ಅಂಬೇ​ಡ್ಕರ ಪುತ್ಥಳಿ ಧ್ವಂಸ ಖಂಡಿಸಿ ಸಿಂದಗಿ ಬಂದ್‌ ಸಂಪೂರ್ಣ ಯಶಸ್ವಿ

By Web Desk  |  First Published Oct 19, 2019, 8:48 AM IST

ನಗರದಲ್ಲಿ ವ್ಯಾಪಾರ ಸ್ಥಗಿತ, ಶಾಲಾ ಕಾಲೇ​ಜು​ಗ​ಳಿ​ಗೆ ರಜೆ, ಅಂಗಡಿ ಮುಂಗಟ್ಟು ಬಂದ್‌| ಆರೋಪಿಗಳನ್ನು ಕೂಡಲೇ ಬಂಧನಕ್ಕೆ ಆಗ್ರಹ| ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಪ್ರಕರಣಕ್ಕೆ ಸಂಬಂಧಿ​ಸಿ​ದಂತೆ ಕೌಂಟರ್‌ ಕೇಸ್‌ ಹಿಂಪಡೆಯಬೇಕು| ದೂರದ ಊರುಗಳಿಗೆ ಪ್ರಯಾಣಿಸುವ ಪ್ರಾಯಾಣಿಕರು ಬಸ್ಸಿಲ್ಲದೆ ಪರಿತಪಿಸಿದರು| ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಯನ್ನು ಮುಂದೂ​ಡಿಕೆ| ವ್ಯಾಪಾರ ವಹಿವಾಟು ಸ್ಥಗಿ​ತ |


ಸಿಂದಗಿ(ಅ.19): ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಇತ್ತೀಚಿಗೆ ಡಾ.ಅಂಬೇಡ್ಕರ ಪುತ್ಥಳಿ​ಯನ್ನು ಧ್ವಂಸಗೊಳಿಸಿದ್ದನ್ನು ಖಂಡಿ​ಸಿದ ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿದ್ದ ಸಿಂದಗಿ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ.

ಕಕ್ಕಳಮೇಲಿಯಲ್ಲಿ ಅಂಬೇಡ್ಕರ್‌ ಪುತ್ಥಳಿ ಧ್ವಂಸ ಮಾಡಿ ದಲಿತ ಯುವಕರನ್ನು ಥಳಿಸಿ ಅವಾಚ್ಯವಾಗಿ ನಿಂದಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಪ್ರಕರಣಕ್ಕೆ ಸಂಬಂಧಿ​ಸಿ​ದಂತೆ ಸಿಂದಗಿ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಕೌಂಟರ್‌ ಕೇಸ್‌ ಹಿಂಪಡೆಯಬೇಕು ಎಂದು ಪ್ರತಿ​ಭ​ಟ​ನಾ​ಕಾ​ರರು ಆಗ್ರ​ಹಿ​ಸಿದರು.

Latest Videos

undefined

ಸಿಂದಗಿ ಬಂದ್‌ ಹಿನ್ನಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ಸಂಚಾರ ಸ್ಥಗಿತವಾಗಿತ್ತು. ಹೀಗಾಗಿ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಾಯಾಣಿಕರು ಬಸ್ಸಿಲ್ಲದೆ ಪರಿತಪಿಸಿದರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸ​ಲಾ​ಗಿತ್ತು. ಶುಕ್ರವಾರ ನಡೆಯಬೇಕಿದ್ದ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಯನ್ನು ಮುಂದೂ​ಡ​ಲಾ​ಯಿತು. ವ್ಯಾಪಾರ ವಹಿವಾಟು ಸ್ಥಗಿ​ಗೊಂಡಿತ್ತು. ತರಕಾರಿ, ಹಣ್ಣು ಹಂಪಲು ಸೇರಿದಂತೆ ಇತರೆ ರಸ್ತೆ ಬದಿಯ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಔಷಧಿ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಮುಕ್ತ​ವಾದ ಅವಕಾಶವಿದ್ದರೂ ಸಹಿತ ಬಹುತೇಕ ಔಷಧಿ ಅಂಗಡಿ ಮತ್ತು ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿ​ರು​ವುದೂ ಕಂಡು ಬಂದಿತು.

