ಅಣ್ಣನ ನೋಡಲು ಓಡೋಡಿ ಬಂದ ತಂಗಿ.. ಸ್ಕೂಲ್‌ ಬಸ್ಸಿಗೆ ಸಿಲುಕಿ 3 ವರ್ಷದ ಕಂದಮ್ಮ ಸಾವು

Published : Aug 10, 2026, 04:47 PM ISTUpdated : Aug 10, 2026, 06:05 PM IST
vijayapura child died

ಸಾರಾಂಶ

ನಗರದ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅಣ್ಣನನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಮನೆಯಿಂದ ಹೊರಬಂದ 3 ವರ್ಷದ ಪುಟಾಣಿ ಬಾಲಕಿಯೊಬ್ಬಳು ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ವಿಜಯಪುರ: ನಗರದ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅಣ್ಣನನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಮನೆಯಿಂದ ಹೊರಬಂದ 3 ವರ್ಷದ ಪುಟಾಣಿ ಬಾಲಕಿಯೊಬ್ಬಳು ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆಯ ವಿವರ

ವಿಜಯಪುರ ನಗರದ ಕೈಗಾರಿಕಾ ಪ್ರದೇಶದ ಪದಂ ನಗರದಲ್ಲಿ ದುರ್ಘಟನೆ ನಡೆದಿದೆ. ಮೃತ ಬಾಲಕಿಯನ್ನು 3 ವರ್ಷದ ಶೀರ್ಷಾ ಸುಹಾಸ ವಾಡಿ ಎಂದು ಗುರುತಿಸಲಾಗಿದೆ. ಬಾಲಕಿಯ ಅಣ್ಣ ಸಾಯಿ ಸುಹಾಸ ವಾಡಿ ಖಾಸಗಿ ಶಾಲಾ ಬಸ್ಸಿನಲ್ಲಿ ಶಾಲೆಯಿಂದ ಮನೆಗೆ ಮರಳಿದ್ದನು.

ಬಸ್ ಪದಂ ನಗರಕ್ಕೆ ಬಂದಾಗ ಅಣ್ಣ ಬಸ್ಸಿನಿಂದ ಕೆಳಗಡೆ ಇಳಿದಿದ್ದಾನೆ. ಇದನ್ನು ಕಂಡ ಪುಟ್ಟ ತಂಗಿ ಶೀರ್ಷಾ, ಅಣ್ಣನನ್ನು ನೋಡಲು ಸಂಭ್ರಮದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಈ ವೇಳೆ ದುರಾದೃಷ್ಟವಶಾತ್ ಬಾಲಕಿ ಬಸ್ಸಿನ ಮುಂಬದಿ ಚಕ್ರದ ಕೆಳಗೆ ಸಿಲುಕಿದ್ದಾಳೆ. ಬಸ್ ಚಲಿಸಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯತನದಿಂದ ಬಸ್ ಚಾಲನೆ ಮಾಡಿದ ಆರೋಪದ ಮೇಲೆ ಖಾಸಗಿ ಶಾಲಾ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುದ್ದಿನ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪದಂ ನಗರದಲ್ಲಿ ಶೋಕ ಮಡುಗಟ್ಟಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಉತ್ತರಕನ್ನಡದಲ್ಲಿ ಉಲ್ಟಾ, ವಿಜಯಪುರದಲ್ಲಿ ಅರ್ಧಕ್ಕೆ ಹಾರಾಡಿದ ರಾಷ್ಟ್ರಧ್ವಜ!
ವಿಜಯಪುರದ ದೇವರಹಿಪ್ಪರಗಿಯಲ್ಲಿ ₹453 ಕೋಟಿಯ ಎಥನಾಲ್ ಪ್ಲ್ಯಾಂಟ್‌ ನಿರ್ಮಾಣ ಯೋಜನೆಗೆ ಸರ್ಕಾರ ಒಪ್ಪಿಗೆ!