ಬಬಲೇಶ್ವರ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಅನುಷ್ಠಾನ: ಎಂ.ಬಿ.ಪಾಟೀಲ

By Web DeskFirst Published Nov 7, 2019, 11:18 AM IST
Highlights

ಇಡೀ ಕ್ಷೇತ್ರದಲ್ಲಿ ಬಹುತೇಕ ಹಳ್ಳಗಳಿಗೆ ಸರಣಿ ಬಾಂದಾರ, ಚೆಕ್‌ ಡ್ಯಾಂ ನಿರ್ಮಿಸುವ ಮೂಲಕ ಸಂಪೂರ್ಣ ಹಸಿರುಮಯ ಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ ಎಂದ ಶಾಸಕ ಎಂ.ಬಿ.ಪಾಟೀಲ|ಜಿಲ್ಲೆಯ 14 ಲಕ್ಷ ಎಕರೆ ಭೂಮಿ ನೀರಾವರಿಗೆ ಒಳಪಡಿಸಲಾಗಿದ್ದು, 200 ಕೆರೆಗಳನ್ನು ವಿವಿಧ ಯೋಜನೆಗಳ ಮೂಲಕ ಶಾಶ್ವತವಾಗಿ ತುಂಬಿಸಲಾಗುವುದು| ಈ ಮೂಲಕ ನಮ್ಮ ಜಿಲ್ಲೆಗೆ ಅಂಟಿರುವ ಬರದ ಜಿಲ್ಲೆ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೋಗಲಾಡಿಸುವುದು ನಮ್ಮ ಉದ್ದೇಶವಾಗಿದೆ ಎಂದ ಶಾಸಕ| 

ವಿಜಯಪುರ/ತಿಕೋಟಾ[ನ.7]: ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ವಿವಿಧ ನೀರಾವರಿ ಯೋಜನೆಗಳಿಂದ ಇಲ್ಲಿನ ಎಲ್ಲ ಭೂಪ್ರದೇಶ ನೀರಾವರಿಗೆ ಒಳಪಡಿಸಲಾಗಿದ್ದಲ್ಲದೆ, ಹನಿ ನೀರಿಗೂ ಮಹತ್ವ ನೀಡಿ ಸಣ್ಣ ನೀರಾವರಿ ಇಲಾಖೆಯಿಂದ 13 ಕೆರೆಗಳು, 40 ಬಾಂದಾರ, ಬೃಹತ್ ನೀರಾವರಿ ಇಲಾಖೆಯಿಂದ 40 ಬಾಂದಾರ, 3 ಬ್ರಿಡ್ಜ್-ಕಂ-ಬಾಂದಾರ ನಿರ್ಮಿಸಿದ್ದು, ಇಡೀ ಕ್ಷೇತ್ರದಲ್ಲಿ ಬಹುತೇಕ ಹಳ್ಳಗಳಿಗೆ ಸರಣಿ ಬಾಂದಾರ, ಚೆಕ್‌ ಡ್ಯಾಂ ನಿರ್ಮಿಸುವ ಮೂಲಕ ಸಂಪೂರ್ಣ ಹಸಿರುಮಯ ಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ ಎಂದು ಶಾಸಕ ಎಂ.ಬಿ.ಪಾಟೀಲ ಸ್ಮರಿಸಿದರು.

