ಮುರುಘಾ ಶ್ರೀಗಳ ವಿರುದ್ಧ ಆರೋಪಿಸಿದ್ದು ತಪ್ಪು: ಉಮೇಶ್ ಕತ್ತಿ

By Suvarna News  |  First Published Aug 29, 2022, 10:49 AM IST

ಸಮಾಜವನ್ನು ಸುಧಾರಿಸುವ ಕಾರ್ಯ ಮಾಡುತ್ತಿರುವ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸುತ್ತಿರುುದು ತಪ್ಪೆಂದು ಸಚಿವ ಉಮೇಶ್ ಕತ್ತಿ ಹೇಳಿದ್ದು, ಬೆಳಗಾವಿಯಲ್ಲಿ ಚಿರತೆ ಸಿಗುವುದಾದರೆ ಇಂದೇ ರಾಜೀನಾಮೆ ನೀಡುತ್ತೇವೆಂದೂ ಹೇಳಿದ್ದಾರೆ. 


ವಿಜಯಪುರ (ಆ.29): ಬಾಲಕಿಯರ ಮೇಲೆ ಮುರುಘಾ ಶ್ರೀಗಳ ಲೈಂಗಿಕ ಕಿರುಕುಳ ಆರೋಪ ವಿಚಾರವಾಗಿ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ ನೀಡಿದ್ದು, ಮುರುಘಾ ಸ್ವಾಮೀಜಿಗಳ ಪರ ಬ್ಯಾಟ್ ಬೀಸಿದ್ದಾರೆ. ಸಂತ್ರಸ್ತರೆನ್ನಲಾದ ಬಾಲಕಿಯರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.  ಅದಕ್ಕಿಂತ ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲ. ಮರುಘಾ ಶ್ರೀಗಳ ವಿರುದ್ದ ಎಫ್ಐಆರ್ ಆಗಲ್ಲ. ಎಫ್ಐಆರ್ ಆದರೆ ನೋಡೋನಾ ಎಂದ ಸಚಿಚ ಉಮೇಶ ಕತ್ತಿ. ಇದು ಮಠದ ಒಳ ಜಗಳ. ಮಾಜಿ ಶಾಸಕ ಬಸವರಾಜ ಹಾಗೂ ಸ್ವಾಮೀಜಿಗಳ‌ ಜಗಳ. ಇದೀಗ ಅದು ಎಲ್ಲೆಲ್ಲೋ ಹೋಗಿದೆ. ನ್ಯಾಯಾಲಯ ಏನು‌ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣವೆಂದ ಸಚಿವ ಕತ್ತಿ.

ಸ್ವಾಮೀಜಿಗಳ ಮೇಲೆ ಆರೋಪ ಮಾಡಿದ್ದು ತಪ್ಪು. ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಸಮಾಜ ತಿದ್ದಬೇಕೆಂಬ ಅವರ ಪ್ರಯತ್ನಗಳಿವೆ. ಅಂಥ ಪ್ರಯತ್ನಗಳಿಗೆ‌ ಇಂಥ ಸಲ್ಲದ ಆರೋಪ (Allegations) ಮಾಡಿ,ತೊಂದರೆಗೆ ಸಿಲುಕಿದಬಾರದು. ಸಮಾಜವನ್ನು ಬೇರೆ ದಿಕ್ಕಿನಲ್ಲಿ ಒಯ್ಯಬಾರದು, ಎಂದಿದ್ದಾರೆ ಕತ್ತಿ. 

ಮುರುಘಾ ಮಠ ಶ್ರೀ ಪೋಕ್ಸೋ ಕೇಸ್, ಭಾನುವಾರ ಏನೆಲ್ಲಾ ಬೆಳವಣಿಗೆಗಳು ನಡೆದವು, ಇಲ್ಲಿದೆ ಮಾಹಿತಿ

ಬೆಳಗಾವಿಯಲ್ಲಿ ಚಿರತೆ ಕಾಟ ಹಾಗೂ ಅದನ್ನು ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ, ಈ ಬೆನ್ನಲ್ಲೇ ಕತ್ತಿ ರಜೀನಾಮೆ ನೀಡಲು ಒತ್ತಾಯ ಕೇಳಿ ಬರುತ್ತಿರುವ ಹಿನ್ನೆಲಯಲ್ಲಿ ಪ್ರತಿಕ್ರಿಯೆ ನೀಡಿರುವ ಕತ್ತಿ, ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ‌‌ ನಾಳೆಯೇ ರಾಜೀನಾಮೆ (Resignation) ನೀಡುತ್ತೇನೆ. ಚಿರತೆ ಸಿಕ್ಕರೆ ನಂದೇನು ತಕರಾರು ಇಲ್ಲ.ಚಿರತೆ ಹಿಡಿಯಲು‌ ಉತ್ತರ ಕರ್ನಾಟಕ ‌ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು‌ ತಂದಿದ್ದೇವೆ. ಇಲ್ಲಿಯವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲಾ, ಚಿರತೆ ಇನ್ನೂ ಸಿಕ್ಕಿಲ್ಲ. ಎರಡು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ಅದು ಬೆಟ್ಟಕ್ಕೆ ಹೋಗಿರಬಹುದು  ಎಂದು ಅಂದಾಜಿದಲಾಗಿದೆ. ಗೋಲ್ಫ್ ಕೋರ್ಟ್ ಸುತ್ತಮುತ್ತ ತಿರುಗಾಡುತ್ತಿದೆ ಎನ್ನಲಾಗಿದೆ. ಆದರೆ ಮೂರು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ನಿಮಗೆ ಕಂಡರೆ ನಿಮ್ಮನ್ನು‌ ಹಿಡಿಯಲು ಹಚ್ಚೋಣವೆಂದು ಮಾಧ್ಯಮದವರಿಗೇ ತಿರುಗೇಟು ನೀಡಿದ್ದಾರೆ ಕತ್ತಿ. 

