ಭಾರೀ ಮಳೆಯಿಂದ ಇಂಡಿ ತಾಲೂಕಿನಲ್ಲಿ ಮರಿಹಳ್ಳದ ನೀರು ನುಗ್ಗಿದ ಪರಿಣಾಮ ತಾಂಬಾ-ಕೆಂಗನಾಳ ರಸ್ತೆ ಸಂಪೂರ್ಣ ಜಲಾವೃತ| ತಾಂಬಾ-ಕೆಂಗನಾಳ ಮದ್ಯೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್| ತಾಂಬಾದಿಂದ ಕೆಂಗನಾಳ, ಶಿರಕನಳ್ಳಿ, ಹೊನ್ನಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಸರ್ಕಾರಿ ಬಸ್ಗಳೂ ಸಹ ಸ್ಥಗಿತವಾಗಿವೆ| ಇದರಿಂದ ಪ್ರಯಾಣಿಕರ ಪರದಾಟ| ಹಳ್ಳಕ್ಕೆ ಸೇತುವೆ ನಿರ್ಮಿಸಬೇಕೆಂದು ಸರ್ಕಾರಕ್ಕೆ ಸ್ಥಳಿಯರ ಆಗ್ರಹ|
ವಿಜಯಪುರ(ಅ.19): ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಇಂಡಿ ತಾಲೂಕಿನಲ್ಲಿ ಮರಿಹಳ್ಳದ ನೀರು ನುಗ್ಗಿದ ಪರಿಣಾಮ ತಾಂಬಾ-ಕೆಂಗನಾಳ ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
undefined
ಇದರಿಂದ ತಾಂಬಾ-ಕೆಂಗನಾಳ ಮದ್ಯೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿರುವುದರಿಂದ ತಾಂಬಾದಿಂದ ಕೆಂಗನಾಳ, ಶಿರಕನಳ್ಳಿ, ಹೊನ್ನಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಸರ್ಕಾರಿ ಬಸ್ಗಳೂ ಸಹ ಸ್ಥಗಿತವಾಗಿವೆ. ಇದರಿಂದ ಈ ಭಾಗದ ಪ್ರಯಾಣಿಕರು ಪರದಾಡುವಂತಾಗಿದೆ. ಹಳ್ಳದ ನೀರು ಬಂದಾಗಲೊಮ್ಮೆ ತಗ್ಗು ಪ್ರದೇಶದಲ್ಲಿರುವ ರಸ್ತೆ ಮುಳುಗಡೆ ಆಗುತ್ತದೆ. ಹೀಗಾಗಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
'ಇಂಡಿ ನೂತನ ಜಿಲ್ಲೆ ಮಾಡದಿದ್ರೆ ಉಗ್ರ ಹೋರಾಟ'
ಬೆಳಿಗ್ಗೆಯಿಂದ ಮಳೆ ಕಡಿಮೆಯಾದ ಪರಿಣಾಮ ಇಂದು ಸಂಜೆ ವೇಳೆಗೆ ನೀರು ಕಡಿಮೆ ಆಗುವ ಸಾಧ್ಯತೆ.