ತಿಕೋಟಾ ಪಟ್ಟಣದಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬಾಬು ಜಗಜೀವನರಾಮ್‌ ಸಮುದಾಯ ಭವನ, ಪ್ರಸಿದ್ಧ ಸೂಫಿ ಸಂತರ ಯಾತ್ರಾ ಸ್ಥಳ ಹಾಜಿ ಮಸ್ತಾನ ದರ್ಗಾದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ವೆಚ್ಚದ ಸಮುದಾಯ ಭವನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಿರುವ 2 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟಿಸಿ ನಂತರ ಕನಕದಾಸ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ 14 ಲಕ್ಷ ಎಕರೆ ಭೂಮಿ ನೀರಾವರಿಗೆ ಒಳಪಡಿಸಲಾಗಿದ್ದು, 200 ಕೆರೆಗಳನ್ನು ವಿವಿಧ ಯೋಜನೆಗಳ ಮೂಲಕ ಶಾಶ್ವತವಾಗಿ ತುಂಬಿಸಲಾಗುವುದು. ಈ ಮೂಲಕ ನಮ್ಮ ಜಿಲ್ಲೆಗೆ ಅಂಟಿರುವ ಬರದ ಜಿಲ್ಲೆ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೋಗಲಾಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಸಿದ್ದೇಶ್ವರ ಮಹಾಸ್ವಾಮೀಜಿಯವರು ಕಳೆದ 50 ವರ್ಷಗಳಿಂದ ಸ್ವಚ್ಛತೆ ಬಗ್ಗೆ ನಮಗೆ ಸದಾ ತಿಳಿಸುತ್ತಲೇ ಬಂದಿದ್ದಾರೆ. ನಿಮ್ಮ ಗ್ರಾಮ ಸ್ವಚ್ಛವಾಗಿಟ್ಟುಕೊಳ್ಳಿ. ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನಿಮ್ಮ ಮನಸ್ಸು ಶುದ್ಧವಾಗಿರಲಿ ಎಂದಿದ್ದಾರೆ. ಆದರೆ ನಾವು ಅದಾವೂದನ್ನು ಪಾಲನೆ ಮಾಡುತ್ತಿಲ್ಲ. ಕೇವಲ ಸರ್ಕಾರಿ ಸ್ವಚ್ಛತಾ ಅಭಿಯಾನದಲ್ಲಿ ಪೊರಕೆ ಹಿಡಿದು ಫೋಟೋ ತೆಗೆಸಿಕೊಳ್ಳಲು ಮಾತ್ರ ಸೀಮಿತವಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ಭೂಮಿ ಲಕ್ಷಾಂತರ ವರ್ಷಗಳಿಂದ ಬಳಕೆಯಲ್ಲಿದೆ. ಮುಂದಿನ ಲಕ್ಷಾಂತರ ವರ್ಷಗಳುಇದ್ದು ಹಿಂದಿನಂತೆಯೇ ಸುಂದರವಾಗಿ ಇರಬೇಕು. ನಮ್ಮ ಕಾಲದಲ್ಲಿ ಇದನ್ನು ಹಾನಿಗೊಳಿಸುವುದು ಬೇಡ ಎಂದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಶಿವಯೋಗಿ ನೇದಲಗಿ, ಆರೋಗ್ಯ ಸ್ಥಾಯಿ ಸಮಿತಿಅಧ್ಯಕ್ಷ ಕಲ್ಲಪ್ಪ ಕೊಡಬಾಗಿ, ಜಿಲ್ಲಾ ಆರೋಗ್ಯಅಧಿಕಾರಿ ಡಾ.ರಾಜಕುಮಾರ ಯರಗಲ್,ತಹಸೀಲ್ದಾರ ಎಸ್.ಎಂ. ಮ್ಯಾಗೇರಿ, ಎಸ್.ಎಚ್. ಅರಕೇರಿ, ಆರೋಗ್ಯ ಅಧಿಕಾರಿ ಎಸ್.ಕೆ. ಬಿರಾದಾರ, ಆಯುಷ ವೈದ್ಯಾಧಿಕಾರಿಡಾ. ರಾಜೇಶ್ವರಿ ಚಿತ್ತಾಪುರ, ಎಇಇ ಎಂ.ಜೆ.ಜತ್ತಿ, ಆಸ್ಪತ್ರೆ ಕಟ್ಟಡ ಗುತ್ತಿಗೆದಾರ ನಾನಾಗೌಡಬೇನೂರ, ನಿರ್ಮಿತಿ ಕೇಂದ್ರದ ಅರವಿಂದ ಧನಗೊಂಡ ಸೇರಿದಂತೆ ವಿವಿಧ ಇಲಾಖೆಅಧಿಕಾರಿಗಳು ಉಪಸ್ಥಿತರಿದ್ದರು. ಶಿವಬಸಯ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ತಿಕೋಟಾ ಪಟ್ಟಣದ ಗಣ್ಯರಾದ ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮಾಜಿ ಉಪಾಧ್ಯಕ್ಷತಮ್ಮಣ್ಣ ಹಂಗರಗಿ, ರಾಮು ದೇಸಾಯಿ, ಬಸಯ್ಯ ವಿಭೂತಿ, ಪ್ರಭಾವತಿ ನಾಟಿಕಾರ, ವಿಜಯಲಕ್ಷ್ಮಿ ಫರನಾಕರ, ಭಾಗೀರಥಿ ತೇಲಿ, ಸದಾಶಿವ ಪೂಜಾರಿ, ಸತ್ಯಪ್ಪ ಬ್ಯಾಳಿ, ಚಂದ್ರಶೇಖರಬಸರಿಗಿಡದ, ಮೈಮು ಮುಜಾವರ, ಯಾಕೂಬ್ ಜತ್ತಿ, ಗೈಬುಲಾಲ ಮುಜಾವರ,ಅಲ್ತಾಫ್ ಬಾಗವಾನ, ಸುಲೇಮಾನ ಮುಜಾವರ, ಹಾಜಿಲಾಲ ನಗಾರ್ಚಿ ಮತ್ತಿತರರು ಉಪಸ್ಥಿತರಿದ್ದರು.
 

click me!