ಪತ್ತೆಯಾಗದ ಚಾಲಾಕಿ ಚಿರತೆ ಬಗ್ಗೆ ಟ್ರೋಲ್: ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಸಮೇತ ಬೆಳಗಾವಿ ರಾಜಕಾರಣಕ್ಕೂ ಎಂಟ್ರಿ!

ಈ ಮಧ್ಯೆ ಬೆಳಗಾವಿಯಲ್ಲಿ ಚೆರತೆ ಶೋಧ (Operation) ಕಾರ್ಯ 25ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಶೋಧಕಾರ್ಯ ಮುಂದುವರಿದಿದ್ದು, 6ನೇ ದಿನವೂ ಗಜಪಡೆಗಳಿಂದ ಕೋಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕೋಂಬಿಂಗ್ ವೇಳೆ ಪತ್ತೆಯಾದ ಹೆಜ್ಜೆ ಗುರುತು ಸುತ್ತಮುತ್ತ ಟ್ರ್ಯಾಪ್ ಕ್ಯಾಮೆರಾ, ಬೋನುಗಳ ಅಳವಡಿಸಲಾಗಿದೆ. 8 ಸಾಮಾನ್ಯ ಬೋನು, 1 ದೊಡ್ಡದಾದ ಬೋನು, 23 ಟ್ರ್ಯಾಪ್ ಕ್ಯಾಮೆರಾಗಳ ಅಳವಡಿಸಲಾಗಿದೆ. ಚಿರತೆಗೆ ಡಿಸ್ಟರ್ಬ್ ಮಾಡದೇ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಪ್ಲಾನ್ಪ ಮಾಡಿದೆ. ಪದೇಪದೇ ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ, 250 ಎಕರೆ ಪ್ರದೇಶದಲ್ಲಿ ಓಡಾಡುತ್ತಿದೆ. ಗಾಲ್ಫ್ ಮೈದಾನದ ಸುತ್ತ ಅರಣ್ಯ ಸಿಬ್ಬಂದಿ ಕಾವಲಿದೆ.

ಸರ್ಕಾರಿ ಕಾರು ಇಳಿದು ಬೊಲೆರೋ ವಾಹನ ಏರಿದ ಸಚಿವ ಉಮೇಶ್ ಕತ್ತಿ
ಬೆಂಗಾವಲು ವಾಹನವಿಲ್ಲದೇ ಬೊಲೆರೋ ವಾಹನದಲ್ಲಿ ತೆರಳಿದ ಕತ್ತಿ. ಚಿಕ್ಕರೂಗಿ ಗ್ರಾಮದ ಮುಖ್ಯ ಕಾಲುವೆ ವೀಕ್ಷಣೆಗೆ ತೆರಳುವ ವೇಳೆ ಘಟನೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಕಾಲುವೆ ಪಕ್ಕದಲ್ಲಿ ಕಚ್ಚಾ ರಸ್ತೆ ಇದ್ದು, ಸರಕಾರಿ ಕಾರು ಬಿಟ್ಟು ಬೊಲೆರೋದಲ್ಲಿ ತೆರಳಿದರು. ಸಚಿವ ಉಮೇಶ್ ಕತ್ತಿಗೆ ಶಾಸಕರಾದ ಸೋಮನಗೌಡ ಪಾಟೀಲ್ ಸಾಸನೂರ, ರಮೇಶ್ ಭೂಸನೂರ ಸಾಥ್. ಜಿಲ್ಲಾಧಿಕಾರಿ,ಎಸ್ಪಿ , ಜಿಪಂ ಸಿಇಒ ಸರಕಾರಿ ಕಾರು ಬಿಟ್ಟು, ಪೊಲೀಸ್ ಜೀಪಿನಲ್ಲಿ ಪ್ರಯಾಣಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದ ಘಟನೆ. 

Latest Videos

click me!