
ಈ ದೃಶ್ಯಗಳೆಲ್ಲಾ ನೋಡೋಕೇ ಇಷ್ಟು ಭಯಾನಕವಾಗಿದ್ರೆ, ಇನ್ನು ಅನುಭವಿಸೋರ ಪಾಲಿಗೆ ಅದಿನ್ನೆಷ್ಟು ಭೀಭತ್ಸವಾಗಿರ್ಬೋದು ಅಂತ ನೀವೇ ಕಲ್ಪನೆ ಮಾಡ್ಕೊಳಿ.. ಬರೋಬ್ಬರಿ 10 ದಿನಗಳಿಂದಲೂ, ಅಮೆರಿಕಾದ ಪ್ರಖ್ಯಾತ ನಗರ ಧಗಧಗ ಅಂತ ಹೊತ್ತಿಯುರಿಯುತ್ತಿದೆ.
ಈ ದೃಶ್ಯಗಳೆಲ್ಲಾ ನೋಡೋಕೇ ಇಷ್ಟು ಭಯಾನಕವಾಗಿದ್ರೆ, ಇನ್ನು ಅನುಭವಿಸೋರ ಪಾಲಿಗೆ ಅದಿನ್ನೆಷ್ಟು ಭೀಭತ್ಸವಾಗಿರ್ಬೋದು ಅಂತ ನೀವೇ ಕಲ್ಪನೆ ಮಾಡ್ಕೊಳಿ.. ಬರೋಬ್ಬರಿ 10 ದಿನಗಳಿಂದಲೂ, ಅಮೆರಿಕಾದ ಪ್ರಖ್ಯಾತ ನಗರ ಧಗಧಗ ಅಂತ ಹೊತ್ತಿಯುರಿಯುತ್ತಿದೆ. ಅದರ ತಾಪ ಕಡಿಮೆ ಆಯ್ತು ಅಂದ್ಕೊಳ್ತಾ ಇದ್ದ ಹಾಗೇ, ಈಗ ತೂಫಾನ್ ನುಗ್ಗಿಬಂದಿದೆ.. ಈ ಅಗ್ನಿವಾಯು ಕಂಟಕದ ಹಿಂದಿರೋ ಅಸಲಿ ಕತೆ ಏನು? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಅಮೆರಿಕಾದಲ್ಲಿ ಭೀಕರ ಭೀಭತ್ಸ ವಾತಾವರಣ ಸೃಷ್ಟಿಸಿದೆ, ಈ ಪಂಚದಿಶೆಯ ಕಾಳ್ಗಿಚ್ಚು.. ಇದನ್ನ ಹತೋಟಿಗೆ ತರೋಕೆ ಹರಸಾಹಸ ಮಾಡಿದ್ರೂ, ಇನ್ನೂ ಯಾವ ಪ್ರಯೋಜನವೂ ಆಗಿಲ್ಲ.
ಆದ್ರೆ, ಇದರ ತೀವ್ರತೆ ಕಟ್ಟಿ ಹಾಕೋಕೆ ಅಮೆರಿಕಾ ಮಾಡ್ತಾ ಇರೋದೇನು ಗೊತ್ತಾ? ಅಮೆರಿಕಾದಲ್ಲಿ ಅಗ್ನಿ ತಾಂಡವ ನಿಂತಿಲ್ಲ.. ಕಾಳ್ಗಿಚ್ಚಿನ ಭೀಕರತೆಯನ್ನ ಹತೋಟಿಗೆ ತರೋದಿಕ್ಕೆ ಒಂದಷ್ಟು ಪ್ರಯತ್ನಗಳಂತೂ ಅಲ್ಲಿ ಆಗ್ತಿವೆ. ಹಾಗಿದ್ರೆ, ಬೆಂಕಿ ಸೃಷ್ಟಿಸಿರುವ ಭಯಾನಕ ವಾತಾವರಣವನ್ನ ಕಂಟ್ರೋಲ್ ಮಾಡೋದಿಕ್ಕೆ ಅಲ್ಲಿ ಏನೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದೆ. ಪ್ರವಾಹಗಳಿಗಿಂತ ಈ ಕಾಳ್ಗಿಚ್ಚು ಬಹಳ ಡೇಂಜರ್. ಅದು ಹೇಗೆ ಅಂತ ಡೀಟೈಲ್ ಆಗಿ ತೋರಿಸ್ತೀವಿ. ನೀರು, ಅಗ್ನಿ..ಶಾಂತವಾಗಿದ್ರೆ ಮನುಕುಲಕ್ಕೆ ಒಳ್ಳೇದು.. ಒಂದು ವೇಳೆ ಅವುಗಳು ಕೆರಳಿ ಬಿಟ್ರೆ ಆಗೋದು ಸರ್ವನಾಶ. ಅದ್ರಲ್ಲಿಯೂ ಪ್ರವಾಹದ ರೂಪದಲ್ಲಿ ಅಪ್ಪಳಿಸೋ ನೀರಿಗಿಂತ, ಕಾಳ್ಗಿಚ್ಚಿನ ರೂಪದಲ್ಲಿ ಕಂಟಕವಾಗೋ ಬೆಂಕಿಯೇ ಬಹಳ ಡೇಂಜರ್.