂಬಂಧ ಬೆಸೆಯುತ್ತಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸ ಇದಕ್ಕೆ ಹೊರತಾಗಿಲ್ಲ. ವಿಶೇಷ ಅಂದರೆ ಪ್ರಧಾನಿ ಮೋದಿ ಕುರಿತು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅಷ್ಟೇ ಕ್ರೇಝ್ ಇದೆ. ಭಾರತದಲ್ಲಿ ಮೋದಿ ಭಾಷಣ, ವಿಡಿಯೋಗಳು ವೈರಲ್ ಆಗುವುದು ಮಾತ್ರವಲ್ಲ, ಇದೀಗ ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್ ಮೋದಿ ಭಾಷಣಕ್ಕೆ ಲಿಪ್ ಸಿಂಕ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.

ಮೋದಿ ವಾಯ್ಸ್‌ಗೆ ಲಿಪ್ ಸಿಂಕ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೋದಿ ಮಾಡಿದ ಭಾಷಣದ ತುಣುಕು ತೆಗೆದು ವಾಯ್ಸ್‌ಗೆ ಆಸ್ಟ್ರೇಲಿಯಾ ಕಂಟೆಂಟ್ ಕ್ರಿಯೇಟರ್ ಲಿಪ್ ಸಿಂಕ್ ಮಾಡಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಆಸ್ಟ್ರೇಲಿಯಾದಲ್ಲಿ ಮನೆಗಳಲ್ಲಿ ಇಲ್ಲಿನ ಸ್ಥಳೀಯ ಹಾಲು ಬಳಸುತ್ತಾರೆ. ಆದರೆ ಅದರಿಂದ ಚಹಾ ಮಾಡಿದಾಗ ಭಾರತೀಯ ಟಚ್ ಸಿಗಲಿದೆ. ಆಸ್ಟ್ರೇಲಿಯಾ ಹಲವು ತರಕಾರಿ ಸೇರಿದಂತೆ ಇತರ ವಸ್ತುಗಳಿಗೆ ಭಾರತೀಯ ಮಸಾಲೆ ಸೇರಿದಾಗ ತಡ್ಕಾ ಸ್ವಾದ ಬರಲಿದೆ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು. ಮೋದಿಯ ಧ್ವನಿಯನ್ನು ತೆಗೆದುಕೊಂಡ ಆಸ್ಟ್ರೇಲಿಯಾ ಜೋಸ್ಪೀಕ್‌ಹಿಂದೆ ಖಾತೆ ನಿರ್ವಹಿಸುತ್ತಿರುವ ಕಂಟೆಂಟ್ ಕ್ರಿಯೇಟರ್ ತಾನು ಅದೇ ರೀತಿ ಲಿಪ್ ಸಿಂಕ್ ಮಾಡಿ ವಿವರಣೆ ನೀಡಿದ್ದಾರೆ.

ಸೂಪರ್ ಮಾರ್ಕೆಟ್‌ನಲ್ಲಿ ನಿಂತು ಆಸ್ಟ್ರೇಲಿಯಾದ ಸ್ಥಳೀಯ ಹಾಲನ್ನು ಹಿಡಿದು ಮೋದಿ ಮಾತುಗಳನ್ನು ಅದೇ ರೀತಿ ಲಿಪ್ ಸಿಂಕ್ ಮಾಡಿ ಹೇಳಿದ್ದಾನೆ. ಇನ್ನು ತರಕಾರಿ, ಭಾರತೀಯ ಮಸಾಲೆ, ತಡ್ಕಾ ಎಲ್ಲವನ್ನು ಲಿಪ್ ಸಿಂಕ್ ಮಾಡಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಆಸೀಸ್ ಕೆಂಟೆಂಟ್ ಕ್ರಿಯೇಟರ್ ವಿಡಿಯೋ ಭಾರತದಲ್ಲಿ ಭಾರಿ ವೈರಲ್ ಆಗಿದೆ.

ಭಾರತದ ರೇಷನ್ ಕಾರ್ಡ್‌ಗೆ ಸಾಹಸ

ಈ ವಿಡಿಯೋ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್ ಭಾರತದ ರೇಷನ್ ಕಾರ್ಡ್‌ಗಾಗಿ ಕಸರತ್ತು ಮಾಡುತ್ತಿದ್ದಾನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಹಲವರು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಚಾಯತ್ ಸೀರಿಸ್‌ನ ಜನಪ್ರಿಯ ಡೈಲಾಗ್ ಸುನ್ತೆ ಹೋ ನಾ ಬಿನೋದ್ ವಿಡಿಯೋ ಕ್ಲಿಪಿಂಗ್ ಪ್ರತಿಕ್ರಿಯೆ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ 6 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಈ ವಿಡಿಯೋ ಮಿಲಿಯನ್ ವೀವ್ಸ್ ದಾಟಿದೆ. ಆಸಿಸ್ ಕಂಟೆಂಟ್ ಕ್ರಿಯೇಟರ್ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 

 

PREV
Read more Articles on
click me!

Recommended Stories

ಕಾಲಿನ ಕಸವಾದ ಪ್ರೀತಿ: ಪ್ರೇಯಸಿ ಕಾಲಿಗೆ ಬಿದ್ದು 'ಬಿಟ್ಟು ಹೋಗಬೇಡ' ಎಂದು ಅಂಗಲಾಚಿದ ಯುವಕ; ವಿಡಿಯೋ ವೈರಲ್!
ಗಣಿತದಲ್ಲಿ ಫೇಲ್‌, ಕಾಲೇಜು ಡ್ರಾಪ್‌ಔಟ್‌; ಬಂಡಿಯಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುತ್ತಿದ್ದ ಯುವಕ ಇಂದು ₹20,000 ಕೋಟಿ ಒಡೆಯ