ಕಾಳ್ಗಿಚ್ಚಿನಿಂದ ತತ್ತರಿಸಿರುವ ಅಮೆರಿಕಾಕ್ಕೆ ಹೊಸ ಅಸ್ತ್ರ? ಕಾಳ್ಗಿಚ್ಚಿಗೂ ಆ ಆಯುಧಕ್ಕೂ ಎತ್ತಣಿಂದೆತ್ತ ಸಂಬಂಧ?

ಕಾಳ್ಗಿಚ್ಚಿನಿಂದ ತತ್ತರಿಸಿರುವ ಅಮೆರಿಕಾಕ್ಕೆ ಹೊಸ ಅಸ್ತ್ರ? ಕಾಳ್ಗಿಚ್ಚಿಗೂ ಆ ಆಯುಧಕ್ಕೂ ಎತ್ತಣಿಂದೆತ್ತ ಸಂಬಂಧ?

Published : Jan 28, 2025, 05:06 PM IST

ಅಮೆರಿಕದಲ್ಲಿ ಭೀಕರ ಕಾಳ್ಗಿಚ್ಚು ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಅಮೆರಿಕಾಗೆ ವರದಾನವಾಗಬಲ್ಲ ಒಂದು ಆಯುಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಲಾಸ್ ಎಂಜಲಿಸ್, ಕ್ಯಾಲಿಫೋರ್ನಿಯಾ ಭಾಗದಲ್ಲಿ ಹೊತ್ತಿಕೊಂಡಿದ್ದ ಬೆಂಕಿ, ನೋಡನೋಡುತ್ತಲೇ ಅಮೆರಿಕಾದ ಪಾಲಿಗೆ ಶಾಪವಾಗಿಬಿಟ್ಟಿತ್ತು. ಇವತ್ತಿಗೂ ಈ ಶಾಪದಿಂದ ಅಲ್ಲಿನ ಜನಕ್ಕೆ ಮುಕ್ತಿ ಸಿಕ್ಕಿಲ್ಲ. ಸಿಗೋ ಲಕ್ಷಣವೂ ಕಾಣ್ತಾ ಇಲ್ಲ. ಅದರ ಮಧ್ಯೆಯೇ ಅಮೆರಿಕಾದ ಪಾಲಿಗೆ ಒಂದು ವರದಾನ ಸಿಗೋ ಲಕ್ಷಣಗಳು ಗೋಚರಿಸ್ತಾ ಇದಾವೆ.  ಆ ವರ ಯಾವುದು ಗೊತ್ತಾ? ಅದು ಒಲಿದು ಬರ್ತಾ ಇರೋದು ಎಲ್ಲಿಂದ ಗೊತ್ತಾ?
 
ನಾವು ಇವತ್ತು ಇದೇ ಪ್ರಶ್ನೆಗೆ ಉತ್ತರ ಕೊಡ್ತಾ ಇದೀವಿ. ಜಗತ್ತಿನ ಮೂಲೆ ಮೂಲೆಗೂ ವೆಪನ್ಸ್ ಕೊಟ್ಟು, ಯುದ್ಧ ಮಾಡೋಕೋ, ಅಥವಾ ಯುದ್ಧ ಮಾಡದ ಹಾಗೆ ತಡೆಯೋಕೆ ಅಮೆರಿಕಾ ಉತ್ಸುಕವಾಗಿದೆ. ಹಾಗಾಗಿನೇ, ತನ್ನೆಲ್ಲಾ ಟೆಕ್ನಾಲಜಿನೂ ವ್ಯಯ ಮಾಡಿ, ಅಂಥಾ ಆಯುಧಗಳನ್ನ ತಯಾರಿಸತ್ತೆ. ಆದ್ರೆ ಇನ್ನೊಂದು ದೇಶ ಇದೆ. ಅದೂ ಕೂಡ ಆಯುಧಗಳನ್ನ ತಯಾರಿಸುತ್ತೆ. ಈಗ ಅಂಥಧ್ದೇ ಒಂದು ಆಯುಧವನ್ನ ಅಮೆರಿಕಾಗೂ ಕೊಡೋಕೆ ಸಿದ್ಧವಿದೆ. ಅದು ಅಮೆರಿಕಾ ಪಾಲಿಗೆ ಬರೀ ಆಯುಧ ಅಲ್ಲ. ವರದಾನ. ಆ ಆಯುಧ ಯಾವ್ದು? ಅದರಿಂದ ಅಮೆರಿಕಾಗೆ ಏನು ಲಾಭ? ಈ ಕಾಳ್ಗಿಚ್ಚಿಗೂ ಆ ಆಯುಧಕ್ಕೂ ಎತ್ತಣಿಂದೆತ್ತ ಸಂಬಂಧ? ಅದೆಲ್ಲದರ ಕಂಪ್ಲೀಟ್  ಸ್ಟೋರಿ ಇಲ್ಲಿದೆ.

ಹೆಚ್ಚೂಕಮ್ಮಿ ಎರಡು ವಾರಗಳೇ ಕಳೆದು, ಮೂರನೇ ವಾರಕ್ಕೆ ಕಾಲಿಟ್ಟಿದೆ ಅಮೆರಿಕಾದ ಕಾಳ್ಗಿಚ್ಚು. ಆದ್ರೆ, ಅದು ಈ ತನಕ ಕಂಟ್ರೋಲಿಗೆ ಸಿಕ್ಕಂತೆ ಕಾಣ್ತಾ ಇಲ್ಲ. ಕೈಗೆ ಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡಿದ ಬಳಿವೇ, ಆ ಪ್ರಳಯಾಗ್ನಿ ತಣ್ಣಗಾಗೋ ನಿರ್ಧಾರ ಕೈಗೊಂಡಿದೆ ಅನ್ಸುತ್ತೆ.. ಅಷ್ಟ್ರಲ್ಲಿ ಅರ್ಧ ಲಾಸ್ ಏಂಜಲಿಸ್ ಹಾಗೂ ಕ್ಯಾಲಿಫೋರ್ನಿಯಾ ಭಾಗ ಪೂರ್ತಿ ಆಹುತಿಯಾಗಿರುತ್ತೋ ಏನೋ. 

18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ
18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
00:54Video: ಅಮೆರಿಕಾದ ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡು ಇರಾನ್‌ನಿಂದ ಆಕ್ರಮಣಕಾರಿ ದಾಳಿ
17:31ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ?
Read more