'ಅಯೋಧ್ಯೆ ತೀರ್ಪು: ವಿಜೃಂಭಿಸೋದು ಬೇಡ, ವಿರೋಧಿಸೋದೂ ಬೇಡ'

Published : Nov 09, 2019, 02:09 PM ISTUpdated : Nov 09, 2019, 02:52 PM IST
'ಅಯೋಧ್ಯೆ ತೀರ್ಪು: ವಿಜೃಂಭಿಸೋದು ಬೇಡ, ವಿರೋಧಿಸೋದೂ ಬೇಡ'

ಸಾರಾಂಶ

ಭಾರತದ ಸೌಹಾರ್ದತೆಯನ್ನು ಎತ್ತಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನೀಡಿದೆ| ತೀರ್ಪು ನೀಡಿದನ್ನು ವಿಜೃಂಭಣೆ ಮಾಡಬಾರದು| ವಿರೋಧಿಸೋದು ಕೂಡ ಬೇಡ| ತೀರ್ಪಿಗೆ ಅಸಮಾಧಾನ ಇದ್ದರೆ, ಮೇಲ್ಮನವಿಗೆ ಅವಕಾಶವಿದೆ| ಸುನ್ನಿ ಬೋರ್ಡ್ ಗೆ ಪರ್ಯಾಯ ಜಮೀನು ನೀಡಿದ್ದು ಸರಿಯಾದ ಕ್ರಮ| ಈ‌ ವಿಚಾರವಾಗಿ ಎಲ್ಲ ಕೋಮಿನವರು ಸೌಹಾರ್ದತೆ ಕಾಯ್ದುಕೊಳ್ಳಬೇಕಿದೆ|

ವಿಜಯಪುರ(ನ.9): ಸುಪ್ರೀಂ ಕೋರ್ಟ್ ನೀಡಿರುವ ಅಯೋಧ್ಯೆ ತೀರ್ಪನ್ನು ಸ್ವಾಗತಿಸುತ್ತೇನೆ. ರಾಮಜನ್ಮ ಭೂಮಿ ವಿವಾದದ ಕೇಂದ್ರ ಬಿಂದುವಾಗಿತ್ತು, ತೀರ್ಪಿನಿಂದ ನಿಟ್ಟುಸಿರು ಬಿಟ್ಟಂಗಾಗಿದೆ. ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿ ತೀರ್ಪು ಬಂದಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ. 

ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐವರು ನ್ಯಾಯಾಧೀಶರಿವರು...

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಭಾರತದ ಸೌಹಾರ್ದತೆಯನ್ನು ಎತ್ತಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನೀಡಿದೆ. ತೀರ್ಪು ನೀಡಿದನ್ನು ವಿಜೃಂಭಣೆ ಮಾಡಬಾರದು ಹಾಗೆಯೇ ವಿರೋಧಿಸೋದು ಕೂಡ ಬೇಡ. ತೀರ್ಪಿಗೆ ಅಸಮಾಧಾನ ಇದ್ದರೆ, ಮೇಲ್ಮನವಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ. 

ಕೊನೆಗೂ ರಾಮನಿಗೆ ಸೇರಿತು ಅಯೋಧ್ಯೆ; ಸಿನಿ ತಾರೆಯರು ಸ್ವಾಗತಿಸಿದ್ದು ಹೀಗೆ!

ಸುನ್ನಿ ಬೋರ್ಡ್ ಗೆ ಪರ್ಯಾಯ ಜಮೀನು ನೀಡಿದ್ದು ಸರಿಯಾದ ಕ್ರಮವಾಗಿದೆ. ಈ‌ ವಿಚಾರವಾಗಿ ಎಲ್ಲ ಕೋಮಿನವರು ಸೌಹಾರ್ದತೆ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಸುಪ್ರೀಂ ಕೋರ್ಟ್ ತೀರ್ಪು ಅಲ್ಲಾಹನು ಬಯಸಿದ ತೀರ್ಪು: ಮುಸ್ಲಿಂ ಮುಖಂಡ

ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ  ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೋಚಿಸಿದೆ. ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟವಾಗಿ ನಿರ್ದೇಶಿಸಿದೆ.
 

PREV
click me!

Recommended Stories

ಬ್ರೇಕ್‌ಫಾಸ್ಟ್ ರಾಜಕೀಯ.. ಸಿಎಂ, ಡಿಸಿಎಂಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ: ಸಚಿವ ಶಿವಾನಂದ ಪಾಟೀಲ
ವಿಜಯಪುರ: ಟ್ಯೂಷನ್ ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್!