ಈ ವೇಳೆ ಮಾತನಾಡಿದ ಜೆಡಿಎಸ್‌ ಮುಖಂಡ ಅಶೋಕ ಮನಗೂಳಿ, ಸಂವಿ​ಧಾನ ಶಿಲ್ಪಿ ಅಂಬೇಡ್ಕರ ಪುತ್ಥಳಿ ಧ್ವಂಸಗೊಳಿಸಿದ್ದು ಅಪರಾಧ. ಅಂತವರಿಗೆ ಶಿಕ್ಷೆಯಾ​ಗಲಿದೆ ಎಂದರು. ಶಾಸಕ ಎಂ.ಸಿ.ಮನಗೂಳಿ ಅವರು ತಹಸೀಲ್ದಾ​ರ್‌, ಡಿ​ವೈ​ಎಸ್ಪಿ ಮತ್ತು ಅನೇಕ ಅಧಿಕಾರಿಗಳನ್ನು ಕರೆದು ಸಭೆ ನಡೆಸುತ್ತೇನೆ ಎಂದು ಆದೇಶ ಹೊರಡಿಸಿದ್ದಾರೆ ಎಂದರು. ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು.

ದಲಿತ ಮುಖಂಡರಾದ ರಮೇಶ ಆಸಂಗಿ, ರಾಜಶೇಖರ ಕೂಚಬಾಳ, ಜಿಪಂ ಸದಸ್ಯ ಮರೆಪ್ಪ ಬಡಿಗೇರ, ವೈ.ಸಿ. ಮಯೂರ, ಶರಣು ಸಿಂಧೆ, ಚಂದ್ರಕಾಂತ ಸಿಂಗೆ, ಶ್ರೀಕಾಂತ ಸೋಮಜ್ಯಾಳ, ಮಲ್ಲೇಶಿ ಕೆರೂರ, ಪರಶುರಾಮ ಕಾಂಬಳೆ, ದಸ್ತಗೀರ ಮುಲ್ಲಾ, ಸಾಯಬಣ್ಣ ಪುರದಾಳ, ಹುಯೋಗಿ ತಳ್ಳೊಳ್ಳಿ, ಸಾಯಬಣ್ಣ ದೇವರಮನಿ, ಪ್ರಧಾನಿ ಮೂಲಿಮನಿ, ಲಕ್ಷ್ಮಣ ಬನ್ನೆಟ್ಟಿ, ರಾವುತ ತಳಕೇರಿ, ಗೋಪಿ ಬಡಿಗೇರ, ಅಶೋಕ ಸುಲ್ಪಿ, ಶ್ರೀನಿವಾಸ ಓಲೇಕಾರ, ಧರ್ಮರಾಜ ಯಂಟಮಾನ, ಚಂದ್ರಗೌಡ ಪಾಟೀಲ, ರಾಜು ಭಾಸಗಿ, ರವಿ ಹೋಳಿ, ಏಕನಾಥ ದ್ವಾಸ್ಯಾಳ, ಪ್ರವೀಣ ಸುಲ್ಪಿ, ಭೀಮು ಬಂಕಲಗಿ, ನರಸಪ್ಪ ಬಜಂತ್ರಿ, ಮೋಹನ ಬಜಂತ್ರಿ, ಸಂತೋಷ ಬಜಂತ್ರಿ, ಅರ್ಜುನ ವಡ್ಡರ, ಸಿದ್ದು ವಡ್ಡರ, ರಾಜು ಗುಬ್ಬೇವಾಡ, ಶಿವಾಜಿ ಮೇಟಗಾರ ಅನೇಕರು ಮಾತನಾಡಿದರು.

1 ಡಿವೈಎ​ಸ್ಪಿ, 4 ಸಿಪಿಐ, 6 ಪಿಎಸೈ, 70 ಪೊಲೀಸ್‌ ಪೇದೆ ಸೇರಿದಂತೆ 2 ಡಿಆರ್‌ ವಾಹನ ಸಿಂದಗಿಗೆ ಬಂದು ಬಿಗಿ ಭದ್ರತೆ ಕಲ್ಪಿ​ಸಿ​ದ್ದರು. ಆಗಮಿಸಿದ್ದರು.
 

click me!